
ಬೆಳಗಾವಿ : ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಅವರು ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಬೆಳಗಾವಿ ನಗರದಲ್ಲೇ ದತ್ತಮಾಲೆ ಧರಿಸಿದ್ದಾರೆ.
ನಗರದ ಮಹಾವೀರ ಭವನದ ಹತ್ತಿರ ಇರುವ ದತ್ತ ಮಂದಿರದಲ್ಲಿ ದತ್ತಾತ್ರೇಯ ದೇವರಿಗೆ ಪೂಜೆ ಸಲ್ಲಿಸಿ ಅವರು ದತ್ತಮಾಲೆ ಧರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಚಿಕ್ಕಮಗಳೂರಿನಲ್ಲೇ ನಾನು ದತ್ತಮಾಲೆ ಧಾರಣೆ ಮಾಡಬೇಕಿತ್ತು. ಆದರೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಧರಿಸುತ್ತಿದ್ದೇನೆ ಎಂದರು.
ಕಳೆದ ಎರಡು ದಶಕಗಳಿಂದ ಸಹ್ರಸಾರು ಭಕ್ತರು ದತ್ತ ಮಾಲೆಧರಿಸುತ್ತಿದ್ದಾರೆ. ದತ್ತಪೀಠದಲ್ಲಿ ಡಿ.20ರಂದು ಸತಿ ಅನಸೂಯಾ ಜಯಂತಿ, 21 ರಂದು ಶೋಭಾಯಾತ್ರೆ, 22 ರಂದು ದತ್ತ ಜಯಂತಿ ನಡೆಯಲಿದೆ. ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ಈ ಜಾಗೃತಿಯ ಮೂಲಕ ದತ್ತ ಪೀಠ ಮುಕ್ತವಾಗಲಿದೆ. ಭಕ್ತಿ ಹಾಗೂ ಶಕ್ತಿ ಆಂದೋಲನದ ಮೂಲಕ ಹಿಂದೂತ್ವ ದ ಜಾಗೃತಿಗಾಗಿ ದತ್ತಪೀಠ ಮುಕ್ತ ಆಗಬೇಕು ಎನ್ನುವುದು ತಮ್ಮ ಸಂಕಲ್ಪವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.