ಮುಸ್ಲೀಮರಿಗೆ 'ಮಾನ್ಯತೆ' ನೀಡಿದ್ದೇವೆ ಎನ್ನಲು ಬಿಜೆಪಿ ಯಾರು?

Published : Apr 22, 2017, 10:47 AM ISTUpdated : Apr 11, 2018, 12:59 PM IST
ಮುಸ್ಲೀಮರಿಗೆ 'ಮಾನ್ಯತೆ' ನೀಡಿದ್ದೇವೆ ಎನ್ನಲು ಬಿಜೆಪಿ ಯಾರು?

ಸಾರಾಂಶ

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ನಿನ್ನೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತಾ, ಮುಸ್ಲಿಂಮರಿಗೆ ಮಾನ್ಯತೆ ಕೊಟ್ಟಿದ್ದೇವೆ ಎನ್ನಲು ಬಿಜೆಪಿ ಯಾರು?  ಸಂವಿಧಾನವು ನಮಗೆ ಹಕ್ಕನ್ನು ನೀಡಿದೆ. ಸಂವಿಧಾನವು ನಮ್ಮ ಹಕ್ಕುಗಳನ್ನು ರಕ್ಷಿಸುತ್ತಿದೆ ಎಂದು ಲೋಕಸಭಾ ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.

ನವದೆಹಲಿ (ಏ.22): ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ನಿನ್ನೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತಾ, ಮುಸ್ಲಿಂಮರಿಗೆ ಮಾನ್ಯತೆ ಕೊಟ್ಟಿದ್ದೇವೆ ಎನ್ನಲು ಬಿಜೆಪಿ ಯಾರು?  ಸಂವಿಧಾನವು ನಮಗೆ ಹಕ್ಕನ್ನು ನೀಡಿದೆ. ಸಂವಿಧಾನವು ನಮ್ಮ ಹಕ್ಕುಗಳನ್ನು ರಕ್ಷಿಸುತ್ತಿದೆ ಎಂದು ಲೋಕಸಭಾ ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.

ರವಿಶಂಕರ್ ಪ್ರಸಾದ್ ಹೇಳಿಕೆಯನ್ನು ಕಾಂಗ್ರೆಸ್ ಕೂಡಾ ಖಂಡಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಸಮಾಜದ ಒಂದು ನಿರ್ದಿಷ್ಟ ವರ್ಗವು  ತಮಗೆ ವೋಟ್ ನೀಡುವುದಿಲ್ಲ ಎನ್ನುವುದನ್ನು ಕೆಲವರು ಹೇಳುತ್ತಿರುತ್ತಾರೆ. ಇದಕ್ಕೆ ಕಾರಣವೇನೆಂದು ನನಗೆ ಅರ್ಥವಾಗಿಲ್ಲ. ಈ ‘ಮಾನ್ಯತೆ’ ವಿಚಾರ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.  

ಮುಸ್ಲೀಂಮರು  ಬಿಜೆಪಿಗೆ ವೋಟ್ ನೀಡದೇ ಇದ್ದರೂ ನಾವು ಅವರಿಗೆ ಮಾನ್ಯತೆ ನೀಡಿದ್ದೇವೆ. ನಾವು ದೇಶವನ್ನು ಆಳುತ್ತಿದ್ದೇವೆ. 13 ಮಂದಿ ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಸೇವಾಕ್ಷೇತ್ರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮುಸ್ಲೀಂ ವ್ಯಕ್ತಿಯನ್ನು ನಾವು ಬಲಿಪಶು ಮಾಡಿದ್ದೇವಾ? ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವಾ? ನಾವು ಮುಸ್ಲೀಂ ಮತವನ್ನು ಪಡೆಯದೇ ಇದ್ದರೂ ನಾವು ಅವರಿಗೆ ಗೌರವವನ್ನು ನೀಡಿದ್ದೇವೆ ಎಂದು ರವಿ ಶಂಕರ್ ಪ್ರಸಾದ್ ನಿನ್ನೆ ಹೇಳಿಕೆ ನೀಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ: ಸಚಿವ ಮಧು ಬಂಗಾರಪ್ಪ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ