ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

Published : Oct 13, 2019, 05:27 PM ISTUpdated : Oct 13, 2019, 05:36 PM IST
ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

ಸಾರಾಂಶ

ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇತ್ತ ಸೌತ್ ಆಫ್ರಿಕಾ ವಿರುದ್ದ ಟೀಂ ಇಂಡಿಯಾ 2ನೇ ಟೆಸ್ಟ್ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಪ್ರಧಾನಿ ಮೋದಿ ದಿಢೀರ್ ತಮ್ಮ ಪ್ಲಾನ್ ಚೇಂಜ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ನರಭಕ್ಷಕ ಹುಲಿ ಕೊನೆಗೂ ವಶಕ್ಕೆ, ಸ್ವಚ್ಚ ಭಾರತ ಅಭಿಯಾನದಲ್ಲಿ ಬಿಜೆಪಿ ಬಿನ್ನಮತ ಸೇರಿದಂತೆ ಭಾನುವಾರ(ಅ.13) ಸುದ್ದಿ ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.  

1) ನೀವು ಬಿಎಸ್‌ವೈ ಪರ ಬ್ಯಾಟ್‌ ಮಾಡಿ, ನಾನು ಬೆಂಬಲಿಸುವೆ: ಮಾಜಿ ಸಿಎಂ ಸಿದ್ದರಾಮಯ್ಯ!

‘ಎಡಪಂಥೀಯ ನಿಲುವುಗಳನ್ನು ಹೊಂದಿರುವ ನೀವು ಬಲಪಂಥೀಯ ಪಕ್ಷದಲ್ಲಿದ್ದೀರಿ. ರೈಟ್‌ ಮ್ಯಾನ್‌ ಇನ್‌ ರಾಂಗ್‌ ಪಾರ್ಟಿ. ನೀವು ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡಿ, ನನ್ನ ಬೆಂಬಲವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2) 5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿ ವಾರದ ಹಿಂದೆ ಹುಲಿ ರೈತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನರಭಕ್ಷಕ ಹುಲಿಯನ್ನು ಹಿಡಿಯಲು ಕಾರ್ಯಚರಣೆ ನಡಿಸಿದ್ದ ಅರಣ್ಯ ಇಲಾಖೆ ಕೊನೆಗೂ ಯಶಸ್ಸು ಕಂಡಿದೆ.

3) ಆ ಲೀಕ್, ಈ ಲೀಕ್ ನೆಲ್ಲ ನಂಬಬೇಡಿ;  ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ್!

ಬಿಗ್ ಬಾಸ್ 7 ಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರುವುದಿಲ್ಲ. ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಅವಕಾಶ ಎನ್ನಲಾಗಿದೆ. ಕಲರ್ಸ್ ಕನ್ನಡ ಮೊದಲ ಬಾರಿಗೆ ಬಿಬಿಕೆ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. 


4) ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!...

ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಕುಸಿತದ ಆತಂಕದ ಕಾರಮ ಮೋದಿ ಪ್ಲ್ಯಾನ್ ಮಾಡಿದ್ದೆಲ್ಲಾ ಬದಲಿಸಬೇಕಾದ ಅನಿರ್ವಾಯತೆ ಎದುರಾಗಿದೆ.   ತರಾತುರಿಯಲ್ಲಿ ಮೋದಿ ಪ್ಲಾನ್ ಚೇಂಜ್ ಆಗಿದೆ.

5) ‘ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ’


ಪರಮೇಶ್ವರ್ ಪಿಎ ರಮೇಶ್ ಸಾವು ಸಹಜವಲ್ಲ, ಆತನನ್ನು ಮುಗಿಸಲಾಗಿದೆ. ರಮೇಶ್ ಸಾವಿಗೆ ಬೇರೆ ಕಾರಣಗಳಿವೆ. ಅದಕ್ಕೆ ಪರಮೇಶ್ವರ್ ಉತ್ತರಿಸಲಿ. ಆತನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ರಮೇಶ್ ಸಾವಿಗೆ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದಾರೆ ರೇಣುಕಾಚಾರ್ಯ.

6) INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಫಾಲೋ ಆನ್‌ಗೆ ತುತ್ತಾಗಿದ್ದ ಸೌತ್ ಆಫ್ರಿಕಾ 2ನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲಿಲ್ಲ. ಭಾರತೀಯರ ಬೌಲರ್‌ಗಳ ಅದ್ಭುತ ದಾಳಿಗೆ ಸೌತ್ ಆಫ್ರಿಕಾ ತತ್ತರಿಸಿತು.

7) 22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ 22ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅ.12ರಂದು ಅದ್ದೂರಿಯಾಗಿ ಹುಟ್ಟ ಹಬ್ಬ ಆಚರಿಸಿಕೊಂಡ ಸಚಿನ್ ಪುತ್ರಿಗೆ ಕ್ರಿಕೆಟಿಗರು ಬಾಲಿವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಸಾರಾ ತೆಂಡುಲ್ಕರ್‌ಗೆ ಪ್ರಪೋಸ್ ಮಾಡಿದವರ ಸಂಖ್ಯೆ ವಯಸ್ಸನ್ನೂ ದಾಟಿದೆ. ಇನ್ನು ಪಾಗಲ್ ಪ್ರೇಮಿಗಳಿಂದ ಸಾರಾ ಕೂಡ ಬೇಸತ್ತಿದ್ದಾರೆ. ಇತ್ತೀಚೆಗೊಬ್ಬ ಅರೆಸ್ಟ್ ಕೂಡ ಆಗಿದ್ದಾನೆ. ಹುಟ್ಟುಬ್ಬದ ಸಂಭ್ರಮದಲ್ಲಿ ಸಾರಾ ತೆಂಡುಲ್ಕರ್ ವಿಶೇಷ ಫೋಟೋ ಸಂಚಲನ ಮೂಡಿಸಿದೆ.

8) ಬಾಲಿವುಡ್ ಸೂಪರ್ ಸ್ಟಾರ್ ಗೆ ಕನ್ನಡ ಮೇಷ್ಟ್ಟಾದ್ರು ಕಿಚ್ಚ ಸುದೀಪ್!

ಕನ್ನಡ ಮೇಷ್ಟ್ರಾಗಿದ್ದಾರೆ ನಮ್ಮ ಕಿಚ್ಚ ಸುದೀಪ್. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಗೆ ಈಗ ಕನ್ನಡ ಕಲಿಸ್ತಿದ್ದಾರೆ. ದಬಾಂಗ್-3 ಚಿತ್ರ ಈ ಸೂಪರ್ ಸ್ಟಾರ್ ಗಳನ್ನ ತುಂಬಾ ಹತ್ತಿರಕ್ಕೆ ತಂದಿದೆ. ಸಲ್ಮಾನ್ ಮನದಲ್ಲಿ ಕನ್ನಡದ ಒಲವನ್ನೂ ಹುಟ್ಟಿಸುವಂತೆ ಮಾಡಿದೆ. 

9) ಸ್ವಚ್ಛಭಾರತ ಅಭಿಯಾನ ಪಾದಯಾತ್ರೆಯಲ್ಲಿ ಬಯಲಾಯ್ತು BJP ಭಿನ್ನಮತ

ಟೇಕಲ್‌ನ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಶುಕ್ರವಾರ ಸಂಸದ ಎಸ್.ಮುನಿಸ್ವಾಮಿರವರು ಕೈಗೊಂಡ ಸ್ವಚ್ಛಭಾರತ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ತಾಲೂಕಿನ ಬಿಜೆಪಿಯಲ್ಲಿ ಭಿನ್ನಮತ ಬಹಿರಂಗವಾಗಿದೆ. ಬಿಜೆಪಿ ತಾಲೂಕು ಪದಾಧಿಕಾರಿಗಳು, ಮಾಸ್ತಿ ಶಕ್ತಿ ಕೇಂದ್ರದ ಬಿಜೆಪಿ ಮುಖಂಡರು ಹಾಗೂ ಮೂಲ ಬಿಜೆಪಿಗರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

10) 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ಭಾರತದಲ್ಲಿ ಇದೇ ಮೊದಲ ಬಾರಿಗೆ ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿದೆ. ಮೊದಲ ನೋಟಕ್ಕೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಸೆಲ್ಟೋಸ್ ಕಾರು, 3 ತಿಂಗಳಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!