ಬೆಂಗಳೂರು ಗಲಭೆಗೆ ಟೆರರ್‌ ನಂಟು, ನಿವಾರಣೆಯಾಯ್ತು ಗಣೇಶೋತ್ಸವ ಕಗ್ಗಂಟು: ಆ.18ರ ಟಾಪ್ 10 ಸುದ್ದಿ!

Published : Aug 18, 2020, 04:47 PM ISTUpdated : Aug 18, 2020, 04:50 PM IST
ಬೆಂಗಳೂರು ಗಲಭೆಗೆ ಟೆರರ್‌ ನಂಟು, ನಿವಾರಣೆಯಾಯ್ತು ಗಣೇಶೋತ್ಸವ ಕಗ್ಗಂಟು: ಆ.18ರ ಟಾಪ್ 10 ಸುದ್ದಿ!

ಸಾರಾಂಶ

ಬೆಂಗಳೂರು ಗಲಭೆ ಕಾರಣನಾದ ಆರೋಪಿ ನವೀನ್ ಬಿಜೆಪಿ ಬೆಂಬಲಿಗ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ಮುಳ್ಳಾಗುತ್ತಿದೆ. ಕಾರಣ ನವೀನ್ ಕಾಂಗ್ರೆಸ್ಸಿಗ ಅನ್ನೋದು ಬಯಲಾಗಿದೆ. ಈ ಗಲಭೆ ಹಿಂದೆ ಭಯೋತ್ಪಾದಕ ಸಂಘಟನೆಯ ನಂಟು ಬಹಿರಂಗೊಂಡಿದೆ. ಒತ್ತಡಕ್ಕೆ ಮಣಿದ ಬಿಎಸ್‌ ಯಡಿಯೂರಪ್ಪ ಗಣೇಶ್ ಹಬ್ಬ ಆಚರಣೆಗೆ ರೂಲ್ಸ್ ಬದಲಾಯಿಸಿದ್ದಾರೆ. ಡ್ರೀಮ್ 11 ಪಾಲಾಯ್ತು ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್, ವರ್ಕ್ ಫ್ರಂ ಹೋಮ್ ಮಂದಿಗೆ ಹೆಚ್ಚುವರಿ ತೆರಿಗೆ ಸೇರಿದಂತೆ ಆಗಸ್ಟ್ 18ರ ಟಾಪ್ 10 ಸುದ್ದಿ ಇಲ್ಲಿವೆ.

ಫೇಸ್‌ಬುಕ್‌ನಲ್ಲಿ ಬಾಂಬ್ ಹಾಕಿದ ನವೀನ್ ಬಿಜೆಪಿಗನಲ್ಲ; ಸುಳ್ಳು ಹೇಳಿದ್ರಾ ಡಿಕೆಶಿ?...

ಶಾಸಕ ಅಖಂಡ ಶ್ರೀನಿವಾಸ್ ಅಕ್ಕನ ಮಗ ನವೀನ್ ಹಾಕಿದ ಪ್ರಚೋದನಕಾರಿ ಪೋಸ್ಟ್ ಬೆಂಗಳೂರು ಗಲಭೆಗೆ ಕಾರಣವಾಯ್ತು ಅನ್ನೋದು ಗೊತ್ತೇ ಇದೆ. ಯಾರು ಈ ನವೀನ್? ಯಾಕಾಗಿ ಈ ರೀತಿ ಪೋಸ್ಟ್ ಹಾಕಿದ್ದ? ಎಂಬ ಚರ್ಚೆ ಶುರುವಾದ ಬೆನ್ನಲ್ಲೇ ನವೀನ್ ಬಿಜೆಪಿ ಬೆಂಬಲಿಗ, ವೋಟರ್ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸತ್ಯಾಸತ್ಯತೆಯನ್ನ ನಮ್ಮ ಟೀಂ ಬೆನ್ನತ್ತಿದಾಗ ಆಗ ಬಿಜೆಪಿಯವನಲ್ಲ. ಪಕ್ಕಾ ಕಾಂಗ್ರೆಸ್ ಮ್ಯಾನ್ ಎಂದು ತಿಳಿದು ಬಂದಿದೆ. 

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಗೆ ಪಾಕ್‌ನಿಂದ ಡ್ರೋನ್‌ ಬಳಕೆ!...

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ನಿರಂತರ ಯತ್ನ ನಡೆಸುತ್ತಿರುವ ಪಾಕಿಸ್ತಾನ, ಪರಿಸ್ಥಿತಿಯನ್ನು ಮತ್ತಷ್ಟುಹದಗೆಡಿಸಲು ಸಂಚು ರೂಪಿಸಿದೆ. ಇದಕ್ಕಾಗಿ ಮಧ್ಯಮ ಎತ್ತರದ ಮಟ್ಟಕ್ಕೆ ಬಹುಕಾಲ ಹಾರಾಡಬಲ್ಲ ಯುಎವಿ (ಮಾನವ ರಹಿತ ವಿಮಾನ)ಗಳನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮೇಲಾಗಿ ಭಾರತದ ಇನ್ನೊಂದು ಶತ್ರು ದೇಶ ಚೀನಾದಿಂದ ‘ಕೈ ಹಾಂಗ್‌-4’ ಎಂಬ ಯುಎವಿಯನ್ನು ಖರೀದಿಸುತ್ತಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ಬೆಂಗಳೂರು ಗಲಭೆಗೆ ಟೆರರ್‌ ಲಿಂಕ್‌: ಸಮಿಯುದ್ದೀನ್‌ ಬಂಧನ!...

ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ‘ಅಲ್‌-ಹಿಂದ್‌’ ಭಯೋತ್ಪಾದನೆ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎನ್ನಲಾದ ಆರೋಪಿ ಸೇರಿ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೊರೋನಾದಿಂದ ಚೇತರಿಕೆಯಾಗಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು!

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಗುಣಮುಖರಾಗಿ ಹೋಂ ಐಸೋಲೇಷನ್‌ನಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಗೆ ಅವರು ದಾಖಲಾಗಿದ್ದು, ಸದ್ಯ ಅಲ್ಲಿಂದಲೇ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಹೇಗಿದೆ ಎಂಬುವುದರ ಕುರಿತಾಗಿ ವೈದ್ಯರೂ ಸ್ಪಷ್ಟನೆ ನೀಡಿದ್ದಾರೆ.

ಒತ್ತಡಕ್ಕೆ ಮಣಿದ ಬಿಎಸ್‌ವೈ, ಗಣೇಶ್ ಹಬ್ಬ ಆಚರಣೆಗೆ ರೂಲ್ಸ್ ಚೇಂಜ್...! 

ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ.

ಐಪಿಎಲ್ ಟೈಟಲ್‌ ಪ್ರಾಯೋಕತ್ವ ಪಡೆಯುವಲ್ಲಿ Dream11 ಯಶಸ್ವಿ..!...

2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಆನ್‌ಲೈನ್ ಗೇಮ್‌ ಪ್ಲಾಟ್‌ಫಾರ್ಮ್ ಡ್ರೀಮ್ ಇಲೆವನ್ ಪಾಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನಿಕ್ ಭಾರತದ ಹುಡಗೀನ ಮದ್ವೆಯಾಗ್ಬಾರ್ದಿತ್ತು: ಪಿಗ್ಗಿ ವಿರುದ್ಧ ಪಾಕಿಗಳ ವಾಗ್ದಾಳಿ

ಅಂತಾರಾಷ್ಟ್ರೀಯ ಪಾಕ್ ಸಿಂಗರ್ ಭಾರತದಿಂದ ಮದುವೆಯಾಗಬಾರದಿತ್ತು ಎಂಬುದು ಪಾಕಿಗಳ ನಿಲುವು. ನಿಕ್ ಜೋನಸ್ ಪ್ರಿಯಾಂಕ ಷೋಪ್ರಾಳನ್ನು ಮದುವೆಯಾದಾಗ ಪಾಕಿಗಳು ಪಿಗ್ಗಿ ವಿರುದ್ದ ವಾಗ್ದಾಳಿ ನಡೆಸಿದ್ದರು.

ವರ್ಕ್ ಫ್ರಂ ಹೋಂ ಎಫೆಕ್ಟ್‌ : ಈ ಬಾರಿ ನಿಮಗೆ ಹೆಚ್ಚು ತೆರಿಗೆ!...

ಕೊರೋನಾ ವೈರಸ್‌ನಿಂದಾಗಿ ವರ್ಕ್ ಫ್ರಂ ಹೋಂ ಹೆಚ್ಚಳವಾಗಿರುವುದರಿಂದ ದೇಶಾದ್ಯಂತ ಬಹಳಷ್ಟುನೌಕರಸ್ಥರು ಹೆಚ್ಚು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ. ಅವರಿಗೆ ಪ್ರಯಾಣದ ವೆಚ್ಚ, ಮನೆ ಬಾಡಿಗೆ ಹಾಗೂ ಹೊರಗೆ ಊಟ-ತಿಂಡಿ ಮಾಡುವುದರ ಖರ್ಚು ಉಳಿಯುತ್ತಿದೆ. ಜೊತೆಗೆ ಹಲವಾರು ಕಂಪನಿಗಳು ವರ್ಕ್ ಫ್ರಂ ಹೋಂ ಭತ್ಯೆಯನ್ನೂ ನೀಡುತ್ತಿವೆ. ಆದರೆ, ಇದೇ ಕಾರಣಕ್ಕೆ ಈ ವರ್ಷ ನೌಕರಸ್ಥರು ಪಾವತಿಸಬೇಕಾದ ಆದಾಯ ತೆರಿಗೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತೆರಿಗೆ ತಜ್ಞರು ಹೇಳುತ್ತಿದ್ದಾರೆ.

ಪೊಲೀಸರ ಮುಂದೆ ಸ್ಟಂಟ್, ಫೆರಾರಿ ಕಾರು ಸೀಝ್ !...

ಸಾರ್ವಜನಿಕ ಪ್ರದೇಶದಲ್ಲಿ ಕಾರು ಚಲಾಯಿಸವಾಗ ನಿಯಮಗಳನ್ನು ಪಾಲಿಸಲೇಬೇಕು. ಆದರೆ ಸೂಪರ್ ಕಾರು ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಸ್ಟಂಟ್ ಮಾಡುವುದು ಹಚ್ಚಾಗುತ್ತಿದೆ. ಹೀಗೆ ಪೊಲೀಸರ ಮುಂದೆ ಸ್ಟಂಟ್ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ ಫೆರಾರಿ ಕ್ಯಾಲಿಫೋರ್ನಿಯಾ ಸೂಪರ್ ಕಾರು ಮಾಲೀಕನಿಗೆ ಪೊಲೀಸರು ಸರಿಯಾಗಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಸೇರಲು ಮನಸ್ಸು ಮಾಡಿದ್ರಾ ಮತ್ತೋರ್ವ ಜೆಡಿಎಸ್ ಶಾಸಕ?...

ಇದೀಗ ಮತ್ತೋರ್ವ ಜೆಡಿಎಸ್ ಶಾಸಕ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆಪ್ರಸ್ತಾಪಿಸಿದ್ದಾರೆ. ತಾವು ಮನಸ್ಸು ಮಾಡಿದ್ದರೆ ಈಗಾಗಲೆ ಸಚಿವರಾಗಿ ಇರಬಹುದಿತ್ತೆಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Karnataka News Live: ಬಂಗಾರಪೇಟೆ ಉರುಸ್ಸಲ್ಲಿ ಎರಡು ಕೋಮಿನ ಯುವಕರ ನಡುವೆ ಗಲಾಟೆ