
ನವದೆಹಲಿ(ಫೆ.16): ಭಾರತವನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ, ಭಾರತವನ್ನು ಮಣಿಸಲು ಸಾಧ್ಯವಿಲ್ಲ, ಭಾರತದ ಅಸ್ಮಿತೆಯನ್ನು ಕಸಿಯಲು ಸಾಧ್ಯವಿಲ್ಲ, ಭಾರತದ ಹುಮ್ಮಸ್ಸನ್ನು ಕುಗ್ಗಿಸಲು ಸಾಧ್ಯವಿಲ್ಲ. ಇಂತದ್ದೊಂದು ಸಂದೇಶ ಗಡಿಗಳನ್ನು ದಾಟಿ ನಮ್ಮ ಶತ್ರು ರಾಷ್ಟ್ರಗಳಿಗೆ ಇಂದು ತಲುಪಿದೆ.
ಹೌದು, ಪುಲ್ವಾಮಾ ಭಯೋತ್ಪಾದಕ ದಾಳಿ ಭಾರತವನ್ನು ಕುಗ್ಗಿಸಲಿದೆ ಎಂಬ ಶತ್ರು ರಾಷ್ಟ್ರದ ಹುನ್ನಾರವನ್ನು ಭಾರತೀಯರು ವಿಫಲಗೊಳಿಸಿದ್ದಾರೆ. ಪುಲ್ವಾಮಾ ದಾಳಿಯಾದ ಕೇವಲ 36 ಗಂಟೆಯಲ್ಲಿ bharatkeveer.gov.in ವೆಬ್‌ಸೈಟ್‌ಗೆ 3.5 ಕೋಟಿ ರೂ. ನೆರವು ಹರಿದು ಬಂದಿದೆ.
bharatkeveer.gov.in ವೆಬ್‌ಸೈಟ್‌ನಲ್ಲಿ ಪುಲ್ವಾಮಾ ಹುತಾತ್ಮರ ಕುಟುಂಬಕ್ಕೆ ನೆರವು ನೀಡಲು ಮಾಹಿತಿ ನೀಡಲಾಗಿದ್ದು, ಕೇವಲ 36 ಗಂಟೆಯಲ್ಲಿ 3.5 ಕೋಟಿ ರೂ. ಹರಿದು ಬಂದಿದೆ. ಅಲ್ಲದೇ ಪ್ರತಿ ಗಂಟೆಗೆ ಸುಮಾರು 10 ಲಕ್ಷ ರೂ. ನೆರವು ಹರಿದು ಬಂದಿದೆ.
bharatkeveer.gov.in ವೆಬ್‌ಸೈಟ್‌ನಲ್ಲಿ ಓರ್ವ ವ್ಯಕ್ತಿ ಕನಿಷ್ಠ 10 ರೂ.ದಿಂದ ಗರಿಷ್ಠ 15 ಲಕ್ಷ ರೂ.ವರೆಗೂ ಸಹಾಯ ನೀಡಬಹುದಾಗಿದ್ದು, ನಿಮ್ಮ ಹಣ ತಲುಪುತ್ತಿದ್ದಂತೇ ವೆಬ್‌ಸೈಟ್‌ನಲ್ಲೇ ಪ್ರಮಾಣಪತ್ರವೊಂದು ಜನರೇಟ್ ಆಗುತ್ತದೆ. ಅಲ್ಲದೇ ವೆಬ್‌ಸೈಟ್‌ನಿಂದ ನಿಮಗೆ ಅಧಿಕೃತ ಇ-ಮೇಲ್ ಸಂದೇಶ ಕೂಡ ಬರುತ್ತದೆ.
ಕೃಪೆ: MyNation
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.