ಇಂದು ರಾಷ್ಟ್ರಗೀತೆ ಹಾಡಲು ಕೆಲವು ಮದರಸಾಗಳಿಂದ ನಿರಾಕರಣೆ

By Suvarna Web DeskFirst Published Aug 15, 2017, 5:51 PM IST
Highlights

ಇಲ್ಲಿನ ಕೆಲವು ಮದರಸಾಗಳು ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ್ದು, ಯೋಗಿ ಸರ್ಕಾರದ ಆದೇಶವನ್ನು ಪಾಲನೆ ಮಾಡಿಲ್ಲದಿರುವುದು ಕಂಡು ಬಂದಿದೆ.

ಉತ್ತರ ಪ್ರದೇಶ (ಆ.15): ಇಲ್ಲಿನ ಕೆಲವು ಮದರಸಾಗಳು ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ್ದು, ಯೋಗಿ ಸರ್ಕಾರದ ಆದೇಶವನ್ನು ಪಾಲನೆ ಮಾಡಿಲ್ಲದಿರುವುದು ಕಂಡು ಬಂದಿದೆ.

ರಾಜ್ಯದ ಎಲ್ಲಾ ಮದರಸಗಳಲ್ಲಿ ಸ್ವತಂತ್ರ ದಿನಾಚರಣೆಯನ್ನು ಆಚರಿಸಬೇಕು. ರಾಷ್ಟ್ರಗೀತೆಯನ್ನು ಹಾಡಬೇಕು. ಅದರ ವಿಡಿಯೋವನ್ನು ಕಳುಹಿಸಿಕೊಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಅನೇಕ ಮದರಸಗಳು ಪಾಲಿಸಿಲ್ಲ. ರಾಜ್ಯದ ದೊಡ್ಡ ಮದರಸಾ ಕೇಂದ್ರಗಳಾದ ಕಾನ್ಪುರ, ಮೀರತ್ ಮತ್ತು ಬರೇಲಿಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಬದಲಿಗೆ ‘ಸಾರೆ ಜಹಾಂಸೆ ಅಚ್ಚಾ’ ಹಾಡಿದ್ದು, ಆದರೆ ಇದನ್ನು ವಿಡಿಯೋ ಮಾಡಿಲ್ಲ. ನಮ್ಮ ದೇಶಭಕ್ತಿಗೆ ಪುರಾವೆಯನ್ನು ಕೊಡಲು ನಾವು ಬಯಸುವುದಿಲ್ಲ ಎಂದಿದ್ದಾರೆ.

Latest Videos

ರಾಜ್ಯದ 16,000 ಮದರಸಾಗಳು ಸರ್ಕಾರದ ಆದೇಶವನ್ನು ಪಾಲಿಸಿಲ್ಲ. ಕೆಲವು ಪ್ರಮುಖ ಮುಸ್ಲೀಂ ಮುಖಂಡರು ಆದೇಶವನ್ನು ಸಾರ್ವಜನಿಕವಾಗಿಯೇ ಖಂಡಿಸಿದ್ದಾರೆ.

ಸಾಮಾನ್ಯವಾಗಿ ಸ್ವತಂತ್ರ ದಿನಾಚರಣೆ ದಿನದಂದು, ಗಣರಾಜ್ಯ ದಿನದಂದು ನಾವು ರಾಷ್ಟ್ರಗೀತೆಯನ್ನು ಹಾಡುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಮಾತ್ರ ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದ ಮೌಲ್ವಿಯಿಬ್ಬರು ಹೇಳಿದ್ದಾರೆ.  

 

click me!