ಶಬರಿಮಲೆ ಹೋರಾಟದಲ್ಲಿ ಬಿಜೆಪಿ ಸಂಸದರು ಭಾಗಿ

Published : Oct 12, 2018, 10:04 AM ISTUpdated : Oct 12, 2018, 11:50 AM IST
ಶಬರಿಮಲೆ ಹೋರಾಟದಲ್ಲಿ ಬಿಜೆಪಿ ಸಂಸದರು ಭಾಗಿ

ಸಾರಾಂಶ

ಶಬರಿಮಲೆ ಉಳಿಸಿ ಅಭಿಯಾನದಲ್ಲಿ ಪ್ರತಾಪ್ ಸಿಂಹ, ಮೋಹನ್ ಭಾಗಿ | ಶಬರಿಮಲೆ ಹೋರಾಟಕ್ಕೆ ಬಿಜೆಪಿ ಸಂಸದರು 

ಬೆಂಗಳೂರು (ಅ. 12): ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಕೇರಳದಲ್ಲಿ ‘ಶಬರಿಮಲೆ ಉಳಿಸಿ’ ಹೆಸರಿನಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ರಾಜ್ಯದ ಇಬ್ಬರು ಬಿಜೆಪಿ ಸಂಸದರು ಶುಕ್ರವಾರ ಪಾಲ್ಗೊಳ್ಳಲಿದ್ದಾರೆ.

‘ಸೇವ್ ಶಬರಿಮಲೆ’ ಹೆಸರಿನಲ್ಲಿ ಪಾಂಡಳಮ್‌ನಂದ ಶಬರಿಮಲೆವರೆಗೆ ಕೇರಳದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪಾದಯಾತ್ರೆ ಹಮ್ಮಿಕೊಂಡಿವೆ. ಈ ಹೋರಾಟವನ್ನು ಬೆಂಬಲಿಸಿರುವ ಸಂಸದರಾದ ಬೆಂಗಳೂರು ಕೇಂದ್ರ ಕ್ಷೇತ್ರದ ಪಿ.ಸಿ.ಮೋಹನ್ ಹಾಗೂ ಮೈಸೂರಿನ ಪ್ರತಾಪ್ ಸಿಂಹ, ಶುಕ್ರವಾರ ಅಸಂಖ್ಯಾತ ಅಯ್ಯಪ್ಪ ಭಕ್ತರ ಜತೆ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ.

ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆ ಕೂಡ ಪ್ರಜೆಗಳ ಹಕ್ಕು. ಇದು ಲಕ್ಷಾಂತರ ಭಕ್ತರ ಶ್ರದ್ಧೆಯ ಪ್ರಶ್ನೆಯಾಗಿದೆ. ಶಬರಿಮಲೆ ದೇಗುಲದ ಪ್ರಾಚೀನ ಪರಂಪರೆ ಮತ್ತು ಭಕ್ತರ ನಂಬಿಕೆಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ. ಅವರ ನಿಲುವುಗಳನ್ನು ಬೆಂಬಲಿಸಿ ತಾವೂ ಭಾಗವಹಿಸುತ್ತಿರುವುದಾಗಿ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ