ಹರಿವಂಶ್ ನಾರಾಯಣ ಸಿಂಗ್ ನೂತನ ರಾಜ್ಯಸಭಾ ಉಪಸಭಾಪತಿ

Published : Aug 09, 2018, 11:56 AM ISTUpdated : Aug 09, 2018, 12:27 PM IST
ಹರಿವಂಶ್ ನಾರಾಯಣ ಸಿಂಗ್ ನೂತನ ರಾಜ್ಯಸಭಾ ಉಪಸಭಾಪತಿ

ಸಾರಾಂಶ

ಹರಿವಂಶ್ ಅವರಿಗೆ 120 ಮತಗಳು ಲಭಿಸಿದರೆ, ಹರಿಪ್ರಸಾದ್ 105 ಮತಗಳನ್ನು ಪಡೆದುಕೊಂಡರು. ಹರಿವಂಶ್ ಆಡಳಿತರೂಢ ಎನ್ ಡಿಎಯಿಂದ ಸ್ಪರ್ಧಿಸಿದ್ದು ಜೆಡಿಯುನ ರಾಜ್ಯ ಸಭಾ ಸದಸ್ಯರಾಗಿದ್ದಾರೆ. 

ನವದೆಹಲಿ[ಆ.09]: ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.

ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ನಡಿಗ ಬಿ.ಕೆ. ಹರಿಪ್ರಸಾದ್ ಅವರನ್ನು 20 ಮತಗಳ ಅಂತರದಿಂದ ಸೋಲಿಸಿದರು. ಹರಿವಂಶ್ ಅವರಿಗೆ 125 ಮತಗಳು ಲಭಿಸಿದರೆ, ಹರಿಪ್ರಸಾದ್ 105 ಮತಗಳನ್ನು ಪಡೆದುಕೊಂಡರು. ಹರಿವಂಶ್ ಆಡಳಿತರೂಢ ಎನ್ ಡಿಎಯಿಂದ ಸ್ಪರ್ಧಿಸಿದ್ದು ಜೆಡಿಯುನ ರಾಜ್ಯ ಸಭಾ ಸದಸ್ಯರಾಗಿದ್ದಾರೆ. 

ಪಿ.ಜೆ. ಕುರಿಯನ್ ಅವರು ಕಳೆದ ಜೂನ್ ತಿಂಗಳಲ್ಲಿ ನಿವೃತ್ತರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ನೂತನ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರನ್ನುಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಒಟ್ಟು 232 ಸದಸ್ಯರಲ್ಲಿ 230 ಸದಸ್ಯರು ಮತ ಚಲಾಯಿಸಿದರು. ಅಮ್ ಆದ್ಮಿ ಹಾಗೂ ವೈಎಸ್ ಆರ್ ಸಿಪಿ ಪಕ್ಷದ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. 

ಈ ಸುದ್ದಿಯನ್ನು ಓದಿ : ಇಂದು ರಾಜ್ಯಸಭೆ ಉಪಸಭಾಪತಿ ಚುನಾವಣೆ: ವಿಪಕ್ಷಗಳಿಂದ ಕನ್ನಡಿಗ ಸ್ಪರ್ಧೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ