ಬಿಜೆಪಿ ಸಂಸದೆಗೆ ‘ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ’ ಎಂದ ಅಜಂ ಖಾನ್!

Published : Jul 25, 2019, 05:03 PM ISTUpdated : Jul 25, 2019, 05:08 PM IST
ಬಿಜೆಪಿ ಸಂಸದೆಗೆ ‘ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ’ ಎಂದ ಅಜಂ ಖಾನ್!

ಸಾರಾಂಶ

ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿವಾದಿತ ಹೇಳಿಕೆ ನೀಡುವುದರಲ್ಲಿ ನಿಸ್ಸೀಮ. ಈ ಬಾರಿ ಲೋಕಸಭಾ ಉಪಸಭಾಪತಿ ಬಗ್ಗೆಯೇ ಹೇಳಿಕೆ ನೀಡಿ ತಕ್ಷಣ ಕ್ಷಮೆ ಕೇಳಿದ್ದಾರೆ.

ನವದೆಹಲಿ[ಜು. 25] ಹಿರಿಯ ನಾಯಕಲಿ, ಕಲಾವಿದೆ ಜಯಪ್ರದಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಂತರ  ಕ್ಷಮೆ ಯಾಚನೆ ಮಾಡಿದ್ದ ಸಂಸದ ಅಜಂ ಖಾನ್ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅದು ಸಂಸತ್ತಿನಲ್ಲಿಯೇ!

ಸಮಾಜವಾದಿ ಪಕ್ಷದ ಸಂಸದರು ಮಾತನಾಡುತ್ತ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ  ಡೆಪ್ಯುಟಿ ಸ್ಪೀಕರ್ ರಮಾದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ನೀವು ತುಂಬಾ ಸುಂದರವಾಗಿ ಕಾಣಿಸುತ್ತೀರಿ ನಿಮ್ಮನ್ನು ಕಣ್ಣ್ಲಲ್ಲಿ ಕಣ್ಣಿಟ್ಟು ನೋಡಬೇಕು ಎನಿಸುತ್ತೆ’ ಎಂದು ಹೇಳಿದ್ದು ಉಳಿದ ಸಂದದರ ಆಕ್ರೋಶಕ್ಕೂ ಕಾರಣವಾಯಿತು.

ಜಯಾಪ್ರದಾ ಒಳವಸ್ತ್ರದ ಬಗ್ಗೆ ಆಜಂ ಖಾನ್ ಕೀಳು ಹೇಳಿಕೆ

ನೀವು ಎಷ್ಟು ಸುಂದರವಾಗಿ ಕಾಣುತ್ತಿದ್ದೀರಿ ಎಂದರೆ ನನ್ನ ಮನಸ್ಸು ನಿಮ್ಮ ಕಣ್ಣ್ಲಲ್ಲಿ ಕಣ್ಣಿಟ್ಟು ನೋಡುವಂತೆ ಮಾಡುತ್ತಿದೆ. ಆದರೆ ನೀವು ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ತ್ರಿಪಲ್ ತಲಾಖ್ ವಿಚಾರದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಖಾನ್ ಮಾತನಾಡುತ್ತಿದ್ದರು. ಉಳಿದ ಸಂಸದರ ಆಕ್ರೋಶದ ನಂತರ ಖಾನ್ ಕ್ಷಮೆ ಕೇಳಿದ್ದಾರೆ. ನಿಮ್ಮ ಮೇಲೆ ನನಗೆ ಬಹಳ ಗೌರವವಿದೆ ನೀವು ನನ್ನ ತಂಗಿ ಇದ್ದಂತೆ ಎಂದು ಹೇಳುತ್ತ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್