ಚೀನಾದ 15 ಲಕ್ಷ ಕೋಟಿ ಮೌಲ್ಯದ ವಸ್ತುಗಳಿಗೆ ಟ್ರಂಪ್‌ ಶೇ.10 ಸುಂಕ ಬರೆ

By Web DeskFirst Published Sep 19, 2018, 10:33 AM IST
Highlights

ಟ್ರಂಪ್‌ ಸರ್ಕಾರ ಪ್ರಕಟಿಸಿರುವ ಹೊಸ ನಿರ್ಧಾರ ಸೆ.24ರಿಂದ ಜಾರಿಗೆ ಬರಲಿದ್ದು, ಆರಂಭದಲ್ಲಿ ಚೀನಿ ವಸ್ತುಗಳಿಗೆ ಶೇ.10 ಸುಂಕ ವಿಧಿಸಲಾಗುತ್ತದೆ. ಜ.1ರಿಂದ ಇದು ಶೇ.25ಕ್ಕೆ ಏರಿಕೆಯಾಗಲಿದೆ.

ವಾಷಿಂಗ್ಟನ್‌[ಸೆ.19]: ಜಗತ್ತಿನ ಎರಡು ಅತಿದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಹಾಗೂ ಚೀನಾ ನಡುವೆ ಆರಂಭವಾಗಿರುವ ವ್ಯಾಪಾರ ಸಮರ ಮತ್ತೊಂದು ಮಜಲು ತಲುಪಿದೆ. ಚೀನಾದ 3.6 ಲಕ್ಷ ಕೋಟಿ ರು. ಮೌಲ್ಯದ ಆಮದಿನ ಮೇಲೆ ಈಗಾಗಲೇ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ 14.55 ಲಕ್ಷ ಕೋಟಿ ರು. ಮೌಲ್ಯದ ಚೀನಿ ವಸ್ತುಗಳ ಮೇಲೆ ಸುಂಕ ಹೇರಲು ಆದೇಶಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಚೀನಾ, ತಾನೂ ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಬೆದರಿಕೆ ಹಾಕಿದೆ.

ಟ್ರಂಪ್‌ ಸರ್ಕಾರ ಪ್ರಕಟಿಸಿರುವ ಹೊಸ ನಿರ್ಧಾರ ಸೆ.24ರಿಂದ ಜಾರಿಗೆ ಬರಲಿದ್ದು, ಆರಂಭದಲ್ಲಿ ಚೀನಿ ವಸ್ತುಗಳಿಗೆ ಶೇ.10 ಸುಂಕ ವಿಧಿಸಲಾಗುತ್ತದೆ. ಜ.1ರಿಂದ ಇದು ಶೇ.25ಕ್ಕೆ ಏರಿಕೆಯಾಗಲಿದೆ.

ತನ್ನ ಈ ನಿರ್ಧಾರಕ್ಕೆ ಪ್ರತಿಯಾಗಿ ತನ್ನ ಕೃಷಿ ಹಾಗೂ ಕೈಗಾರಿಕೆಗಳ ವಿರುದ್ಧ ಪ್ರತೀಕಾರದ ಕ್ರಮವನ್ನು ಚೀನಾ ಏನಾದರೂ ತೆಗೆದುಕೊಂಡರೆ ಮೂರನೇ ಸುತ್ತಿನಲ್ಲಿ 20 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳಿಗೆ ಸುಂಕದ ಬರೆ ಎಳೆಯುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

click me!