
ಮಂಡ್ಯ (ಸೆ. 20): ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 3 ತಿಂಗಳಲ್ಲಿ ಪತನಗೊಂಡರೆ ತಮ್ಮ ಹೆಬ್ಬೆರಳು ತುಂಡರಿಸಿ ಕೋಡಿ ಶ್ರೀಗಳಿಗೆ ಅರ್ಪಿಸುವುದಾಗಿ ಶುಕ್ರವಾರ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಸವಾಲು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಪತನಗೊಳ್ಳುವುದಿಲ್ಲ. ಅವಧಿ ಪೂರ್ಣಗೊಳ್ಳುತ್ತದೆ.
ಜನವರಿವರೆಗೂ ರಾಜ್ಯಕ್ಕೆ ಜಲಗಂಡಾಂತರ: ಕೋಡಿಶ್ರೀ ಭವಿಷ್ಯ
ಹಾಗೊಂದು ವೇಳೆ ಶ್ರೀಗಳು ಹೇಳಿದ 3-4 ತಿಂಗಳಲ್ಲೇ ಯಡಿಯೂರಪ್ಪ ಸರ್ಕಾರ ಪತನಗೊಂಡರೆ ನಿಮ್ಮ ಭವಿಷ್ಯ ನಿಜವಾಗಿರುವುದನ್ನು ಒಪ್ಪಿಕೊಂಡು ನನ್ನ ಹೆಬ್ಬೆರಳು ತುಂಡರಿಸಿ ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಸರ್ಕಾರದ ಅವಧಿ ಪೂರ್ಣಗೊಳಿಸಿದ್ದೇ ಆದಲ್ಲಿ ಕೋಡಿ ಮಠದ ಶ್ರೀಗಳು ನನ್ನನ್ನು ಮಠದ ಶಿಷ್ಯನಾಗಿ ಸ್ವೀಕರಿಸಲು ಸಿದ್ಧರಿದ್ದಾರಾ ಎಂಬುದನ್ನು ಸವಾಲಾಗಿ ಸ್ವೀಕರಿಸಿ ಈ ಷÜರತ್ತಿಗೆ ಬದ್ಧರಾಗಲಿ ಎಂದು ಶಿವಕುಮಾರ್ ಹೇಳಿದ್ದಾರೆ.
ಶುಭ ಶುಕ್ರವಾರದಂದು ಸಿದ್ದರಾಮಯ್ಯನವರ ಭವಿಷ್ಯ ಹೇಳಿದ ಕೋಡಿಶ್ರೀ..!
ಸಮ್ಮಿಶ್ರ ಸರ್ಕಾರ ಪತನಗೊಂಡು ತಮ್ಮ ನೆಚ್ಚಿನ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಅಲ್ಲಿಯವರೆಗೂ ನಾನು ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ದೇವರಲ್ಲಿ ಹರಕೆ ಹೊತ್ತುಕೊಂಡಿದ್ದ ಶಿವಕುಮಾರ್ 14 ತಿಂಗಳ ಕಾಲ ಬರಿಗಾಲಿನಲ್ಲೇ ತಿರುಗಾಡಿದ್ದರು.
ಕಳೆದ ಜುಲೈನಲ್ಲಿ ಶಿವಕುಮಾರ್ ಆರಾಧ್ಯ ಪ್ರತಿಜ್ಞೆಯ ಬಗ್ಗೆ ಮಾಹಿತಿ ತಿಳಿದುಕೊಂಡ ಸಿಎಂ ಯಡಿಯೂರಪ್ಪ ಚಪ್ಪಲಿ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಸೆಪ್ಟಂಬರ್‌ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಪರವಾಗಿ ಚಪ್ಪಲಿ ಕೊಡಿಸಿದರು. ಸಿಎಂ ಯಡಿಯೂರಪ್ಪ ಸಮ್ಮು ಖದಲ್ಲೇ ಆರಾಧ್ಯ ಚಪ್ಪಲಿ ಧರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.