ಜಗತ್ತಿನ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ಸೂ ಒಂದು!

Published : Sep 19, 2018, 11:29 AM IST
ಜಗತ್ತಿನ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ಸೂ ಒಂದು!

ಸಾರಾಂಶ

ಅಲ್ಲದೆ ‘ಆಘಾತಕಾರಿ ಪಟ್ಟಿ! ವಿಶ್ವದ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಭಾರತೀಯ ರಾಜಕೀಯ ಪಕ್ಷ ಕೂಡ ಸೇರಿದೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

2018ರಲ್ಲಿ ಜಗತ್ತಿನ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿದೆ ಎಂದು ಹೇಳಲಾಗಿದೆ. ಇದನ್ನು ಬಿಜೆಪಿ ಸಂಸದ, ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಟಿ.ವಿ ಮೋಹನ್ ದಾಸ್ ಪೈ ಅವರೂ ಕೂಡ ಶೇರ್ ಮಾಡಿದ್ದಾರೆ. 

ಅಲ್ಲದೆ ‘ಆಘಾತಕಾರಿ ಪಟ್ಟಿ! ವಿಶ್ವದ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಭಾರತೀಯ ರಾಜಕೀಯ ಪಕ್ಷ ಕೂಡ ಸೇರಿದೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ. ಬಿಬಿಸಿ ಹಬ್ ಡಾಟ್ ಕಾಂ ಈ ಸುದ್ದಿಯನ್ನು ಪ್ರಕಟಿಸಿದ್ದು, ಐಎನ್‌ಸಿ ಸೇರಿದಂತೆ ವಿಶ್ವದ ಅನೇಕ ರಾಜಕೀಯ ಪಕ್ಷಗಳ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಬಿಬಿಸಿ ನ್ಯೂಸ್ ಹಬ್ ಈ ರೀತಿಯ ಸಮೀಕ್ಷೆ ನಡೆಸಿದ್ದು ಸತ್ಯವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.  ವಾಸ್ತವವಾಗಿ ಬಿಬಿಸಿ ನ್ಯೂಸ್ ಹಬ್‌ಗೂ, ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ (ಬಿಬಿಸಿ)ಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ ಈ ವೆಬ್‌ಸೈಟ್ ತನ್ನ ಸಂಸ್ಥೆಯ ಬಗ್ಗೆ ಬರೆದಿರುವ ವಿವರಣೆಯಲ್ಲಿ ಹಲವಾರು ವ್ಯಾಕರಣ ದೋಷಗಳಿವೆ ಹಾಗೂ ಈ ಪಟ್ಟಿಯ ಕುರಿತ ಲೇಖನ ಕೂಡ ಹಾಸ್ಯಾಸ್ಪದ ರೀತಿಯಲ್ಲಿದೆ. ಇದು ಸುಳ್ಳು ಸುದ್ದಿ ಎಂದು ತಿಳಿದ ಬಳಿಕ ಮೋಹನ್ ದಾಸ್ ಪೈ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

(ವೈರಲ್ ಚೆಕ್ ಅಂಕಣ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ