ಬಿಬಿಎಂಪಿಯ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ ಊಟ?

By Kannadaprabha NewsFirst Published Oct 17, 2019, 8:58 AM IST
Highlights

ಬಿಬಿಎಂಪಿಯ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ ಊಟ? ಪಾಲಿಕೆಯ ಮಾಸಿಕ ಸಭೆಗೆ ಕ್ಯಾಂಟೀನ್‌ ಊಟ ನೀಡುವ ಬಗ್ಗೆ ತೀವ್ರ ಚರ್ಚೆ -ಮೂರು ಪಕ್ಷದ ಮುಖಂಡರ ಸಭೆ ಕರೆದ ಮೇಯರ್‌ | ಚರ್ಚಿಸಿ ತೀರ್ಮಾನ

ಬೆಂಗಳೂರು (ಅ. 17):  ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಆಡಳಿತದಲ್ಲಿ ಮಾಸಿಕ ಸಭೆಯಲ್ಲಿ ಸದಸ್ಯರಿಗೆ ಇಂದಿರಾ ಕ್ಯಾಂಟೀನ್‌ ಊಟ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಈಗ ಮುಂಬರುವ ಮಾಸಿಕ ಸಭೆಯಲ್ಲಿ ಕ್ಯಾಂಟೀನ್‌ ಊಟ ಮುಂದುವರೆಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ಪಕ್ಷಗಳ ಮುಖಂಡರ ಸಭೆ ಕರೆದಿದೆ.

ಇಂದಿರಾ ಕ್ಯಾಂಟೀನ್‌ ಗುಣಮಟ್ಟದ ಬಗ್ಗೆ ಬಿಜೆಪಿ ಸದಸ್ಯರ ಆಕ್ಷೇಪ ಬಂದ ನಂತರ ಅಂದಿನ ಮೇಯರ್‌ ಗಂಗಾಂಬಿಕಾ ಗುಣಮಟ್ಟದ ಆಹಾರ ನೀಡುವ ಸಂಬಂಧ ಹಲವಾರು ಕ್ರಮ ಕೈಗೊಂಡರು. ನಂತರ ಒಂದು ವರ್ಷಗಳ ಪ್ರತಿ ಮಾಸಿಕ ಸಭೆಯ ವೇಳೆ ಕ್ಯಾಂಟೀನ್‌ ಆಹಾರವನ್ನೇ ಸದಸ್ಯರಿಗೆ ಪೂರೈಸುವ ವ್ಯವಸ್ಥೆ ಮಾಡಿದ್ದರು. ಕಳೆದ 2018 ಸೆಪ್ಟಂಬರ್‌ನಿಂದ 2019ರ ಸೆಪ್ಟೆಂಬರ್‌ ಅಂತ್ಯದವರೆಗೆ ನಡೆದ 27 ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ರಿವಾರ್ಡ್ಸ್ ಸಂಸ್ಥೆಯೇ ಆಹಾರ ಪೂರೈಕೆ ಮಾಡಿತ್ತು.

ಧರ್ಮಸ್ಥಳ, ಇಸ್ಕಾನ್ ಸಂಸ್ಥೆಗೆ ಇಂದಿರಾ ಕ್ಯಾಂಟೀನ್ ಹೊಣೆ?

ಆದರೀಗ ಬಿಜೆಪಿ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲಿ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ ಊಟ ಬೇಡ, ಖಾಸಗಿ ಹೋಟೆಲ್‌ನಿಂದ ಊಟ, ಉಪಹಾರ ಪೂರೈಕೆಗೆ ಒತ್ತಡ ಹೆಚ್ಚಾಗಿದೆ. ಹೀಗಾಗಿ, ನೂತನ ಮೇಯರ್‌ ಗೌತಮ್‌ ಕುಮಾರ್‌, ಪಾಲಿಕೆಯ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಮುಖಂಡರು ಸೇರಿದಂತೆ ಮಾಜಿ ಮೇಯರ್‌ಗಳೊಂದಿಗೆ ಈ ಕುರಿತು ಚರ್ಚಿಸಲು ಅ.21ಕ್ಕೆ ಸಭೆ ಕರೆದಿರುವುದಾಗಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಖಾಸಗಿ ಹೋಟಲ್‌ ಆಹಾರಕ್ಕೆ .63 ಲಕ್ಷ ವೆಚ್ಚ:

2017-18ನೇ ಸಾಲಿನ ಆರ್‌.ಸಂಪತ್‌ರಾಜ್‌ ಅವಧಿ ಸೇರಿದಂತೆ ಅದಕ್ಕಿಂತ ಹಿಂದಿನ ಎಲ್ಲ ಅವಧಿಯಲ್ಲಿ ಖಾಸಗಿ ಹೋಟೆಲ್‌ನಿಂದ ಕೌನ್ಸಿಲ್‌ ಸಭೆಗೆ ಊಟ, ಉಪಹಾರ, ಟೀ, ಕಾಫಿ ವಿತರಣೆ ಮಾಡಲಾಗುತ್ತಿತ್ತು. ಸಂಪತ್‌ರಾಜ್‌ ಅವರ ಒಂದು ವರ್ಷದ ಅವಧಿಯಲ್ಲಿ ನಡೆಸಿದ ಒಟ್ಟು 38 ಕೌನ್ಸಿಲ್‌ ಸಭೆಗೆ ಆಹಾರ ಪೂರೈಕೆಗೆ ಬರೋಬ್ಬರಿ .63,68,800 ವೆಚ್ಚ ಮಾಡಲಾಗಿದೆ. ಬೆಳಗ್ಗೆ ಉಪಹಾರ, ಕಾಫಿ, ಟೀ, ಮಧ್ಯಾಹ್ನ ಊಟ ಮತ್ತೆ ಸಂಜೆ ಉಪಹಾರ, ಕಾಫಿ, ಟೀ ಹೀಗೆ ಒಂದು ದಿನದ ಸಭೆಗೆ ಸುಮಾರು .2,80 ಲಕ್ಷ ವೆಚ್ಚ ಮಾಡಿದ ಉದಾಹರಣೆ ಇದೆ.

ಇಂದಿರಾ ಕ್ಯಾಂಟೀನ್‌ ಆಹಾರಕ್ಕೆ .20 ಲಕ್ಷ ವೆಚ್ಚ:

2018-2019ನೇ ಸಾಲಿನ ಗಂಗಾಂಬಿಕೆ ಮೇಯರ್‌ ಅವಧಿಯಲ್ಲಿ ಒಟ್ಟು 27 ಕೌನ್ಸಿಲ್‌ ಸಭೆ ನಡೆಸಲಾಗಿದ್ದು, ಎಲ್ಲ ಕೌನ್ಸಿಲ್‌ ಸಭೆಗೂ ಇಂದಿರಾ ಕ್ಯಾಂಟೀನ್‌ನಿಂದ ಆಹಾರ ಪೂರೈಕೆಗೆ ಮಾಡಲಾಗಿದೆ. ಒಟ್ಟು 27 ಸಭೆಗೆ ಆಹಾರ ಪೂರೈಕೆಗೆ .20,12,600 ವೆಚ್ಚ ಮಾಡಲಾಗಿದೆ.

ಅದರಲ್ಲಿ ಉಪಹಾರದ (ಸ್ನಾ್ಯಕ್ಸ್‌) ಗುಣಮಟ್ಟಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಯ ಆರು ಮಾಸಿಕ ಸಭೆಗೆ ಉಪಹಾರ ಮತ್ತು ಟೀ, ಕಾಫಿಯನ್ನು ಮಾತ್ರ ಖಾಸಗಿ ಹೋಟೆಲ್‌ನಿಂದ ಪೂರೈಕೆ ಮಾಡಲಾಗಿತ್ತು. ಆದರೂ ಖಾಸಗಿ ಹೋಟಲ್‌ನಿಂದ ವಿತರಣೆ ಮಾಡಿದ ಆಹಾರದ ಬಿಲ್‌ ಮೊತ್ತಕ್ಕಿಂತ ಇಂದಿರಾ ಕ್ಯಾಂಟೀನ್‌ ಆಹಾರದ ಬೆಲೆ ಮೊತ್ತ ಶೇ.50ರಷ್ಟು ಕಡಿಮೆ ಆಗಿದೆ.

ಇಂದಿರಾ ಕ್ಯಾಂಟೀನ್ ಭವಿಷ್ಯ ಬಿಎಸ್ ವೈ ಕೈಯಲ್ಲಿ..!

ಖಾಸಗಿ ಹೋಟೆಲ್‌ನಿಂದ 1 ಕೌನ್ಸಿಲ್‌ ಪೂರೈಕೆ ಆಗುತ್ತಿದ್ದ ಆಹಾರದ ವಿವರ (7 ಮಾ.2018 ಬಿಲ್‌)

ಮೆನು (ಆಹಾರದ ವಿಧಗಳು) ಸಮಯ ಬೆಲೆ ಪ್ಲೇಟ್‌/ಕಪ್‌ ಮೊತ್ತ

ಬಿಸ್ಕೆಟ್‌, ಮಸಾಲ ಗೋಡಂಬಿ, ಟೀ, ಕಾಫಿ, ಬಾದಾಮಿ ಹಾಲು ಬೆಳಗ್ಗೆ .11 85 350 29,750

ಮಾಂಸಹಾರಿ ಊಟ ಮಧ್ಯಾಹ್ನ .550 350 .1,92,500

ಸಸ್ಯಹಾರಿ ಊಟ .260 100 .26,000

ಮದ್ದೂರು ವಡೆ, ಟೀ, ಕಾಫಿ, ಬಾದಾಮಿ ಹಾಲು ಸಂಜೆ 4.30 .85 350 .29,750

ಕಬ್ಬಿನ ಜೊಲ್ಲೆ (ಕಪ್‌) - .2.50 1,000 .2,500

ಕಬ್ಬಿನ ಜೊಲ್ಲೆ (ಚಮಚ) - .2.50 1,000 .2,500

ಒಟ್ಟು .2,82,500

-ಬಾಕ್ಸ್‌-

ಒಂದು ಕೌನ್ಸಿಲ್‌ ಸಭೆಗೆ ಇಂದಿರಾ ಕ್ಯಾಂಟೀನ್‌ ಪೂರೈಕೆ ಆಗುತ್ತಿದ್ದ ಆಹಾರದ ವಿವರ

ಮೆನು (ಆಹಾರದ ವಿಧಗಳು) ಸಮಯ ಬೆಲೆ ಸೇವಾ ಶುಲ್ಕ ಪ್ಲೇಟ್‌/ಕಪ್‌ ಮೊತ್ತ

ಬಿಸ್ಕೆಟ್‌, ಮಸಲಾ ಗೋಡಂಬಿ, ಟೀ, ಕಾಫಿ, ಬಾದಾಮಿ ಹಾಲು, ಬಿಸಿ ನೀರು ಬೆಳಗ್ಗೆ​​-11 .55 .25 350 .28,000

ಸಸ್ಯಹಾರಿ ಊಟ ಮಧ್ಯಾಹ್ನ .35 .25 450 .27,000

ಬಿಸ್ಕೆಟ್‌, ಮಸಾಲ ಗೋಡಂಬಿ, ಟೀ, ಕಾಫಿ, ಬಾದಾಮಿ ಹಾಲು, ಬಿಸಿ ನೀರು ಸ.4.30 .55 .25 250 .20,000

ಜಿಎಸ್‌ಟಿ - - - .3,750 (ಶೇ.5ರಷ್ಟು)

ಒ ಟ್ಟು .78,750

ಬಿಬಿಎಂಪಿ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ಗೆ ಸರಬರಾಜು ಮಾಡುವ ಗುತ್ತಿಗೆ ಸಂಸ್ಥೆಯಿಂದ ಊಟ, ಉಪಹಾರ, ಟೀ, ಕಾಫಿ ಸ್ನಾ್ಯಕ್ಸ್‌ ವಿತರಣೆ ಮಾಡುವ ಬಗ್ಗೆ ಚರ್ಚೆಗೆ ಮಾಜಿ ಮೇಯರ್‌, ಪಾಲಿಕೆಯ ಪ್ರಮುಖರಿಗೆ ಪತ್ರ ಬರೆಯಲಾಗಿದೆ. ಅವರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

-ಗೌತಮ್‌ ಕುಮಾರ್‌, ಬಿಬಿಎಂಪಿ ಮೇಯರ್‌.

ಬಡವರು ಊಟ ಮಾಡುವ ಇಂದಿರಾ ಕ್ಯಾಂಟೀನ್‌ ಊಟವನ್ನು ಜನಪ್ರತಿನಿಧಿಗಳಾದ ನಾವು ಯಾಕೆ ಮಾಡಬಾರದು ಹಾಗೂ ಸಾರ್ವಜನಿಕರ ತೆರಿಗೆ ಹಣ ಉಳಿತಾಯ ಮಾಡಬೇಕೆಂಬ ಕಾರಣಕ್ಕೆ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ಗೆ ಪೂರೈಕೆ ಆಗುವ ಆಹಾರವನ್ನೇ ವಿತರಣೆ ಮಾಡುವಂತೆ ಸೂಚನೆ ನೀಡಲಾಗಿತ್ತು.

-ಗಂಗಾಂಬಿಕೆ ಮಲ್ಲಿಕಾರ್ಜುನ, ನಿಕಟ ಪೂರ್ವ ಮೇಯರ್‌.

click me!