ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಯ ಎಟಿಎಂ ಕಾರ್ಡ್ ಕಳುವು; ಕಳ್ಳನಿಗಾಗಿ ಪೊಲೀಸರ ಶೋಧ

By Suvarna Web DeskFirst Published Aug 31, 2017, 10:20 PM IST
Highlights

ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಯ ಎಟಿಎಂ ಕಾರ್ಡ್​​​ ಕದ್ದ ಕಳ್ಳನೊಬ್ಬ ಬರೋಬ್ಬರಿ 70 ಸಾವಿರದಷ್ಟು ಹಣವನ್ನ ಕದ್ದು ಎಸ್ಕೇಪ್​ ಆಗಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಆ.31): ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಯ ಎಟಿಎಂ ಕಾರ್ಡ್​​​ ಕದ್ದ ಕಳ್ಳನೊಬ್ಬ ಬರೋಬ್ಬರಿ 70 ಸಾವಿರದಷ್ಟು ಹಣವನ್ನ ಕದ್ದು ಎಸ್ಕೇಪ್​ ಆಗಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಬಾಲಮುಕುಂದ್​​ ಹಣ ಕಳೆದುಕೊಂಡ ವ್ಯಕ್ತಿ. ಇದೇ ತಿಂಗಳ ಆಗಸ್ಟ್​​ 26 ರನೇ ತಾರೀಖು ಬಾಲಮುಕುಂದ್​ ಯಶವಂತಪುದ ರೈಲ್ವೇ ಸ್ಟೇಷನ್​​ ಬಳಿಯ ಎಟಿಎಂವೊಂದರಲ್ಲಿ  ಹಣ ಡ್ರಾ ಮಾಡಲು ಹೋಗಿದ್ದಾರೆ. ಈ ವೇಳೆ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಅಪರಿಚಿತ ವ್ಯಕ್ತಿ  ಕಾರ್ಡ್​​ ಸ್ವೈಪ್​ ಅಗುತ್ತಿಲ್ಲ ಎಂದು ನಾಟಕವಾಡಿ, ಬಾಲಮುಕುಂದ್​​ಗೆ ಹಣ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಬಾಲಮುಕುಂದ್​ ತನ್ನ ಎಟಿಎಂ ನಿಂದ ಹಣ ಡ್ರಾ ಮಾಡಿಕೋಳ್ಳುತ್ತಿದ್ದ ವೇಳೆ ಎಟಿಎಂನ ಪಿನ್​ ನಂಬರ್​ ನೋಡಿಕೊಂಡ ಅಪರಿಚಿತ ವ್ಯಕ್ತಿ ಬಾಲಮುಕುಂದ್​ ಎಟಿಎಂ ಕದ್ದು ಬರೋಬ್ಬರಿ 40 ಸಾವಿರದಷ್ಟು ಹಣ ಡ್ರಾ ಮಾಡಿಕೊಂಡು ಎಸ್ಕೇಪ್​ ಆಗಿದ್ದಾನೆ. ಆರ್​ಎಂಸಿ ಯಾರ್ಡ್​​ನ ಎಟಿಎಂನಲ್ಲಿ 42 ಸಾವಿರ ಪಕ್ಕದಲ್ಲಿದ್ದ ನಮೃತ ಪೆಟ್ರೋಲ್​ ಬಂಕ್​'ನಲ್ಲಿ 28 ಸಾವಿರ ಹಣ ಡ್ರಾ ಮಾಡಿದ್ದಾನೆ. ಪೆಟ್ರೋಲ್​ ಬಂಕ್​  ಕ್ಯಾಶಿಯರ್​ಗೆ  2 ಸಾವಿರ ಲಂಚ ಕೊಟ್ಟು 26 ಸಾವಿರ ಹಣ ಪಡೆದ ಅಪರಿಚಿತ ವ್ಯಕ್ತಿ ಎಸ್ಕೇಪ್​ ಆಗ್ತಿದ್ದ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Latest Videos

click me!