ಶಾಸಕ ಸಿ.ಟಿ ರವಿಗೆ ಮುಖ್ಯಮಂತ್ರಿ ಪಟ್ಟದ ಯೋಗ

Published : Aug 03, 2019, 01:46 PM ISTUpdated : Aug 03, 2019, 02:20 PM IST
ಶಾಸಕ ಸಿ.ಟಿ ರವಿಗೆ ಮುಖ್ಯಮಂತ್ರಿ ಪಟ್ಟದ ಯೋಗ

ಸಾರಾಂಶ

ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ. ಹೀಗೆಂದು ಅವಧೂತರೋರ್ವರು ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರು [ ಆ.03]: ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. 

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ.  ಅರ್ಜುನ ಅವಧೂತ ಗುರೂಜಿ ಸಿ.ಟಿ ರವಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ. 

ರಮೇಶ್‌ ಜಾರಕಿಹೊಳಿ ಮನೆಗೆ ಯೋಗೇಶ್ವರ್‌!

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಕ್ತರ ಮನೆಗೆ ಭೇಟಿ ನೀಡಿದ್ದ ಅರ್ಜುನ ಅವಧೂತ ಸ್ವಾಮೀಜೀ  ಮುಂದಿನ ಎರಡು ವರ್ಷಗಳ ನಂತರ ಸಿ.ಟಿ. ರವಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. 

ಅತೃಪ್ತರ ಸಹಾಯ ಒಪ್ಪಿಕೊಂಡ ಬಿಜೆಪಿ ನಾಯಕ ? ಮಂತ್ರಿ ಸ್ಥಾನ ಪಕ್ಕಾ!

ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ವಾರಗಳು ಕಳೆದರೂ ಕೂಡ ಸಂಪುಟ ವಿಸ್ತರಣೆಯಾಗಿಲ್ಲ. ಹೈ ಕಮಾಂಡ್ ಒಪ್ಪಿಗೆ ದೊರೆಯಲು ಕಾಯುತ್ತಿದ್ದು, ಸಿ.ಟಿ ರವಿ ಹೆಸರು ಇದೀಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಯೋಗದ ಬಗ್ಗೆ ಸ್ವಾಮೀಜಿಯೋರ್ವರು ಭವಿಷ್ಯ ನುಡಿದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುತೂಹಲಕ್ಕೆ ಅಶ್ಲೀಲ ವಿಡಿಯೋ ಹುಡುಕಿದವನಿಗೆ ಶಾಕ್, ಗೆಳತಿ ಜೊತೆಗಿನ ತನ್ನದೇ ಕ್ಲಿಪ್ ನೋಡಿ ಕಂಗಾಲು
Raichur Utsava 2026: ರಾಯಚೂರು ಉತ್ಸವದಲ್ಲಿ ಗ್ಯಾರೆಂಟಿ ಸಮಾವೇಶ; ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಕೃಷಿಮೇಳ!