ಭಾರತದ ತೆಕ್ಕೆಗೆ ರಫೇಲ್‌: ವಿಶೇಷತೆಗಳೇನು? ಇಲ್ಲಿದೆ ವಿವರ!

By Web Desk  |  First Published Sep 21, 2019, 7:41 AM IST

ಭಾರತದ ತೆಕ್ಕೆಗೆ ರಫೇಲ್‌| ಫ್ರಾನ್ಸ್‌ನಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರ| ಅ. 8 ರಂದು ರಾಜ್‌ನಾಥ್‌ ಅಧಿಕೃತ ಸ್ವೀಕಾರ


ಪ್ಯಾರಿಸ್‌[ಸೆ.21]: ಭಾರತೀಯ ವಾಯುಪಡೆಯ ಬಲವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ನಿರೀಕ್ಷೆ ಹೊಂದಿರುವ ಫ್ರಾನ್ಸ್‌ ನಿರ್ಮಿತ ‘ರಫೇಲ್‌’ ಭಾರತೀಯ ವಾಯುಪಡೆ ಸೇರುವ ಕಾಲ ಸನ್ನಿಹಿತವಾಗಿದೆ. ಗುರುವಾರವೇ ಡಸಾಲ್ಟ್‌ ಏವಿಯೇಶನ್‌ನಿಂದ ರಫೇಲ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆ ಅಧಿಕಾರಿಗಳು ಫ್ರಾನ್ಸ್‌ನಲ್ಲಿ ಸ್ವೀಕಾರ ಮಾಡಿದ್ದಾರೆ.

ಗುರುವಾರ ಬೋರ್ಡೆಕ್ಸ್‌ನಲ್ಲಿರುವ ತಯಾರಿಕಾ ಘಟಕದಲ್ಲಿ ಕೆಲ ಪರೀಕ್ಷೆಗಳು ನಡೆಸಿದ ಬಳಿಕ ವಾಯುಪಡೆ ಅಧಿಕಾರಿಗಳು ರಫೇಲ್‌ ವಿಮಾನ ಸ್ವೀರಿಸಿದ್ದಾರೆ. ಅ.8ರಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಅಂದು ಅಧಿಕೃತವಾಗಿ ರಫೇಲ್‌ ಹಸ್ತಾಂತರವಾಗಲಿದೆ. ಗುರುವಾರ ವಾಯುಪಡೆಯ ಉಪ ಮುಖ್ಯಸ್ಥ ಮಾರ್ಷಲ್‌ ವಿ.ಆರ್‌ ಚೌಧರಿ ಮೊದಲ ರಫೇಲ್‌ ವಿಮಾನ ಹಾರಾಟ ನಡೆಸಿದ್ದಾರೆ. ಸಿದ್ಧ ಸ್ಥಿತಿಯಲ್ಲಿ 59 ಸಾವಿರ ಕೋಟಿ ಮೌಲ್ಯದ 36 ರಫೇಲ್‌ ಯುದ್ಧ ವಿಮಾನಗ ಖರೀದಿಗೆ 2016ರಲ್ಲಿ ಭಾರತ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೇ ಈಗಾಗಲೇ ವಾಯು ಪಡೆಯ ಪೈಲಟ್‌ಗಳಿಗೆ ರಫೇಲ್‌ ಹಾರಾಟದ ಬಗ್ಗೆ ಫ್ರಾನ್ಸ್‌ನಲ್ಲೇ ತರಬೇತಿ ನೀಡಲಾಗಿದೆ.

Tap to resize

Latest Videos

ರಫೇಲ್‌ ಭಾರತಕ್ಕೆ ಯಾಕೆ ಬೇಕು:

ಭಾರತದ ವಾಯು ಸೇನೆ ಬಲಿಷ್ಠವಾಗಿದ್ದರೂ ಇನ್ನೂ ಆಧುನಿಕ ಯುದ್ಧ ವಿಮಾನಗಳು ಭಾರತದ ಬಳಿ ಇಲ್ಲ. ಭಾರತ ಇನ್ನೂ ಕೂಡ ಹಾರಾಡುವ ಶವ ಪೆಟ್ಟಿಗೆ ಎಂದು ಕರೆಯಿಸಿಕೊಳ್ಳವ ಮಿಗ್‌ ಮಾದರಿಯ ವಿಮಾನಗಳನ್ನೇ ಬಳಸುತ್ತಿದೆ. ಪಾಕ್‌ನ ಫಾಲ್ಕನ್‌ ಎಫ್‌-16 ಹಾಗೂ ಚೀನಾದ ಚೆಂಗ್ಡು ಜೆ-20 ನಂತಹ ಆಧುನಿಕ ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯ ಬತ್ತಳಿಕೆಯಲ್ಲಿ ಇಲ್ಲ. ಆಧುನಿಕ ಹಾಗೂ ವಿದೇಶಿ ತಂತ್ರಜ್ಞಾನ ಬಳಸಿ ತಯಾರಿಸಲಾಗಿರುವ ರಫೇಲ್‌ ಯುದ್ಧ ವಿಮಾನ ಭಾರತದ ಸೇನೆಗೆ ಸೇರುವುದರಿಂದ ವಾಯು ಸೇನೆಗೆ ಮತ್ತಷ್ಟುಬಲ ಬಂದಂತಾಗುತ್ತದೆ.

ರಫೇಲ್‌ ವಿಶೇಷತೆಗಳು:

ತೂಕ: 24500 ಕೆಜಿ

ಸಾಗಣೆ ಸಾಮರ್ಥ್ಯ: 9500 ಕೆಜಿ

ಉದ್ದ: 10.3 ಮಿ.

ಎತ್ತರ: 5.3 ಮಿ.

ಹಾರಾಟ ಸಾಮರ್ಥ್ಯ: 3700 ಕಿ.ಮಿ ಎತ್ತರದಲ್ಲಿ

ವೇಗ: 1400 ಕಿ.ಮಿ ಪ್ರತೀ ಗಂಟೆಗೆ

ಬಹುಪಾತ್ರದ ಯುದ್ದ ವಿಮಾನ

ಯುದ್ಧ ಹಡಗುಗಳ ಮೇಲಿನ ದಾಳಿ ಸಾಮರ್ಥ್ಯ

ಸಣ್ಣ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ

ವಾಯು ಕ್ಷಿಪಣಿಗೆ ನಿಖರ ಮಾರ್ಗದರ್ಶನ ಸಾಮರ್ಥ್ಯ

30 ಎಂಎಂ ಗನ್‌ ಸೇರಿ ಆಧುನಿಕ ಗನ್‌ಗಳನ್ನು ಇದರಲ್ಲಿ ಬಳಸಬಹುದು.

click me!