ಬೆಂಗಳೂರಿಗೆ ಬೆಂಕಿ ಹಚ್ಚಲು ಗಲಭೆಕೋರರಿಂದ 40 ಸಾವಿರ ಕರೆಗಳು ಮಾಡಿರುವುದು ಬಹಿರಂಗವಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ. ಐಪಿಎಲ್ ಟೂರ್ನಿ ಭಾರತೀಯರ ಮುಖದಲ್ಲಿ ನಗು ತರಿಸಲಿದೆ ಎಂದಿದ್ದಾರೆ ಸಚಿನ್ ತೆಂಡುಲ್ಕರ್. ಕಂಗನಾ ವಿರುದ್ಧ ಸೋನಾಕ್ಷಿ ಸಿನ್ಹ ಕಿಡಿ, ಮತ್ತೆ ಬಾರಿ ಮಳೆ ಸೂಚನೆ ಸೇರಿದಂತೆ ಆಗಸ್ಟ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಗಲಭೆಕೋರರ ಹೆಡೆಮುರಿಕಟ್ಟಲು ಮುಂದಾದ ಸರ್ಕಾರ, ಬಿಎಸ್ ವೈ ಸಭೆಯ ಪ್ರಮುಖಾಂಶಗಳು!
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು (ಸೋಮವಾರ) ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ತೀರ್ಮಾನಗಳು ಈ ಕೆಳಗಿನಂತಿವೆ.
ನಮ್ಮ ನೀತಿ ಪಕ್ಷ ನೋಡೋದಿಲ್ಲ: ಬಿಜೆಪಿ ಮೇಲಿನ ಆರೋಪಕ್ಕೆ Facebook ಉತ್ತರ!...
ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಫೇಸ್‌ಬುಕ್ ಭಾರತದಲ್ಲಿ ಬಿಜೆಪಿ ನಾಯಕ ದ್ವೇಷದ ಮಾತುಗಳನ್ನು ನಿರ್ಲಕ್ಷಿಸುತ್ತದೆ ಎಂದು ಆರೋಪದ ಬಗ್ಗೆ ತಿಳಿಸಲಾಗಿತ್ತು. ಆದರೀಗ ಈ ವರದಿ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಹಾಗೂ ಇಂಟರ್ನೆಟ್‌ನ ದಿಗ್ಗಜ ಕಂಪನಿ ಫೇಸ್‌ಬುಕ್ ಈ ಸಂಬಂಧ ಸ್ಪಷ್ಟನೆ ನೀಡಿದೆ. ಫೇಸ್‌ಬುಕ್ ನೀಡಿರುವ ಸ್ಪಷ್ಟನೆಯಲ್ಲಿ ನಮ್ಮ ನೀತಿ ಯಾವುದೇ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದೆ.
ಗಡಿ ವಿಚಾರದಲ್ಲಿ ಭಾರತ ಪರ ನಿಲ್ಲುವೆ: ಬೈಡನ್!
ಡೆಮಾಕ್ರೆಟಿಕ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್, ಭಾರತದ ಪರ ನಿಲುವು ತಳೆದಿದ್ದಾರೆ. ಒಂದು ವೇಳೆ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಗಡಿ ಹಾಗೂ ಭದ್ರತೆ ವಿಷಯದಲ್ಲಿ ಭಾರತದ ಪರವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಹಿತ ಕಾಯುವುದಾಗಿಯೂ ಭರವಸೆ ನೀಡಿದ್ದಾರೆ. ಗಡಿ ವಿಚಾರವಾಗಿ ಚೀನಾ ಪದೇಪದೇ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಬೈಡನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಧೈರ್ಯವಿಲ್ಲವೇ?'...
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳನ್ನು ನಿಯಂತ್ರಿಸುತ್ತಿವೆ ಎಂಬ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ಕೇಂದ್ರ ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತೀಕ್ಷ$್ಣ ತಿರುಗೇಟು ನೀಡಿದ್ದಾರೆ.
SPB ಆರೋಗ್ಯ; ಪುತ್ರ ಚರಣ್ ನೀಡಿದ ಮಹತ್ವದ ಮಾಹಿತಿ...
ಕೊರೋನಾ ಕಾರಣಕ್ಕೆ ಚೆನ್ನೈ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಪುತ್ರ ಎಸ್‌ಪಿ ಚರಣ್ ತಿಳಿಸಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ತಾಯಿ ಸಹ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸೆ.19 ರಿಂದ ಭಾರತೀಯರಲ್ಲಿ ಕೊರೋನಾ ಭಯ ಮಾಯ: ಭವಿಷ್ಯ ನುಡಿದ ಸಚಿನ್ ತೆಂಡುಲ್ಕರ್!...
ಭಾರತದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರುತ್ತಿದೆ. ಆರೋಗ್ಯವಂತರು ಭಯಭೀತರಾಗಿದ್ದಾರೆ. ಕೊರೋನಾ ಕಾರಣ ಉತ್ಸಾಹ ಕಳೆದುಕೊಂಡಿದ್ದಾರೆ. ಕೊರೋನಾ ವೈರಸ್ ಕಾರಣ ಮಾನಸಿಕ ಖಿನ್ನತೆ ಸೇರಿದಂತೆ ಹಲವು ಇತರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಸಪ್ಟೆಂಬರ್ 19ರಿಂದ ಮಾಯವಾಗಲಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ.
ಮತಾಂಧರ ಮಹಾಸಂಚು; ಬೆಂಗಳೂರಿಗೆ ಬೆಂಕಿ ಹಚ್ಚಲು ಗಲಭೆಕೋರರಿಂದ 40 ಸಾವಿರ ಕರೆಗಳು...
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತಾಂಧರ ಮತ್ತೊಂದು ಮಹಾಸಂಚು ಬಯಲಾಗಿದೆ. ಇಡೀ ಬೆಂಗಳೂರಿಗೆ ಬೆಂಕಿ ಹಚ್ಚಲು ಮಹಾ ಸಂಚು ರೂಪಿಸಿದ್ದರು. ಭಾರೀ ಸಂಖ್ಯೆಯಲ್ಲಿ ಜನರನ್ನು ರೂಪಿಸಲು ಗಲಭೆಕೋರರು 40 ಸಾವಿರ ಫೋನ್ ಕಾಲ್ ಮಾಡಿದ್ದರು ಎನ್ನಲಾಗಿದೆ. ಫೋನ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕಾಗಿದೆ.
ನೆಪೊಟಿಸಂ ವಿಷಯ ಎತ್ತಿದ್ದಕ್ಕೆ ಕಂಗಾನ ವಿರುದ್ಧ ಸೋನಾಕ್ಷಿ ಸಿನ್ಹಾ ಕಿಡಿ...
ಸುಮ್ಮನೆ ನೆಪೊಟಿಸಂ ಸುದ್ದಿ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ನಟಿ ಸೋನಾಕ್ಷಿ ಸಿನ್ಹಾ ಕಂಗನಾಗೆ ಟಾಂಗ್ ಕೊಟ್ಟಿದ್ದಾರೆ.
ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!...
ಸಾಮಾನ್ಯವಾಗಿ ಚಿನ್ನದ ದರ ಏರಿದಾಗಲೆಲ್ಲ ಖುಷಿಪಡುತ್ತಿದ್ದ ಚಿನ್ನಾಭರಣ ವ್ಯಾಪಾರಿಗಳು ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾರಣ, ಲಾಕ್‌ಡೌನ್ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ಚಿನ್ನಕ್ಕೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ತಗ್ಗಿದೆ.
ದಕ್ಷಿಣ ಕನ್ನಡದಲ್ಲಿ ಮತ್ತೆ ಭಾರೀ ಮಳೆ...
ದಕ್ಷಿಣ ಕನ್ನಡದಲ್ಲಿ ಮತ್ತೆಮಳೆ ಚುರುಕುಗೊಂಡಿದೆ. ಕೆಲದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದೆ.