
ಬಾಗಲಕೋಟೆ(ಎ.22): ಗಲಾಟೆಯಲ್ಲಿ ಗಾಯಗೊಂಡು ವ್ಯಕ್ತಿಯನ್ನ 108 ಆ್ಯಂಬುಲೆನ್ಸ್ ವಾಹನದಲ್ಲಿ ಕೊಂಡೊಯ್ಯುವ ವೇಳೆ ಗಾಯಾಳು ಮೇಲೆ ಸ್ನೇಹಿತರಿಬ್ಬರು ಕುಡಿದ ಮತ್ತಿನಲ್ಲಿ ಮನಬಂದಂತೆ ಥಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟಿ ಗ್ರಾಮದ ಲಂಕೆಪ್ಪ ಎಂಬಾತ ಗಾಯಾಳು ಆಗಿದ್ದು, ಆತನ ಸ್ನೇಹಿತರೇ ಌಂಬುಲೆನ್ಸ್'ನಲ್ಲಿ ಥಳಿಸಿದ್ದಾರೆ. ಇನ್ನು ಈ ಮೂವರು ಸ್ನೇಹಿತರು ಜಾತ್ರೆಗೆ ಹೋಗಿ ಬರುವ ವೇಳೆ ಕಲಾದಗಿ ಬಳಿ ಕುಡಿದು ಜಗಳವಾಡಿಕೊಂಡಿದ್ದಾರೆ.
ಈ ವೇಳೆ ತೀವ್ರವಾಗಿ ಗಾಯಗೊಂಡ ಲಂಕೆಪ್ಪನನ್ನ 108 ಌಂಬುಲೆನ್ಸ್ ವಾಹನ ತರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದಾರಿ ಮಧ್ಯೆ ಆತನಿಗೆ ಥಳಿಸಿದ್ದಾರೆ. ಅಲ್ಲದೆ ನಮಗೆ ಸಿಎಂ ಸಿದ್ದರಾಮಯ್ಯಗೊತ್ತು, ಶಾಸಕ ಚಿಮ್ಮನಕಟ್ಟಿಯವರೂ ಗೊತ್ತು, ನಮಗೆ ಯಾರೇನು ಮಾಡ್ತಾರೆ ಅಂತ ಉದ್ಘರಿಸಿದ್ದಾರೆ. ಈ ಮಧ್ಯೆ ಆತನನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಳಿಕ ಚಿಕಿತ್ಸೆ ಪಡೆದು ಲಂಕೆಪ್ಪ ಗುಣಮುಖನಾಗಿದ್ದು, ಆತನ ಸಂಬಂಧಿಕರು ಥಳಿಸಿದವರ ವಿರುದ್ಧ ಕಲಾದಗಿ ಪೋಲಿಸ ಠಾಣೆಯಲ್ಲಿ ದಾಖಲಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.