
ಮಂಗಳೂರು (ಡಿ.29): ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್ ಹಾಗೂ ಅಶ್ಲೀಲ ನೃತ್ಯವನ್ನು ಬ್ಯಾನ್ ಮಾಡುವಂತೆ ಭಜರಂಗದಳ ಒತ್ತಾಯಿಸಿದೆ. ಹೊಟೇಲ್ ಹಾಗೂ ಪಬ್'ಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ ಯಾವುದೇ ರೀತಿಯ ಡಿಜೆ ಪಾರ್ಟಿ, ನೃತ್ಯ ಹಾಗೂ ಮಾದಕ ದೃವ್ಯಗಳ ಮದ್ಯ ಪಾರ್ಟಿಗಳನ್ನು ಆಯೋಜನೆ ಮಾಡಲು ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ವಿಎಚ್.ಪಿ ಹಾಗೂ ಭಜರಂಗದಳ ಮನವಿ ಸಲ್ಲಿಸಿದೆ.
ಹೊಸವರ್ಷಾಚರಣೆ ಭಾರತೀಯ ಸಂಸ್ಕೃತಿ ಅಲ್ಲ ಬದಲಾಗಿ ಅದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುತ್ತಿರುವ ಸಂಘ-ಪರಿವಾರ ನಗರದ ಎಲ್ಲಾ ಬಾರ್ ಹಾಗೂ ಪಬ್'ಗಳನ್ನು 11 ಗಂಟೆಯ ಒಳಗಾಗಿ ಪೊಲೀಸರು ಬಂದ್ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದೆ. ಹೀಗೆ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸ್ವಾತಂತ್ರ್ಯಕ್ಕೆ ಸಂಘ-ಪರಿವಾರದ ವಿರೋಧ ಸಾರ್ವಜನಿಕ ವಲಯದಲ್ಲಿ ಚರ್ಚಗೆ ಗ್ರಾಸವಾಗಿದೆ.
ಕರಾವಳಿಯಲ್ಲಿ ಪಬ್ ದಾಳಿ ಹಾಗೂ ಹೋಂ ಸ್ಟೇ ದಾಳಿಯಂತ ನೈತಿಕ ಪೊಲೀಸ್'ಗಿರಿ ಘಟನೆಗಳ ಇತಿಹಾಸವಿದ್ದು ಈ ಬಾರಿ ಇಂತಹ ಯಾವುದೇ ಘಟನೆ ನಡೆಯದಂತೆ ಪೊಲೀಸರು ಭದ್ರತೆಯನ್ನು ನೀಡಬೇಕು ಎಂದು ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.