
ಕೈರ್ನ್ಸ್, ಆಸ್ಟ್ರೇಲಿಯಾ[ಅ. 08] ಆಕೆ ತನ್ನ ದೈನಂದಿನ ಕೆಲಸ ಮುಗಿಸಲು ಟಾಯ್ಲೆಟ್ ಗೆ ಹೋಗಿದ್ದಳು. ಆದರೆ ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಳು. ಆಸ್ಟ್ರೇಲಿಯಾದ ಕೈರ್ನ್ಸ್ ನಗರದಲ್ಲಿ ನಡೆದ ಈ ಘಟನೆ ಒಂದು ಕ್ಷಣ ಮಹಿಳೆಯನ್ನು ಮಾತ್ರವಲ್ಲ ನಮ್ಮೆಲ್ಲರನ್ನ ಬೆಚ್ಚಿ ಬೀಳುವಂತೆ ಮಾಡುತ್ತದೆ. ಮಹಿಳೆಯ ಮನೆಯ ಟಾಯ್ಲೆಟ್ ನಲ್ಲಿ ಹೆಬ್ಬಾವೊಂದು ಆರಾಮಾಗಿ ಮಲಗಿತ್ತು!
ಶುಕ್ರವಾರ ಕಚೇರಿಯಿಂದ ಮನೆಗೆ ಬಂದ ನಿಕೋಲೋ ಎರ್ರಿ ಬಾತ್ ರೂಂ ಕಡೆ ಹೆಜ್ಜೆ ಹಾಕಿದ್ದಾರೆ. ಆಗ ಟಾಯ್ಲೆಟ್ ಕಮೋಡ್ ಒಳಗೆ ಕಪ್ಪುದಾದ ವಸ್ತು ಗೋಚರವಾಗಿದೆ. ಹಾವಿನ ತಲೆ ನಿಧಾನಕ್ಕೆ ಕಾಣಿಸಿದೆ. ಇದಾದ ಮೇಲೆ ಒಂದು ಕ್ಷಣವನ್ನೂ ವೇಸ್ಟ್ ಮಾಡದೆ ಮಹಿಳೆ ಉರಗ ಸೆರೆ ಹಿಡಿಯುವವರಿಗೆ ಕರೆ ಮಾಡಿದ್ದಾರೆ.
ನಿಜ ನಾಗರಕ್ಕೆ ಪೂಜೆ ಮಾಡುವ ಶಿರಸಿಯ ಕುಟುಂಬ
ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ಹಾವು ಕಂಡು ಬಂದ ಪಕ್ಕದ ರೂಂ ಟಾಯ್ಲೆಟ್ ಅನ್ನು ಕೆರ್ರಿ ಸಹೋದರಿ ಬಳಕೆ ಮಾಡುತ್ತಿದ್ದರು. ಇಬ್ಬರು ನೈಟ್ ಔಟ್ ಹೊರಡುವ ತಯಾರಿಯಲ್ಲಿ ಇದ್ದರು.
ಒಂದು ಹಾವಿನ ಕತೆ ಮುಗಿಯಿತು.. ಎಂದು ಹೊರಗೆ ಹೊರಟಾಗ ಮತ್ತೊಮ್ಮೆ ಭಯದಿಂದಲೇ ಬಾಥ್ ರೂಂ ಪರಿಶೀಲನೆ ಮಾಡಿದ್ದಾರೆ. ಪಕ್ಕದ ಬಾತ್ ರೂಂ ನಲ್ಲಿಯೂ ಒಂದು ಹೆಬ್ಬಾವು ಕಂಡಿದೆ! ಈ ಸಂಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾವು ಹಿಡಿಯಲು ಹೋಗಿದ್ದ ವ್ಯಕ್ತಿ ಹಂಚಿಕೊಂಡಿದ್ದು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೆ ದಿನದ ಅವಧಿಯಲ್ಲಿ ಸೇಮ್ ಅಡ್ರೆಸ್ ನಲ್ಲಿ ಎರಡು ಹಾವು ಹಿಡಿಯಬೇಕಾಗಿ ಬಂತು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.