ಸುಷ್ಮಾ ಸ್ವರಾಜ್ ಕಿಡ್ನಿ ಕಸಿಗೆ ಸಿದ್ಧತೆ

By suvarna web deskFirst Published Dec 7, 2016, 8:09 AM IST
Highlights

ದಾನಿ ಹಾಗೂ ಸ್ವೀಕೃತಿದಾರರ (ಸುಷ್ಮಾ) ನಡುವಿನ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮತ್ತೆ ಅನಾರೋಗ್ಯಕ್ಕೊಳಗಾಗುವ ಅವಕಾಶವನ್ನು ತಪ್ಪಿಸುವ ಉದ್ದೇಶದಿಂದ, ಸ್ವೀಕೃತಿದಾರರು ಮತ್ತು ದಾನಿಗೆ ಬಹುವಿಧದ ಪರೀಕ್ಷೆಗಳನ್ನು ನಡೆಸಲಾಗಿದೆ. ರಕ್ತ ಪರೀಕ್ಷೆ, ಪ್ರತಿರೋಧಕ ಸಾಮರ್ಥ್ಯದ ಶಕ್ತಿ ಸೇರಿದಂತೆ ಪರಸ್ಪರ ಹೊಂದಾಣಿಕೆಗೆ ಸಂಬಂಧಿಸಿದ ಸರಣಿ ಪರೀಕ್ಷೆಗಳನ್ನು ನಡೆಸಲಾಗಿದೆ.

ನವದೆಹಲಿ(ಡಿ.07): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ವಾರಾಂತ್ಯ ಕಿಡ್ನಿ ಕಸಿ ಶಸಚಿಕಿತ್ಸೆ ನಡೆಯುವ ನಿರೀಕ್ಷೆಯಿದೆ. ಸಂಬಂಧಯಲ್ಲದ ಜೀವಂತ ದಾನಿಯಿಂದ ಕಿಡ್ನಿ ದಾನ ಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ನಿರ್ಧರಿಸುವ ಅಕಾರ ಸಮಿತಿಯಿಂದ ಅನುಮತಿ ಸಿಕ್ಕಿದೆ ಎಂದು ಏಮ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

click me!