
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಜೆಮ್ ಕಂಪನಿ ನಡೆಸಿದ ಅಕ್ರಮ ಮೈನಿಂಗ್ ಕುರಿತು ಸುವಣ೯ನ್ಯೂಸ್ ನ ಕವರ್ ಸ್ಟೋರಿ ತಂಡ ವರದಿ ಮಾಡುತ್ತಲೇ ಇತ್ತ ಬಾಗಲಕೋಟೆ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಲಿಂಗರಾಜ್ ಅವರನ್ನ ಸಕಾ೯ರ ಎತ್ತಂಗಡಿ ಮಾಡಿದೆ.
ಇದೀಗ ಅಕ್ರಮ ಮೈನಿಂಗ್ ನಡೆದಿದೆ ಎನ್ನುವುದರ ಬಗ್ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ರಾಜ್ಯವೇ ಬೆಚ್ಚಿ ಬೀಳುವಂತಹ ಜೆಮ್ ಕಂಪನಿಯ ಅಕ್ರಮ ಮೈನಿಂಗ್ ಕುರಿತು ವಿಸ್ತ್ರತ ವರದಿ ನೀಡಿತ್ತು, ಈ ಸಂಬಂಧ ಕರವೇ ಘಟಕ ಬೀದಿಗಿಳಿದು ಹೋರಾಟ ಮಾಡಿತ್ತು, ಇದೀಗ ಮೊದಲ ಹಂತವಾಗಿ ಜಿಲ್ಲಾ ಮಟ್ಟದ ಅಧಿಕಾರಿ ಎತ್ತಂಗಡಿಯಾಗಿದ್ದು, ಇದು ಸುವಣ೯ನ್ಯೂಸ್ ಕವರ್ ಸ್ಟೋರಿ ಇಂಪ್ಯಾಕ್ಟ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.