ಬೆಂಗಳೂರು ಮೇಲೆ ಯುದ್ಧ : ಅಲ್ ಖೈದಾ ಬೆದರಿಕೆ

Published : Dec 29, 2017, 11:09 AM ISTUpdated : Apr 11, 2018, 12:38 PM IST
ಬೆಂಗಳೂರು ಮೇಲೆ ಯುದ್ಧ : ಅಲ್ ಖೈದಾ ಬೆದರಿಕೆ

ಸಾರಾಂಶ

ಈ ಸಂಘಟನೆಯ ಭಾರತ ಉಪಖಂಡದ ನಾಯಕ ಉಸಾಮಾ ಮೆಹಮೂದ್ ಎಂಬಾತ ವಿಡಿಯೋ ಬಿಡುಗಡೆ ಮಾಡಿದ್ದು, ಈ ಮೇಲ್ಕಾಣಿಸಿದ ನಗರಗಳ ಮೇಲೆ ದಾಳಿ ಮಾಡುವಂತೆ ಕರೆ ನೀಡಿದ್ದಾನೆ.

ನವದೆಹಲಿ(ಡಿ.29): ‘ಕಾಶ್ಮೀರವನ್ನು ಭಾರತದ ಕಪಿಮುಷ್ಟಿ ಯಿಂದ ವಿಮೋಚನೆಗೊಳಿಸಲು ಕೋಲ್ಕತಾ,ಬೆಂಗಳೂರು ಹಾಗೂ ನವದೆಹಲಿಯ ಮೇಲೆ ಯುದ್ಧ ಸಾರಿ’ ಎಂದು ಅಲ್ ಖೈದಾ ಭಾರತ ಉಪಖಂಡ ಸಂಘಟನೆಯ ಹೆಸರಿನಲ್ಲಿ ವಿಡಿಯೋವೊಂದು ಬಿಡುಗಡೆಯಾಗಿದೆ.

ಈ ಸಂಘಟನೆಯ ಭಾರತ ಉಪಖಂಡದ ನಾಯಕ ಉಸಾಮಾ ಮೆಹಮೂದ್ ಎಂಬಾತ ವಿಡಿಯೋ ಬಿಡುಗಡೆ ಮಾಡಿದ್ದು, ಈ ಮೇಲ್ಕಾಣಿಸಿದ ನಗರಗಳ ಮೇಲೆ ದಾಳಿ ಮಾಡುವಂತೆ ಕರೆ ನೀಡಿದ್ದಾನೆ. ‘ಆದರೆ ವಿಡಿಯೋದಲ್ಲಿ ಹುರುಳಿಲ್ಲ. ಈ ಹಿಂದಿನ ಹಳೆಯ ಬೆದರಿಕೆಯನ್ನೇ ಪುನರಾವರ್ತಿಸಿ ಸುಮ್ಮನೇ ಭಯ ಹುಟ್ಟಿಸಲಾಗುತ್ತಿದೆ. ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ. ಈವರೆಗೂ ವಿಡಿಯೋದಲ್ಲಿ ಹೆಸರಿಸಿರುವ ಯಾವ ನಗರಗಳಿಗೂ ಈ ಬಗ್ಗೆ ಸಲಹಾ ಮಾರ್ಗದರ್ಶಿಗಳನ್ನು ನೀಡಿಲ್ಲ’ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!