
ಜೈಪುರ : ದೇಶದ ಪಂಚರಾಜ್ಯಗಳಲ್ಲಿ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
ರಾಜಸ್ಥಾನದಲ್ಲಿ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 99 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 73 ಕ್ಷೇತ್ರಗಳಲ್ಲಿ ವಿಜಯಿಯಾದರೆ. ಇದೇ ವೇಳೆ ಗುಜರಾತಲ್ಲಿ ಜನ್ಮ ತಾಳಿದ ಪಕ್ಷವೊಂದು ರಾಜಸ್ಥಾನ ರಾಜಕೀಯದಲ್ಲಿ ಪ್ರವೇಶಿಸಿ , ತನ್ನ ಬಲವನ್ನೂ ಪ್ರದರ್ಶಿಸಿದೆ.
ಈ ಎರಡು ಪಕ್ಷಗಳಿಗೆ ಹಂಚಿಕೆಯಾಗಬೇಕಿದ್ದ ಮತಗಳನ್ನು ತಮ್ಮ ಪಾಲಿಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗುಜರಾತಲ್ಲಿ ಹುಟ್ಟಿದ ಭಾರತೀಯ ಟ್ರೈಬಲ್ ಪಾರ್ಟಿ ರಾಜೇ ಸರ್ಕಾರ ಸಚಿವರೋರ್ವರನ್ನು ಸೋಲಿಸಿದ್ದು, 2 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
ರಾಜ್ಯದಲ್ಲಿ 2 ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸಿಗೆ ಹಂಚಿಕೆಯಾಗಬೇಕಿದ್ದ ಶೇ.0.7ರಷ್ಟು ಮತಗಳನ್ನು ತಮ್ಮ ಪಾಲಿಗೆ ಪಡೆದಿದೆ. ಬುಡಕಟ್ಟು ಜನರು ಹೆಚ್ಚು ವಾಸಿಸುವ ಪ್ರದೇಶದಲ್ಲಿ ಹಂಚಿಕೆಯಾಗಬೇಕಿದ್ದ ಮತಗಳು ಬಿಟಿಪಿ ಪಾಲಿಗೆ ಹೋಗಿವೆ. ರಾಜಸ್ಥಾನ ಸಚಿವ ಸುಶೀಲ್ ಕಟಾರ ಅವರನ್ನು, ಚೊರಾಸಿ ಕ್ಷೇತ್ರದಲ್ಲಿ 12000 ಮತಗಳಿಂದ ಬಿಟಿಪಿ ಅಭ್ಯರ್ಥಿ ರಾಜ್ ಕುಮಾರ್ ರೋಟ್ ಪರಾಭವಗೊಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ 2 ಪಕ್ಷಗಳನ್ನು ಬಿಟ್ಟು ಬೇರೆ ಆಯ್ಕೆ ಇಲ್ಲದ ಜನ ಈ ಕ್ಷೇತ್ರದಲ್ಲಿ ಬಿಟಿಪಿಯಿಂದ ಸ್ಪರ್ಧೆ ಮಾಡಿದ್ದ ರಾಜ್ ಕುಮಾರ್ ರೋಟ್ ಅವರನ್ನು ಗೆಲ್ಲಿಸಿ, ಅಭಿವೃದ್ಧಿ ಕನಸು ಕಾಣುತ್ತಿದ್ದಾರೆ. ಅಭ್ಯರ್ಥಿ ಕೂಡ ಬುಡಕಟ್ಟು ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ನಡೆದ ಗುಜರಾತ್ ಚುನಾವಣೆ ವೇಳೆ ಬಿಟಿಪಿ ಪಕ್ಷ ಚೋಟು ಬಾಯಿ ವಸವ ಅವರಿಂದ ಸ್ಥಾಪಿತವಾಗಿದ್ದು, ಪಕ್ಷ ಕಟ್ಟಿ ಚುನಾವಣೆಗೆ ನಿಂತಿದ್ದ ಚೋಟು ಬಾಯಿ ಶಾಸಕರಾಗುವಲ್ಲಿಯೂ ಯಶಸ್ವಿಯಾದರು.
ಮಧ್ಯ ಪ್ರದೇಶ, ರಾಜಸ್ಥಾನ, ಮಿಜೋರಾಂ, ಛತ್ತೀಸ್ ಗಢ, ತೆಲಂಗಾಣದಲ್ಲಿ ಡಿಸೆಂಬರ್ 7ರಂದು ಚುನಾವಣೆ ಮುಕ್ತಾಯವಾಗಿ, 11ರಂದು ಫಲಿತಾಂಶ ಪ್ರಕಟವಾಗಿತ್ತು. ಮಿಜೋರಾಂನಲ್ಲಿ ಎಂಎನ್ ಎಫ್ 26 ಸ್ಥಾನ ಪಡೆದು ಸರ್ಕಾರ ರಚಿಸುತ್ತದ್ದರೆ, ಇತ್ತ ತೆಲಂಗಾಣದಲ್ಲಿ ಟಿಆರ್ ಎಸ್ 88 ಸ್ಥಾನಗಳಲ್ಲಿ ಜಯ ಸಾಧಿಸಿ ಅಧಿಕಾರಕ್ಕೆ ಏರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.