ಆಡಿಯೋ ಬಾಂಬ್ ಕೇಸ್: ಯಡಿಯೂರಪ್ಪಗೆ ಬಿಗ್ ರಿಲೀಫ್

By Web Desk  |  First Published Feb 16, 2019, 5:10 PM IST

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆಪರೇಷನ್ ಆಡಿಯೋ ಕೇಸ್ ನಲ್ಲಿ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ.


ಬೆಂಗಳೂರು, [ಫೆ.16]: ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದ್ದ ಆಪರೇಷನ್ ಆಡಿಯೋ ಕೇಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡ  ರಾಯಚೂರು ಜಿಲ್ಲೆ ದೇವದುರ್ಗ ಠಾಣೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಂಗೌಡ,  ಮರಮ್ಕಲ್  ವಿರುದ್ಧ  ಮೊಕದ್ದಮೆ  ದಾಖಲಿಸಿದ್ದರು.

Tap to resize

Latest Videos

HDK ನಿಲುವು ಸಡಿಲು, ಸಿದ್ದರಾಮಯ್ಯ ಬಿಗಿಪಟ್ಟಿನಿಂದಾಗಿ ಆಡಿಯೋ ಕೇಸ್‌ SITಗೆ

ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು [ಶನಿವಾರ] ಇವರೆಲ್ಲರಿಗೂ ಷರತ್ತುಬದ್ಧ  ಜಾಮೀನು ನೀಡಿದೆ. ಸಾಕ್ಷ್ಯ ನಾಶ ಮಾಡಬಾರದು. 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್, ಅನುಮತಿ ಇಲ್ಲದೇ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗದಂತೆಯೂ ಷರತ್ತು ವಿಧಿಸಲಾಗಿದ್ದು,  ಪೊಲೀಸ್ ಅಧಿಕಾರಿಗಳ ತನಿಖೆಗೆ ಸಹಕರಿಸುವಂತೆ ಕೋರ್ಟ್ ಸೂಚಿಸಿದೆ.

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರಿಗೆ ಬಿಜೆಪಿಗೆ ಬರುವುಂತೆ ಆಮಿಷ ನೀಡಲಾಗಿತ್ತು ಎನ್ನುವ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಅವರು ಬಹಿರಂಗ ಪಡಿಸಿದ್ದರು.

ಅಷ್ಟೇ ಅಲ್ಲದೇ ಈ ಆಡಿಯೋದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ.ಗೆ ಬುಕ್ ಮಾಡಿದ್ದೇವೆ ಎನ್ನುವ ಅಂಶವಿತ್ತು. ಇದ್ರಿಂದ ಬಜೆಟ್ ಅಧಿವೇಶನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 

 ಈ ಪ್ರಕರಣದ ತನಿಖೆಯನ್ನು SITಗೆ ನೀಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿಗೆ ಸೂಚಿಸಿದ್ದಾರೆ. ಆದ್ರೆ ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

click me!