ಸಂಪುಟ ವಿಸ್ತರಣೆ : ಸಚಿವ ಸ್ಥಾನ ಕಳೆದುಕೊಳ್ತಾರ ಜಮೀರ್..?

By Web DeskFirst Published Dec 13, 2018, 12:01 PM IST
Highlights

ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ವೇಳೆ ಅಲ್ಪಸಂಖ್ಯಾತರಿಗೆ 2 ಸ್ಥಾನಗಳನ್ನು ನೀಡಬೇಕು ಎಂದು ಸಚಿವ ಜಮೀರ್ ಅಹಮದ್ ಆಗ್ರಹಿಸಿದ್ದಾರೆ. 

ಬೆಂಗಳೂರು :  ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಸಹ ಅಲ್ಪ ಸಂಖ್ಯಾತರಿಗೆ 2 ಸ್ಥಾನ ನೀಡಬೇಕು ಎಂದು  ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್  ಖಾನ್ ಹೇಳಿದ್ದಾರೆ. ಇದೇ ಡಿಸೆಂಬರ್ 22 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಹೈ ಕಮಾಂಡ್ ತೀರ್ಮಾನಕ್ಕೆ ತಾವು ಬದ್ದ ಎಂದಿದ್ದಾರೆ. 

22 ಕ್ಕೆ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ಹೆಚ್ಚುವರಿಯಾಗಿ ಖಾತೆ ಬದಲಾವಣೆ ಮಾಡಿದಲ್ಲಿ ತಮಗೆ ಸಮಸ್ಯೆ ಇಲ್ಲ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ  80 ಸ್ಥಾನ ಬಂದಿದೆ ಎಂದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣ ಎಂದಿರುವ ಅವರು ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಲು ಆಗ್ರಹಿಸಿದ್ದಾರೆ. . 

ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೆಬ್ಬೆಟ್ಟು ಮಂತ್ರಿ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಜಮೀರ್ ಅದು ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿಯವರಿಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿದೆ. ನಾವು ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದೂ ಕೂಡ ಹೈಕಮಾಂಡ್ ನಿರ್ಧಾರಿಸಿದೆ ಎಂದು ಹೆಳಿದ್ದಾರೆ. 

ಮಾಣಿಪ್ಪಾಡಿ ವರದಿ ಬಗ್ಗೆ ಪ್ರಸ್ತಾಪ :  ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲು  ವಕ್ಫ್ ಇಲಾಖೆ ಕಾರ್ಯದರ್ಶಿ ಜೊತೆಗೆ ಚರ್ಚೆ ನಡೆಸುತ್ತೇನೆ. ಕೋರ್ಟ್ ಆದೇಶದ ಪ್ರತಿ ಕೈ ಸೇರಿದ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಈ ಕಾಂಗ್ರೆಸ್ ಶಾಸಕಗೆ ಸಚಿವ ಸ್ಥಾನ : ಜಮೀರ್ ಅಹ್ಮದ್ ಟಿಪ್ಪು ಜಯಂತಿ : ಜಮೀರ್ ಅಹಮದ್ ಕೊಟ್ಟ ಸೂಚನೆ ಇದು
click me!