ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ

Published : Aug 15, 2017, 06:40 PM ISTUpdated : Apr 11, 2018, 12:40 PM IST
ಬಾಗಪ್ಪ ಹರಿಜನ್ ಶೂಟೌಟ್ ಪ್ರಕರಣ: ಆರು ಮಂದಿ ಬಂಧನ

ಸಾರಾಂಶ

* ವಿಜಯಪುರದಲ್ಲಿ ಬಾಗಪ್ಪ ಹರಿಜನ್ ಮೇಲೆ ಶೂಟೌಟ್ ಪ್ರಕರಣ * ರಮೇಶ ಬಾಬುರಾವ್ ಹಡಪದ, ಭೀಮು ಹರಿಜನ್, ರಜಾಕ್ ಮಮ್ಮುಲಾಲ್ ಕಾಂಬಳೆ, ನಾಮದೇವ ದೊಡಮನಿ, ಮಲ್ಲೇಶಪ್ಪ ಬಿಂಜಗೇರಿ ಬಂಧಿತ ಆರೋಪಿಗಳು * ಬಸವರಾಜ್ ಹರಿಜನ್ ಹತ್ಯೆ ಪ್ರತೀಕಾರವಾಗಿ ಶೂಟೌಟ್ ನಡೆಸಿರುವುದಾಗಿ ಹೇಳಿಕೆ * ಎಎಸ್ಪಿ ಶಿವಕುಮಾರ್ ಗುಣಾರಿ ನೇತೃತ್ವದಲ್ಲಿ 2 ತಂಡಗಳಾಗಿ ನಡೆದ ಕಾರ್ಯಾಚರಣೆ * ಶೂಟೌಟ್ ನಡೆದು 7 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು. * ಪ್ರಕರಣ ಭೇದಿಸಿದ ಅಧಿಕಾರಿಗಳಿಗೆ ಅಭಿನಂದಿಸಿದ ಎಸ್ಪಿ ಕುಲದೀಪ ಜೈನ್

ವಿಜಯಪುರ(ಆ. 15): ಬಾಗಪ್ಪ ಹರಿಜನ್ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಇಲ್ಲಿಯ ಪೊಲೀಸರು ಯಶಸ್ವಿಯಾಗಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಬಾಬುರಾವ್ ಹಡಪದ, ಭೀಮು ಹರಿಜನ್, ರಜಾಕ್ ಮಮ್ಮುಲಾಲ್ ಕಾಂಬಳೆ, ನಾಮದೇವ ದೊಡಮನಿ ಮತ್ತು ಮಲ್ಲೇಶಪ್ಪ ಬಿಂಜಗೇರಿ ಬಂಧಿತ ಆರೋಪಿಗಳು. ಬಸವರಾಜ್ ಹರಿಜನ್ ಹತ್ಯೆಗೆ ಪ್ರತೀಕಾರವಾಗಿ ಶೂಟೌಟ್ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಭೇದಿಸಲು ಎಎಸ್ಪಿ ಶಿವಕುಮಾರ್ ಗುಣಾರಿ ನೇತೃತ್ವದಲ್ಲಿ 2 ತಂಡಗಳನ್ನು ನೇಮಿಸಲಾಗಿತ್ತು. ಇದೇ ವೇಳೆ, ಪ್ರಕರಣ ಭೇದಿಸಿದ ಅಧಿಕಾರಿಗಳಿಗೆ ಎಸ್ಪಿ ಕುಲದೀಪ ಜೈನ್​ ಅಭಿನಂದಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ