
ಚೆನ್ನೈ(ಡಿ.07): ತಮಿಳುನಾಡು ರಾಜ್ಯದಲ್ಲಿ ಹಲವು ದಶಕಗಳಿಂದ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ಬೇರಾವುದೇ ಪಕ್ಷ ಅಲ್ಲಿ ನೆಲೆಯೂರಲು ಸಾಧ್ಯವಾಗಿಲ್ಲ. ಇದೀಗ, ಬಿಜೆಪಿ ಪಕ್ಷ ತಮಿಳುನಾಡು ಭದ್ರಕೋಟೆಯೊಳಗೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಸುವರ್ಣ ನ್ಯೂಸ್`ಗೆ ಸಿಕ್ಕಿದೆ.
ಜಯಲಲಿತಾ ನಿಧನದ ಬಳಿಕ ಅಣ್ಣಾಡಿಎಂಕೆಯಲ್ಲಿ ಉಂಟಾಗಿದ್ದ ನಾಯಕತ್ವ ವಿವಾದ ಬಗೆಹರಿಸಿದ್ದೇ ಕೇಂದ್ರ ಬಿಜೆಪಿ ನಾಯಕರು ಎಂಬ ಮಾಹಿತಿ ಸಿಕ್ಕಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಆಯ್ಕೆಗೆ ಸಚಿವರಾದ ತಂಬಿದೊರೈ, ಎಡಪ್ಪಾಡಿ ಪಳನಿಸ್ವಾಮಿ ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಜಯಲಲಿತಾ ನಿಧನರಾದ ಸುದ್ದಿ ಘೋಷಣೆಯಾದ ಬಳಿಕ ನಡೆದ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಬೇಡ ಎಂದು ಪ್ರಮುಖ ನಾಯಕರು ಪಟ್ಟು ಹಿಡಿದಿದ್ದರು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ಕೇಂದ್ರ ಸಚಿವ ವೆಂಕಯ್ಯನಾಯ್ಡು, ತಂಬಿದೊರೈ ಸೇರಿ ಪ್ರಮುಖ ಮುಖಂಡರ ಮನವೊಲಿಸಿ ಪನ್ನೀರ್ ಸೆಲ್ವಂ ಆಯ್ಕೆ ಸುಲಭಗೊಳಿಸಿದರು ಎಂದು ತಿಳಿದುಬಂದಿದೆ.
ಜಯಲಲಿತಾ ಅಂತಿಮ ಸಂಸ್ಕಾರ ಮುಗಿಯುವವರೆಗೂ ವೆಂಕಯ್ಯನಾಯ್ಡು ಅಲ್ಲಿಯೇ ಇದ್ದರು. ಈಗಾಗಲೇ ಹಲವು ಎಐಡಿಎಂಕೆ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಸುವರ್ಣ ನ್ಯೂಸ್`ಗೆ ಉನ್ನತ ಮೂಲಗಳ ಖಚಿತ ಮಾಹಿತಿ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.