ಒಳ್ಳೆ ಕೆಲಸ, ಮೋದಿ ಹೊಗಳಿದ ಗೌಡ್ರು, ದೇವೇಗೌಡ್ರ ಕೊಂಡಾಡಿದ ಮೋದಿ

By Web DeskFirst Published Oct 13, 2019, 5:13 PM IST
Highlights

ಒಬ್ಬರನ್ನೊಬ್ಬರು ಶ್ಲಾಫಿಸಿದ ಮಾಜಿ ಪ್ರಧಾನಿಗಳು/ ದೇವೇಗೌಡರನ್ನು ಮೋದಿ ಕೊಂಡಾಡಿದ್ದೇಕೆ? ಪ್ರಧಾನಿ ಮೋದಿಯವರ ಮಾದರಿ ಕೆಲಸಕ್ಕೆ ದೇವೇಗೌಡರಿಂದ ಪ್ರಶಂಸೆ/ 

ನವದೆಹಲಿ[ಅ. 13]  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಮಾರಕಕ್ಕೆ ಭೇಟಿ ನೀಡಿದ್ದ ವಿಚಾರವನ್ನು ಹಂಚಿಕೊಂಡಿದ್ದರು. ದೇವೇಗೌಡರು ಹಂಚಿಕೊಂಡಿದ್ದ ಪೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. 

ಗುಜರಾತ್ ನಲ್ಲಿರುವ ಏಕತಾ ಪ್ರತಿಮೆಗೆ ದೇವೇಗೌಡರು ಭೇಟಿ ನೀಡಿದ್ದನ್ನು ಸ್ವಾಗತಿಸಿದ್ದ ಪ್ರಧಾನಿ ನಮ್ಮ ದೇಶದ ಮಾಜಿ ಪ್ರಧಾನಿ ದೇವೇಗೌಡರನ್ನು ಏಕತಾ ಪ್ರತಿಮೆ ಬಳಿ ಕಾಣಲು ಸಂತಸವಾಗುತ್ತಿದೆ ಎಂದಿದ್ದರು. ಇದು ಅಕ್ಟೋಬರ್ 5 ಮತ್ತು 6 ರ ಘಟನಾವಳಿ.

ಸಮುದ್ರ ತೀರದಲ್ಲಿ ಕಸ ಆಯ್ದ ದೇಶದ ಪ್ರಧಾನಿ

ಇದಾದ ಮೇಲೆ ಅದೆಷ್ಟೊ ರಾಜಕಾರಣದ ಘಟನಾವಳಿಗಳು ನಡೆದು ಹೋದವು. ಚೀನಾ ಅಧ್ಯಕ್ಷರ ಜತೆ ಮೋದಿ ಮಹಾಬಲಿಪುರಂನಲ್ಲಿ ಮಾತುಕತೆಯನ್ನು ಮಾಡಿದರು. ಮುಂಜಾನೆ ಎದ್ದು ಮಹಾಬಲಿಪುರಂನ ಬೀಚ್‌ ನಲ್ಲಿ ಬಿದ್ದಿದ್ದ ಕಸ ಆಯ್ದರು. ಮೋದಿಯವರ ಈ ಮಾದರಿ ಕೆಲಸವನ್ನು ದೇವೇಗೌಡರು ಸೋಶಿಯಲ್ ಮೀಡಿಯಾ ಮೂಲಕ ಕೊಂಡಾಡಿದರು.

ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣಕ್ಕೆ ಇದೊಂದು ಸ್ಪೂರ್ತಿಯ ಚಾಲನೆಯಾಗಬಲ್ಲದು ಎಂಬ ಮಾತನ್ನು ದೇವೇಗೌಡರು ಆಡಿದರು. ಅಲ್ಲಿಗೆಇಬ್ಬರು ನಾಯಕರ ವರ್ತನೆ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿತು.

ಪಟೇಲರ ಏಕತಾ ಮೂರ್ತಿಯ ಸಂಪೂರ್ಣ ಕತೆ

ಒಳ್ಳೆಯ ಕೆಲಸ ಮಾಡಿದಾಗ ರಾಜಕೀಯ ಬಿಟ್ಟು ಒಬ್ಬರನ್ನೊಬ್ಬರು ಹೊಗಳಿ ಮೆಚ್ಚುಗೆ ಸೂಚಿಸುವುದೇ ನಿಜವಾದ ಪ್ರಜಾಪ್ರಭುತ್ವ. ಇದನ್ನೇ ಅರ್ಥ ಮಾಡಿಕೊಂಡ ಇಬ್ಬರು ನಾಯಕರ ಟ್ವೀಟ್‌ ಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದವು.

 

 

 

Happy to see our former PM Shri Ji visit the ‘Statue of Unity.’ https://t.co/GVWMo7UIow

— Narendra Modi (@narendramodi)

I saw the video of plogging barefoot at a beach in Mamallapuram, TN. This is an inspiring start to traverse towards a plastic-free India. https://t.co/tdDI2L8pRM

— H D Devegowda (@H_D_Devegowda)
click me!