
ನವದೆಹಲಿ (ಅ. 03): 2019 ರ ಲೋಕಸಭಾ ಚುನಾವಣೆ ನಂತರ ಪ್ರಧಾನಿ ಆಗಲು ತನಗೂ ಒಂದು ಅವಕಾಶ ಸಿಗಬಹುದು ಎಂದು ಲೆಕ್ಕ ಹಾಕುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ವಾರ ದಿಲ್ಲಿಗೆ ಬಂದು ಏಮ್ಸ್ ಆಸ್ಪತ್ರೆಯಲ್ಲಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಂಡಿದ್ದಾರೆ.
ಎಲ್ಲವೂ ನಾರ್ಮಲ್ ಆಗಿರುವ ನಿತೀಶ್‌ಗೆ ಕಣ್ಣುಗಳಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಇದೆಯಂತೆ. ಚೆಕಪ್ ನಂತರ ರಹಸ್ಯ ಸ್ಥಳದಲ್ಲಿ ಅಮಿತ್ ಶಾರನ್ನು ಭೇಟಿಯಾದ ನಿತೀಶ್ ಬಿಹಾರದಲ್ಲಿ ಬಿಜೆಪಿ, ಜೆಡಿಯು ಮತ್ತು ರಾಮ್ ವಿಲಾಸ್ ಪಾಸ್ವಾನ್ ನಡುವೆ ಮೈತ್ರಿಯ ಮಾತುಕತೆಯನ್ನು ಕೂಡ ಬಹುತೇಕ ಮುಗಿಸಿದ್ದಾರೆ.
ನಿತೀಶ್ ಆಪ್ತರು ಹೇಳುತ್ತಿರುವ ಪ್ರಕಾರ ಉಪೇಂದ್ರ ಕುಶವಾಹ ಮಾತ್ರ ಬಿಜೆಪಿ ತೆಕ್ಕೆಯಿಂದ ಲಾಲು ಯಾದವ್ ಕಡೆ ಹಾರಲಿದ್ದಾರಂತೆ
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.