
ನವದೆಹಲಿ(ಮೇ.22): ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕಡಲ ಕಿನಾರೆಯಲ್ಲಿ ಕುಳಿತ ಪುಟ್ಟ ಬಾಲಕಿಯೊಬ್ಬಳನ್ನು ಕಡಲ ಸಿಂಹ ಎಳೆದೊಯ್ದ ವಿಡಿಯೋ ಇದಾಗಿದೆ.
'ದ ವಾಷಿಂಗ್ಟನ್ ಪೋಸ್ಟ್' ಬಿತ್ತರಿಸಿರುವ ವರದಿಯನ್ವಯ ಕನಡಾದ ಪಶ್ಚಿಮ ತಟದಲ್ಲಿ ನಿರ್ಮಿಸಿರುವ ಡಕ್ ಮೇಲೆ ನಿಂತ ಜನರು ಅಲ್ಲಿಂದಲೇ ಮೀನುಗಳಿಗೆ ತಿಂಡಿ ಹಾಕಿ ಆನಂದಿಸುತ್ತಿದ್ದರು. ಅಲ್ಲೇ ಇದ್ದ ಕಡಲ ಸಿಂಹ ಕೂಡಾ ಇವರು ಹಾಕಿದ ತಿಂಡಿಯನ್ನು ತಿನ್ನುತ್ತಿತ್ತು. ಈ ಮಧ್ಯೆ ಬಾಲಕಿಯೊಬ್ಬಳು ಕಿನಾರೆಯಲ್ಲಿ ಕುಳಿತ್ತಿದ್ದಾಳೆ. ಇದೇ ವೇಳೆ ನೀರಿನಿಂದ ಹೊರ ಹಾರಿದ ಕಡಲ ಕಿನಾರೆ ಬಾಲಕಿಯ ಮೇಲೆ ದಾಳಿ ನಡೆಸಿ ಆಕೆಯನ್ನು ನೀರಿಗೆ ಎಳೆದೊಯ್ದಿದೆ.
ಇದನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೂ ಲೆಕ್ಕಸದೇ ಮರುಕ್ಷಣವೇ ನೀರಿಗೆ ಜಿಗಿದು ಬಾಲಕಿಯನ್ನು ರಕ್ಷಿಸಿ ಮರಳಿ ತಟಕ್ಕೆ ಕರೆತಂದಿದ್ದಾನೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರೂಗೂ ಯಾವುದೇ ಸಂಭವಿಸಿಲ್ಲ. ಸದ್ಯ ೀ ವಿಡಿಯೋ ಸೋಷಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.