ಬೆಂಗಳೂರಿನಲ್ಲಿ ಲಾ & ಆರ್ಡರ್‌ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರನ ಹಲ್ಲೆ!

Published : Apr 21, 2025, 04:35 PM ISTUpdated : Apr 21, 2025, 05:55 PM IST
ಬೆಂಗಳೂರಿನಲ್ಲಿ ಲಾ & ಆರ್ಡರ್‌ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರನ ಹಲ್ಲೆ!

ಸಾರಾಂಶ

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮ ಎಂಬ ವರದಿಗಳ ನಡುವೆಯೇ ಬೆಂಗಳೂರಿನಲ್ಲಿ ರಸ್ತೆ ರೌಡಿತನ ಮಿತಿಮೀರಿದೆ. ವಿಂಗ್ ಕಮಾಂಡರ್ ಶೀಲಾದಿತ್ಯ ಅವರ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಕಾರಿನ ಬಾಗಿಲು ಬೈಕ್‌ಗೆ ತಾಗಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. DRDO ಸ್ಟಿಕ್ಕರ್ ನೋಡಿ ಕೆರಳಿದ ಬೈಕ್ ಸವಾರ, ಕಾರಿನ ಕೀ ಕಿತ್ತು ಹಲ್ಲೆ ಮಾಡಿದ್ದಾನೆ.

ಬೆಂಗಳೂರು (ಏ.21): ಇತ್ತೀಚಿಗಿನ ಇಂಡಿಯನ್‌ ಜಸ್ಟೀಸ್‌ ರಿಪೋರ್ಟ್‌ನಲ್ಲಿ ಲಾ & ಆರ್ಡರ್‌ನಲ್ಲಿ ಕರ್ನಾಟಕವೇ ನಂಬರ್‌ 1 ಎಂದು ವರದಿ ಬಂದಿತ್ತು. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಬೆಂಗಳೂರಿನಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್‌, ಕಾರ್‌ ಓಡಿಸೋದೇ ಸಾಹಸ ಎನ್ನುವಂತಾಗಿದೆ. ರೋಡ್‌ರೇಜ್‌ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ವಾಯು ಸೇನೆಯಲ್ಲಿ ವಿಂಗ್‌ ಕಮಾಂಡರ್‌ ಆಗಿರುವ ಶೀಲಾದಿತ್ಯ ಬೋಸ್‌ ಎನ್ನುವ ವ್ಯಕ್ತಿಯ ಮೇಲೆ ಬೈಕ್‌ ಸವಾರ ಹಲ್ಲೆ ಮಾಡಿದ್ದಾರೆ. ಪತ್ನಿ ಜೊತೆ ಏರ್ಪೋರ್ಟ್‌ಗೆ ವಿಂಗ್‌ ಕಮಾಂಡರ್‌ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ದಿಢೀರ್ ಅಂತ ಹಿಂದೆ ಇಂದ ಬಂದ ಬೈಕ್ ಸವಾರ ಕಿರಿಕ್ ತೆಗೆದಿದ್ದಾನೆ. ಕೆಲವು ಮೂಲಗಳ ಪ್ರಕಾರ, ಶೀಲಾದಿತ್ಯ ಅವರ ಪತ್ನಿ ಕಾರ್‌ ಡೋರ್‌ ತೆಗೆಯುವ ವೇಳೆ ಬೈಕ್‌ಗೆ ತಾಕಿದ್ದರಿಂದ ಗಲಾಟೆ ಆರಂಭವಾಗಿದೆ. ಬೈಕ್‌ ಸವಾರ, ಕಾರ್ ಮುಂದೆ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳ ನಿಂದಿಸಿದ್ದ. ಕಾರ್ ಮೇಲೆ DRDO ಸ್ಟಿಕ್ಕರ್ ನೋಡಿ ಕೆರಳಿದ ಬೈಕ್ ಸವಾರ ಗಲಾಟೆ ಆರಂಭಿಸಿದ್ದಾರೆ.

ಕಾರ್ ಕೀ ಕಿತ್ತು ಕೊಂಡು ವಿಂಗ್ ಕಮಾಂಡರ್ ಮೇಲೆ ಹಲ್ಲೆ  ಮಾಡಿದ್ದಾನೆ. ವಿಂಗ್ ಕಮಾಂಡರ್ ರಕ್ತ ಸುರಿದರೂ ಖದೀಮರು ಕ್ಯಾರೇ ಎಂದಿಲ್ಲ. CV ರಾಮನ್ ನಗರದಲ್ಲಿ ವಿಂಗ್‌ ಕಮಾಂಡರ್‌ ವಾಸವಿದ್ದು. ಇಂದು ಬೆಳಿಗ್ಗೆ ಏರ್ಪೋರ್ಟ್ ರಸ್ತೆಯಲ್ಲಿ ಘಟನೆ ನಡೆದಿದ. ಹಲ್ಲೆಗೆ ಒಳಗಾದ ಬಳಿಕ ವಿಡಿಯೋ ಮಾಡಿ ವಿಂಗ್‌ ಕಮಾಂಡರ್‌ ಬೇಸರ ತೋಡಿಕೊಂಡಿದ್ದಾರೆ. ವಿಂಗ್‌ ಕಮಾಂಡರ್‌ ಅವರ ಪತ್ನಿ ಮಧುಮಿತಾ ದತ್ತಾ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಜೊತೆಗೆ ತನ್ನ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ.

ಶೀಲಾದಿತ್ಯ ಬೋಸ್‌ ಇಂದು ಕೋಲ್ಕತ್ತಾಗೆ ಹೋಗಬೇಕಿತ್ತು. ಗಂಡನನ್ನು ಏರ್‌ಪೋರ್ಟ್‌ಗೆ ಡ್ರಾಪ್‌ ಮಾಡಲು ಪತ್ನಿ ಕಾರ್ ರೈಡ್‌ ಮಾಡಿ ಬಂದಿದ್ದರು. Cv ರಾಮನ್ ನಗರದಲ್ಲಿ ಈ ಘಟನೆ ನಡೆದಿದೆ. ದಿಢೀರ್ ಅಂತ ಕಾರಿನ ರೈಟ್ ಸೈಡ್ ಬಂದು ಗಾಡಿ ನಿಲ್ಲಿಸಿದ. ನನ್ನ ವೈಫ್ ಕಾರು ಓಡಿಸುತ್ತಾ ಇದ್ದರು. ಅದು ಗೊತ್ತಾದ ತಕ್ಷಣ  ನನ್ನ ಸೈಡ್ ಬಂದು ಬಾಯಿಗೆ ಬಂದ ಹಾಗೆ ಬೈದ. ಡೋರ್ ಓಪನ್ ಮಾಡ್ತಾ ಇದ್ದ ಹಾಗೆ ಕೀ ಅಲ್ಲಿ ಪಂಚ್ ಮಾಡಿದ. ಬಳಿಕ ನನ್ನ ಮೇಲೆ ಹಲ್ಲೆ ಮಾಡಲು ಶುರು ಮಾಡಿದ ಎಂದು ಶೀಲಾದಿತ್ಯ ಹೇಳಿದ್ದಾರೆ.

ಈ ಘಟನೆ ಬಗ್ಗೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಪತ್ನಿ ಮಧುಮಿತಾರಿಂದ ಬೈಯಪ್ಪನಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ. ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಎಫ್‌ಐಆರ್‌ನಲ್ಲಿ ಇರೋದೇನು?: KA53 EA 528 ನಂಬರಿನ ಬೈಕ್‌ನಲ್ಲಿ ಯುವಕ ಬಂದಿದ್ದ. ತುಂಬಾ ರಾಶ್‌ ಡ್ರೈವಿಂಗ್ ಮಾಡಿಕೊಂಡು ಬಂದಿದ್ದ ಯುವಕರು ಕಾರಿಗೆ ಗುದ್ದುವಂತೆ ಬಂದಿದ್ದರು. ರಾಶ್‌ ಡ್ರೈವ್ ಮಾಡಿದ ಯುವಕರನ್ನ ನೋಡಿದ್ದಕ್ಕೆ ಮುಂದೆ ಬಂದು ನಿಂತು ಹಲ್ಲೆ ನಡೆಸಿದ್ದರು. ನಮ್ಮನ್ನ ನಿಂದಿಸಿ ಕಾಲಿನಿಂದ ಮತ್ತು ಕಲ್ಲಿನಿಂದ‌ ಹಲ್ಲೆ ಮಾಡಿದ್ದಾರೆ.

ಬೆಂಗಳೂರು ಹೆಬ್ಬಾಳ ಜಂಕ್ಷನ್‌ ಟ್ರಾಫಿಕ್ ಜಾಮ್‌ ಕಾರಣ ಬಿಚ್ಚಿಟ್ಟ ಪೊಲೀಸ್ ಕಮಿಷನರ್!

ನನ್ನ ಗಂಡನ ಮೇಲೆ ಹಲ್ಲೆ ಮಾಡುವುದನ್ನ ತಡೆಯಲು ಯತ್ನಿಸಿದರೂ ಹಲ್ಲೆ ಮುಂದುವರೆಸಿದ್ದರು. ನನ್ನ ಗಂಡನ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ನೀವು DRDOಗೆ ಸೇರಿದವು, ನಿಮ್ಮ ಕಾರಿನ ಮೇಲೆ DRDO ಸ್ಟಿಕ್ಕರ್ ಇದೆ. ಇದು ಕನ್ನಡ ನಾಡು, ನಿನ್ನನ್ನ ನೋಡಿಕೊಳ್ಳುತ್ತೇನೆ. ನೋಡ್ತಾ ಇರು ಏನ್ ಮಾಡ್ತೀನಿ ಎಂದು ನಿಂದಿಸಿದ್ದಾರೆ. ನಂತರವೂ ಇನ್ನೂ ಕೆಲ ವ್ಯಕ್ತಿಗಳು ಬಂದು ನನ್ನ ಗಂಡನನ್ನ ಕೆಳಗೆ ಎಳೆದು ಹಲ್ಲೆ ಮಾಡಿದ್ದಾರೆ. ಹಲ್ಲೆ‌ ಮಾಡುತ್ತಿದ್ದವರು ಕನ್ನಡದಲ್ಲಿ ಮಾತಾಡ್ತಾ ಇದ್ದರು. ಈ ಘಟನೆಯಲ್ಲಿ ನನ್ನ ಕಾಲಿಗೂ ಪೆಟ್ಟಾಗಿದೆ  ಎಂದು ಮಧುಮಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ಜೆಸಿ ರಸ್ತೆಯಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಅಂಕಲ್, ಜಪ್ಪಯ್ಯ ಅಂದ್ರೂ ಜರುಗಲಿಲ್ಲ!

ಇಬ್ಬರ ಬಂಧನ: ಡಿಆರ್ಡಿಓ ಅಧಿಕಾರಿ ಮೇಲೆ ಹಲ್ಲೆ ಪ್ರಕರಣದಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ್ದ ವಿಕಾಸ್, ಮೊತ್ತೊಬ್ಬನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಯಾವ ಕಾರಣಕ್ಕೆ ಗಲಾಟೆ ಆಯ್ತು..? ಯಾಕೆ ಹಲ್ಲೆ ನಡೆಸಿದ್ದೀರಿ ಎಂದು ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ನಡೆಸಿ ಇಬ್ಬರನ್ನೂ ಪೊಲೀಸರು ಅರೆಸ್ಟ್‌ ಮಾಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು