
ಬೆಂಗಳೂರು(ಮೇ 22): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ರಾಜ್ಯ ತನಿಖಾಧಿಕಾರಿಗಳಿಗೂ ಅನುಮಾನ ಮೂಡಿಸಿದೆ. ಉತ್ತರ ಪ್ರದೇಶದ ಲಖನೌಗೆ ರಾಜ್ಯದ 6 ಅಧಿಕಾರಿಗಳ ತಂಡ ತೆರಳಿತ್ತು. 6 ಅಧಿಕಾರಿಗಳ ಪೈಕಿ ಇಬ್ಬರು ಅಧಿಕಾರಿಗಳಿಗೆ ತಿವಾರಿ ಸಾವು ಅನುಮಾನ ಮೂಡಿಸಿದ್ದು, ಈ ಬಗ್ಗೆ ಸುವರ್ಣ ನ್ಯೂಸ್'ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯದಿಂದ ತೆರಳಿದ್ದ ಅಧಿಕಾರಿಗಳು ತಿವಾರಿ ಕುಟಂಬದೊಂದಿಗೆ ಚರ್ಚೆ ನಡೆಸಿದ್ದು, ಕೆಲವು ಮಹತ್ವದ ವಿಚಾರಗಳನ್ನು ಕಲೆಹಾಕಿದೆ. ಆದ್ರೆ, ಈ ವಿಚಾರವಾಗಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ಅಥವಾ ಹೇಳಿಕೆ ನೀಡದಂತೆ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಲಖನೌಗೆ ತೆರಳಿದ್ದ ಅಧಿಕಾರಿಗಳಿಬ್ಬರು ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಎಫ್'ಐಆರ್ ದಾಖಲು:
ಅನುರಾಗ್ ತಿವಾರಿ ಸಾವನ್ನು ಉತ್ತರಪ್ರದೇಶ ಪೊಲೀಸರು ಕೊಲೆ ಪ್ರಕರಣವೆಂದು ಎಫ್'ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಬಹಳ ಮಹತ್ವದ ಬೆಳವಣಿಗೆಯಾಗಿದೆ. ಮೃತದೇಹ ಪತ್ತೆಯಾದ 5 ದಿನಗಳ ಬಳಿಕ ಉ.ಪ್ರ. ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ. ಅನುರಾಗ್ ತಿವಾರಿ ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಹಜರತ್'ಗಂಜ್ ಪೊಲೀಸ್ ಪೊಲೀಸರು ಅಪರಿಚಿತರಿಂದ ತಿವಾರಿ ಕೊಲೆಯಾಗಿದೆ ಎಂದು ಎಫ್'ಐಆರ್'ನಲ್ಲಿ ದಾಖಲಿಸಿದ್ದಾರೆ.
ಸೋದರನ ನೋವು:
ಇದುವರಿಗೂ ಕರ್ನಾಟಕ ರಾಜ್ಯ ಸರ್ಕಾರದ ಯಾರೊಬ್ಬರೂ ಅನುರಾಗ್ ತಿವಾರಿ ಸಾವಿನ ಪ್ರಕರನದ ಕುರಿತು ನಮ್ಮನು ಸಂಪರ್ಕಸಿಲ್ಲ , ಹಾಗೂ ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಅಧಿಕಾರಿಗಳು ಕೂಡಾ ನಮ್ಮನು ಒಂದು ಮಾತು ಕೂಡಾ ಆಡಿಸಿಲ್ಲ ಎಂದು ಇದೇ ವೇಳೆ ಅನುರಾಗ್ ತಿವಾರಿ ಸೋದರ ಅಲೋಕ್ ತಿವಾರಿ ನೋವು ವ್ಯಕ್ತಪಡಿಸಿದ್ದಾರೆ.
"ಕರ್ನಾಟಕದಲ್ಲಿ ಈ ಹಿಂದೆ ಕೂಡಾ ಅನೇಕ ನಿಷ್ಠಾವಂತ ಅಧಿಕಾರಿಗಳ ಕೊಲೆಯಾಗಿದೆ. ಕರ್ನಾಟಕದಲ್ಲಿ ಯಾಕೆ ಹೀಗೆ ? ನನ್ನ ಸೋದರ ಅನುರಾಗ್ ಕೂಡಾ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವನಾಗಿದ್ದ, ಅವನ ಸಾವಿನ ಬಗ್ಗೆ ನಮಗೆ ಕರ್ನಾಟಕ ಸರ್ಕಾರ ಯಾವುದೇ ಮಾಹಿತಿಯನ್ನ ನೀಡಿಲ್ಲ ಹಾಗೂ ಇದುವರೆಗೂ ನಮ್ಮ ಕುಟುಂಬದ ಯಾರನ್ನು ಕೂಡಾ ಸಂರ್ಪಕಿಸಿಲ್ಲ , ನಮಗೆ ಕರ್ನಾಟಕ ರಾಜ್ಯ ಸರ್ಕಾರದ ವಿಚಾರಣೆಯ ಮೇಲೆ ನಂಬಿಕೆ ಇಲ್ಲ . ಅನುರಾಗ್ ಸಾವಿನ ವಿಚಾರಾಣೆಯನ್ನ ಸಿಬಿಐ ತನಿಖೆಗೆ ನೀಡಬೇಕು. ಅನುರಾಗ್ ಸಾವಿನ ಕುರಿತು ಸತ್ಯ ವಿಷಯ ಹೊರಬರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.