ಮತ್ತೆ ಹರಿಯಿತು ನೆತ್ತರು: ಗಡಿಯಲ್ಲಿ ಸೇನಾಧಿಕಾರಿಯನ್ನು ಸ್ಫೋಟಿಸಿ ಕೊಂದರು!

By Web DeskFirst Published Feb 16, 2019, 5:35 PM IST
Highlights

ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೊಂದು ಸ್ಫೋಟ!  ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್ನಲ್ಲಿ ಭೀಕರ ಸ್ಫೋಟ!ಸ್ಫೋಟಕ್ಕೆ ಸೇನಾಧಿಕಾರಿ ಹುತಾತ್ಮ.

ಶ್ರೀನಗರ, [ಫೆ.16]: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರಿ ದಾಳಿ ನಡೆಸಿದ್ದ ಉಗ್ರರು ಇಂದು [ಶನಿವಾರ] ಮತ್ತೆ ಸೇನೆ ಮೇಲೆ ದಾಳಿ ನಡೆಸಿದ್ದಾರೆ. 

ಕಾಶ್ಮೀರ ರಜೋರಿಯಲ್ಲಿ ಉಗ್ರರು ನಡೆಸಿರುವ ದಾಳಿಯಲ್ಲಿ ಒಬ್ಬ ಸೇನಾ ಅಧಿಕಾರಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರ ಅಂತ್ಯಸಂಸ್ಕಾರಕ್ಕೆ ಮುನ್ನವೇ ಮತ್ತೊಂದು ದಾಳಿ ನಡೆಸಿರುವುದು ಮತ್ತಷ್ಟು ಭಾರತೀಯರನ್ನು ಕೆರಳಿಸಿದೆ.

Jammu & Kashmir: One Army officer has lost his life in an explosion in the Rajouri sector along the Line of Control. Nature of explosion being ascertained; More details awaited pic.twitter.com/UKQtY7F38S

— ANI (@ANI)

ಹುತಾತ್ಮರಾದ ಸೇನಾ ಅಧಿಕಾರಿ ಯಾರು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಸ್ಫೋಟಕ ತುಂಬಿದ ಕಾರನ್ನು ಯೋಧರು ತೆರಳುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿ ಭೀಕರ ಸ್ಫೋಟ ಸಂಭವಿಸಿತ್ತು. ಇದರಿಂದ 44  ಯೊಧರು ಹುತಾತ್ಮರಾಗಿದ್ದರು. 

ಸಾಂದರ್ಭಿಕ ಚಿತ್ರ

click me!