ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕೆ ಹೂಡಿಕೆಯ 5 ರೀತಿಗಳು

Published : Jul 19, 2017, 07:50 PM ISTUpdated : Apr 11, 2018, 12:39 PM IST
ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕೆ ಹೂಡಿಕೆಯ 5 ರೀತಿಗಳು

ಸಾರಾಂಶ

ಮಗುವೊಂದರ ತಂದೆ/ತಾಯಿಯಾಗುವುದು ಒಂದು ಅದ್ಭುತವಾದ ಅನುಭವ; ಜತೆಗೆ ಆಯಾಸಕರ ಕೂಡಾ. ಮಗು ಜನಿಸಿದಿನಿಂದ ಅದರ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಂದು ಸಣ್ಣ ಸಣ್ಣ ಬೇಕು-ಬೇಡಗಳ ಬಗ್ಗೆ ಹೆತ್ತವರು ಚಿಂತಿತರಾಗಿರುತ್ತಾರೆ. ಮಗುವಿನೊಂದಿಗೆ ವೆಚ್ಚವೂ ಕೂಡಾ ಬೆಳೆಯುದರಿಂದ, ಆ ಪ್ರಕ್ರಿಯೆಯಲ್ಲಿ ಹಣಕಾಸು ಯೋಜನೆ ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಮಗುವೊಂದರ ತಂದೆ/ತಾಯಿಯಾಗುವುದು ಒಂದು ಅದ್ಭುತವಾದ ಅನುಭವ; ಜತೆಗೆ ಆಯಾಸಕರ ಕೂಡಾ. ಮಗು ಜನಿಸಿದಿನಿಂದ ಅದರ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಂದು ಸಣ್ಣ ಸಣ್ಣ ಬೇಕು-ಬೇಡಗಳ ಬಗ್ಗೆ ಹೆತ್ತವರು ಚಿಂತಿತರಾಗಿರುತ್ತಾರೆ. ಮಗುವಿನೊಂದಿಗೆ ವೆಚ್ಚವೂ ಕೂಡಾ ಬೆಳೆಯುದರಿಂದ, ಆ ಪ್ರಕ್ರಿಯೆಯಲ್ಲಿ ಹಣಕಾಸು ಯೋಜನೆ ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಶಿಕ್ಷಣವು ದಿನದಿಂದ ದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ, ಮಗುವಿನ ಶಿಕ್ಷಣದ ಖರ್ಚಿನ ಯೋಜನೆ ಹಾಕಿಕೊಳ್ಳುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಉದಾಹರಣೆಗೆ, ಇಂದು MBA ಓದಿಸಬೇಕಾದರೆ ಸುಮಾರು 10 ರಿಂದ 20 ಲಕ್ಷದವೆರಗೆ ಹಣದ ಅಗತ್ಯವಿದೆ.  15 ವರ್ಷಗಳ ಬಳಿಕ ಇದೇ ಕೋರ್ಸ್’ಗೆ ಸುಮಾರು 30 ರಿಂದ 50 ಲಕ್ಷ ಹಣ ಬೇಕಾಗಬಹುದು. ಇದು ಶಿಕ್ಷಣದ ಬಗ್ಗೆಯಾದರೆ, ಜೀವನದ ಇತರ ಖರ್ಚುಗಳು, ಪುಸ್ತಕಗಳು, ಇತ್ಯಾದಿ ಇತ್ಯಾದಿಗಳಲ್ಲಿ ಅಂದಾಜು ಶೇ.20ರಷ್ಟು ಹೆಚ್ಚಳವಾಗುತ್ತದೆ. ಇತರ ಕೋರ್ಸ್’ಗಳಿಗೂ ಇದು ಅನ್ವಯಿಸುತ್ತದೆ.

ಜನಿಸಿದ ಮಗು ತನ್ನ ಎಲ್ಲಾ ಅಗತ್ಯಗಳಿಗೂ ನಿಮ್ಮನ್ನೇ ಅವಲಂಬಿಸಿರುವುದರಿಂದ  ನಿಮ್ಮ ಹೊಣೆಗಾರಿಕೆಗಳು ಕೂಡಾ  ಹೆಚ್ಚಾಗುತ್ತವೆ.  ಮಕ್ಕಳ ಉತ್ತಮ ಭವಿಷ್ಯ, ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಆರ್ಥಿಕ ಸುಭದ್ರತೆ ಬಹಳ ಮುಖ್ಯವಾಗಿದೆ. ಮಕ್ಕಳ ಭವಿಷ್ಯ ರೂಪಿಸಲು ಈ ಕೆಳಕಂಡ ಹೂಡಿಕೆಯ ವಿಧಾನಗಳು ನಿಮಗೆ ಸಹಕಾರಿಯಾಗಬಹುದು.

1. ಮ್ಯೂಚುವಲ್ ಫಂಡ್’ಗಳಲ್ಲಿ ಹೂಡಿಕೆ:

ಸಂಪತ್ತು ಗಳಿಕೆಗೆ ಮ್ಯೂಚುವಲ್ ಫಂಡ್’ಗಳು ಒಂದು ಆದರ್ಶ ಆಯ್ಕೆಯೆಂದು ಹೇಳಬಹುದು. ತಮ್ಮ ತಮ್ಮ ಅನುಕೂಲ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ  ಬೇರೆ ಬೇರೆ ರಿಸ್ಕ್ ಮಟ್ಟವಿರುವ ವಿವಿಧ ಕಡೆಗಳಲ್ಲಿ ಹಣವನ್ನು ಆಸಕ್ತರು ಹೂಡಬಹುದಾಗಿದೆ.  ಉದಾಹರಣೆಗೆ, ಈಕ್ವಿಟಿ, ಬ್ಯಾಲೆನ್ಸ್’ಡ್, ಹಾಗೂ ಡೆಬ್ಟ್ ಎಂಬ 3 ರೀತಿಯ ಮ್ಯೂಚುವಲ್ ಫಂಡ್ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯಯಿವೆ.

ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರಿಂದ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್’ಗಳಲ್ಲಿ ರಿಸ್ಕ್ ಪ್ರಮಾಣ ಹೆಚ್ಚಿದೆ. ಈಕ್ವಿಟಿ ಮ್ಯೂಚುವಲ್ ಫಂಡ್’ಗೆ ಹೋಲಿಸಿದಾಗ  ಬ್ಯಾಲೆನ್ಸ್’ಡ್ ಮ್ಯೂಚುವಲ್ ಫಂಡ್ ಸಂತುಲಿತವಾಗಿರುತ್ತದೆ, ಏಕೆಂದರೆ ಇಲ್ಲಿ ಒಂದು ಭಾಗ ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್’ನಲ್ಲೂ, ಇನ್ನೊಂದು ಭಾಗವನ್ನು ಡೆಬ್ಟ್ ಮ್ಯೂಚುವಲ್ ಫಂಡ್’ನಲ್ಲೂ ಹೂಡಲಾಗುತ್ತದೆ. ಡೆಬ್ಟ್ ಮ್ಯೂಚುವಲ್ ಫಂಡ್’ನಲ್ಲಿ ರಿಸ್ಕ್ ಪ್ರಮಾಣ ಇನ್ನೂ ಕಡಿಮೆಯಾಗಿರುತ್ತದೆ.

ಲಾಭಾಂಶವು ರಿಸ್ಕ್ ಮೇಲೆ ಅವಲಂಬಿತವಾಗಿರುವುದು ಧನಾತ್ಮಕ ಅಂಶವಾಗಿದೆ. ಆದರೆ ಹೂಡಿಕೆದಾರರಿಗೆ ಮಾರುಕಟ್ಟೆಯ ಏರುಪೇರುಗಳನ್ನು ಎದುರಿಸಬೇಕಾದ ಸಂಯಮ ಇರುವುದು ಅತ್ಯಗತ್ಯ. ಈಕ್ವಿಟಿ ಮ್ಯೂಚುವಲ್ ಫಂಡ್’ನಲ್ಲಿ ಹೂಡಿಕೆ ಮಾಡುವುದರಲ್ಲಿ ರಿಸ್ಕ್ ಜತೆ, ದೀರ್ಘಾವಧಿಯಲ್ಲಿ ಹೆಚ್ಚು ಲಾಭಾಂಶವವು ಇದೆ. ಅಲ್ಪಾವಧಿಯಲ್ಲಿ ಶೇರು ದರಗಳು ಪದೇಪದೇ ಏರುಪೇರಾಗುತ್ತದೆ. ಇದು ಸಾಮಾನ್ಯ ಹೂಡಿಕೆದಾರರನ್ನು ಆತಂಕಕ್ಕೊಳಪಡಿಸುತ್ತದೆ. ಹೂಡಿಕೆದಾರರು ತಾಳ್ಮೆ ವಹಿಸಿದರೆ, ಕಾಯಿದರೆ, ಅವರಿಗೆ ಸಿಗುವ ಲಾಭಾಂಶವು ಅದ್ಭುತವಾಗಿರುತ್ತದೆ.

ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣಕಾಸು ಯೋಜನೆ ಬಯಸುವವರು ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್’ಗಳಲ್ಲಿ ಹಣ ಹೂಡುವುದು ಹೆಚ್ಚು ಸೂಕ್ತವಾಗಿವೆ. ಈಕ್ವಿಟಿ ಮ್ಯೂಚುವಲ್ ಫಂಡ್’ನಲ್ಲೂ ಬೇರೆ ಬೇರೆ ವಿಧಗಳಿವೆ. ದೀರ್ಘಾವಧಿ ಲಾಭ ಹಾಗೂ ವೆಚ್ಚ ಮುಂತಾದವುಗಳನ್ನು ಲೆಕ್ಕ ಹಾಕುವ ಮೂಲಕ ಅದರಲ್ಲಿ ಸೂಕ್ತವಾದುದರಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆಯ ಏರುಪೇರುಗಳನ್ನು ಸಮರ್ಥವಾಗಿ ಎದುರಿಸುವಂತಾಗಲು ವ್ಯವಸ್ಥಿತ ಹೂಡಿಕೆ ಯೋಜನೆ (Systematic Investment Plan-SIP) ವಿಧಾನದ ಮೂಲಕ ಹಣವನ್ನು ಹೂಡಬಹುದು.  

2.ರಿಯಲ್ ಎಸ್ಟೇಟ್’ನಲ್ಲಿ ಹೂಡಿಕೆ:

ಭಾರತದ ಜನಸಂಖ್ಯೆಯು ಹೆಚ್ಚುತ್ತಿದೆ. ಆದುದರಿಂದ ಜಮೀನಿಗೆ ಬೇಡಿಕೆಯು ಹೆಚ್ಚುತ್ತಿದೆ.  ಆದುದರಿಂದ ರಿಯಲ್ ಎಸ್ಟೇಟ್’ನಲ್ಲಿ ಹಣ ಹೂಡುವುದು ಒಳ್ಳೆಯ ಆಯ್ಕೆಯಾಗಿದೆ. ಇಂದು ದೊಡ್ಡ ದೊಡ್ಡ ನಗರಗಳಲ್ಲಿ ಜಮೀನು ಖರೀದಿಸುವುದು ಕಷ್ಟಕರವಾಗಿರುವುದರಿಂದ, ಹೆತ್ತವರು ಟೈರ್-2 ಅಥವಾ ಟೈರ್-3 ನಗರಗಳಲ್ಲಿ ಹಣವನ್ನು ಹೂಡಬಹುದು. ದೊಡ್ಡ ನಗರಗಳಿಗೆ ಹೋಲಿಸಿದಾಗ ಸಣ್ಣ ನಗರ/ಪಟ್ಟಣಗಳಲ್ಲಿ ಜಮೀನನ್ನು ಖರೀದಿಸುವುದು ಹಾಗೂ ಮಾರುವುದು ಸುಲಭ.

3. ಚಿನ್ನದೊಂದಿಗೆ ಚಿನ್ನದಂಥ ಹೊಳೆಯುವ ಭವಿಷ್ಯ:

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹಳದಿ ಲೋಹವಿಲ್ಲದೇ ಮದುವೆಯನ್ನು ಕಲ್ಪಿಸಿಕೊಳ್ಳುವಂತಿಲ್ಲ! ಭಾರತೀಯ ಸಂಸ್ಕೃತಿಯಲ್ಲಿ ಬಂಗಾರವು ಸಮೃದ್ಧಿಯ ಸಂಕೇತವಾಗಿದೆ.  ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿದೆ, ಆದರೆ ಭವಿಷ್ಯದಲ್ಲಿ ಹೇಗಿರಬಹುದು ಎಂಬುವುದನ್ನು ಹೇಳಲಾಗದು. ಚಿನ್ನದ ಬೆಲೆಯು ಭವಿಷ್ಯದಲ್ಲಿ ಏರಿಕೆಯಾಗುವ ಸಾಧ್ಯತೆಗಳು ಇವೆ. ಭವಿಷ್ಯದ ದೃಷ್ಟಿಯಿಂದ ಈಗಲೇ ಚಿನ್ನದಲ್ಲಿ ಹಣ ಹೂಡುವುದು ಬುದ್ದಿವಂತಿಕೆಯ ನಿರ್ಧಾರವಾಗಬಹುದು.

4. ಉತ್ತಮ ನಾಳೆಗಾಗಿ ಉತ್ತಮ ವಿಮೆ:

ಮ್ಯೂಚುವಲ್ ಫಂಡ್, ಜಮೀನು, ಚಿನ್ನ ಹಾಗೂ ಇನ್ನಿತರ ಕಡೆ ಹಣ ಹೂಡುವಾಗ ಉತ್ತಮವಾದ ವಿಮಾ ಯೋಜನೆಯಲ್ಲಿ ಹಣವನ್ನು ಹೂಡಲು ಮರೆಯಬೇಡಿ. ಇದು ನಿಮ್ಮ ಅನುಪಸ್ಥಿತಿಯಲ್ಲೂ ಕೆಲಸಕ್ಕೆ ಬರುವುದು. ಜೀವನವು ಊಹೆಗೆ ಮೀರಿದ್ದು.  ಶಿಕ್ಷಣ,  ವಿವಾಹ, ಹಾಗೂ ಇನ್ನಿತರ ಅಗತ್ಯಗಳನ್ನು ಪೂರೈಸುವಂತಹ ವಿಮಾ ಯೋಜನೆಯಲ್ಲಿ ಹಣವನ್ನು ತೊಡಗಿಸುವುದು ಅಗತ್ಯವಾಗಿದೆ. ಆ  ನಿಟ್ಟಿನಲ್ಲಿ ‘ಟರ್ಮ್ ಪ್ಲಾನ್’ಗಳು ಸೂಕ್ತ ಆಯ್ಕೆಯಾಗಿವೆ. ಅದರಲ್ಲಿ ಪ್ರೀಮಿಯಂ ಪ್ರಮಾಣ ಕೂಡಾ ಕಡಿಮೆಯಾಗಿದೆಯಲ್ಲದೇ, ಹಿಂಬರುವ ಮೊತ್ತವೂ ಹೆಚ್ಚಿದೆ.  ಆದರೆ ಯೋಜನೆಯ ಬಳಿಕವೂ ವಿಮಾದಾರನು ಬದುಕಿದ್ದಲ್ಲಿ, ಆತನಿಗೆ  ವಿಮೆಯಿಂದ ಏನು ಸಿಗುವುದಿಲ್ಲ,

5.  ವಿಮೆ ಕಂಪನಿಗಳ ಮಕ್ಕಳಿಗಾಗಿರುವ ಯೋಜನೆಗಳು

ಬೇರೆ ಬೇರೆ ವಿಮಾ ಕಂಪನಿಗಳು ಮಕ್ಕಳಿಗಾಗಿಯೇ ವಿವಿಧ ರೀತಿಯ ವಿಮಾ ಯೋಜನೆಗಳನ್ನು ಹೊಂದಿವೆ.  ಈ ಯೋಜನೆಗಳ ಮುಖ್ಯ ಅಂಶಗಳನ್ನು ತಿಳಿದುಕೊಳ್ಳಿ. ತಮಗೇನು ಲಾಭ/ ಪ್ರಯೋಜನ ಇದೆ ಎಂದು ಅರಿತು ನಿರ್ಧಾರ ಕೈಗೊಳ್ಳಿ.

ಇದರ ಜತೆಗೆ, ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು,  ಅದರಲ್ಲಿ ನಿಯಮಿತವಾಗಿ ಹಣವನ್ನು ಡಿಪಾಸಿಟ್ ಮಾಡುತ್ತಾ ಇರಿ. ಮಕ್ಕಳ ಹೆಸರಿನಲ್ಲಿ ರಿಕರಿಂಗ್ ಡಿಪಾಸಿಟ್ (RD)  ಅಥವಾ ದೀರ್ಘಾವಧಿ ಫಿಕ್ಸೆಡ್ ಡಿಪಾಸಿಟ್ (FD)ನಲ್ಲೂ ಹಣ ಹೂಡಬಹುದು. ಮಕ್ಕಳಿಗಾಗಿ ಯಾವುದೇ ಉತ್ಪನ್ನದಲ್ಲಿ ಹಣ ಹೂಡುವಾಗ ಅದರೊಂದಿಗಿರುವ ರಿಸ್ಕ್, ಅಲ್ಪಾವಧಿ/ ದೀರ್ಘಾವಧಿ ಲಾಭ/ಪ್ರಯೋಜನ ಇತ್ಯಾದಿ ವಿಷಯಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳಿ ಹಾಗೂ ನಿರ್ಧಾರ ಕೈಗೊಳ್ಳಿ.

ಆಧಿಲ್ ಶೆಟ್ಟಿ

ಸಿಇಓ, ಬ್ಯಾಂಕ್ ಬಝಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ