ಅವಿಶ್ವಾಸಕ್ಕೆ ಸೋಲು; ಕಾಂಗ್ರೆಸ್'ಗೆ ಮುಖಭಂಗ; ಬಿಜೆಪಿಯ ಶಂಕರಮೂರ್ತಿ ಸೇಫ್

By Suvarna Web DeskFirst Published Jun 15, 2017, 1:59 PM IST
Highlights

ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಇಂದು ಮೇಲ್ಮನೆಯಲ್ಲಿ ಚುನಾವಣೆ ನಡೆಯಿತು. ತಲೆ ಎಣಿಕೆ ಮೂಲಕ ನಿರ್ಣಯದ ಪರ ಮತ್ತು ವಿರೋಧ ಮತಗಳನ್ನ ಎಣಿಕೆ ಮಾಡಲಾಯಿತು.

ಬೆಂಗಳೂರು(ಜೂನ್ 15): ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಕೆಳಗಿಸಲು ಕಾಂಗ್ರೆಸ್ ಪಟ್ಟ ಅತೀವ ಶ್ರಮ ನಿರುಪಯುಕ್ತವಾಗಿದೆ. ಸಭಾಪತಿ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪರಿಷತ್'ನಲ್ಲಿ ಸೋಲುಂಟಾಗಿದೆ. ಒಂದು ಮತದ ಅಂತರದಿಂದ ಸಭಾಪತಿ ಬಚಾವಾಗಿದ್ದಾರೆ. ಕಾಂಗ್ರೆಸ್'ನ ಅವಿಶ್ವಾಸ ನಿರ್ಣಯದ ಪರವಾಗಿ 36 ಮತಗಳು ಚಲಾಯಿತವಾದರೆ, ನಿರ್ಣಯದ ವಿರುದ್ಧವಾಗಿ 37 ಮತಗಳು ಬಂದಿವೆ. ಈ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.

ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಇಂದು ಮೇಲ್ಮನೆಯಲ್ಲಿ ಚುನಾವಣೆ ನಡೆಯಿತು. ತಲೆ ಎಣಿಕೆ ಮೂಲಕ ನಿರ್ಣಯದ ಪರ ಮತ್ತು ವಿರೋಧ ಮತಗಳನ್ನ ಎಣಿಕೆ ಮಾಡಲಾಯಿತು.

ವಿಧಾನಪರಿಷತ್'ನಲ್ಲಿ ಕಾಂಗ್ರೆಸ್ 33 ಸ್ಥಾನಗಳನ್ನು ಹೊಂದಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಒಟ್ಟು ಸೇರಿ 34 ಸ್ಥಾನಗಳನ್ನು ಹೊಂದಿವೆ. ಐವರು ಪಕ್ಷೇತರರ ಪೈಕಿ ಇಬ್ಬರು ನಿರ್ಣಯದ ವಿರುದ್ಧವಾಗಿ, ಅಂದರೆ ಶಂಕರಮೂರ್ತಿ ಪರವಾಗಿ ಮತ ಚಲಾಯಿಸಿದ್ದಾರೆ. ಜೆಡಿಎಸ್ ಜೊತೆ ಪಕ್ಷೇತರರೂ ಸೇರಿಕೊಂಡು ಬಿಜೆಪಿಯ ಮಾನ ಉಳಿಸಿದ್ದಾರೆ.

ಇನ್ನು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಡಿಎಚ್ ಶಂಕರಮೂರ್ತಿ ಅವರೇ ಸಭಾಪತಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

click me!