ರಾಜಕೀಯಕ್ಕೆ ಬೇಡ; ರಜನೀಕಾಂತ್ ನಿವಾಸದೆದುರು ಪ್ರತಿಕೃತಿ ದಹಿಸಿ ಆಕ್ರೋಶ

By Suvarna Web DeskFirst Published May 22, 2017, 4:04 PM IST
Highlights

ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳೊಂದಿಗಿನ ಮುಖಾಮುಖಿ ಕಾರ್ಯಕ್ರಮದಲ್ಲಿ ರಜನೀಕಾಂತ್ ರಾಜಕಾರಣಕ್ಕೆ ಎಂಟ್ರಿಕೊಡುವ ಸಣ್ಣ ಸುಳಿವನ್ನು ನೀಡಿದ್ದರು. ತಮಿಳುನಾಡಿನಲ್ಲಿ ಪರಿಸ್ಥಿತಿಯನ್ನು ಸುಧಾರಿಸಬೇಕಾದ್ದು ತಮ್ಮ ಜವಾಬ್ದಾರಿ ಎಂದು ಹೇಳುವ ಮೂಲಕ ತಾನು ರಾಜಕೀಯ ಕ್ಷೇತ್ರಕ್ಕೆ ಧುಮುಕಲು ರೆಡಿ ಎನ್ನುವ ಸಂದೇಶ ಹೊರಡಿಸಿದ್ದರು.

ಚೆನ್ನೈ(ಮೇ 20): ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸುಳಿವು ನೀಡಿದ ಬೆನ್ನಲ್ಲೇ ತಲೈವಾಗೆ ದುಷ್ಕರ್ಮಿಗಳು ಬೆದರಿಕೆ ನೀಡಿದ್ದಾರೆ. ಕೆಲ ತಮಿಳು ಮುನೇತ್ರ ಸಂಘಟನೆಗಳು ರಜನಿ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿವೆ. ರಜನಿ ರಾಜಕೀಯ ಪ್ರವೇಶ ಖಂಡಿಸಿ ರಜನಿಗೆ ಸ್ಥಳೀಯ ತಮಿಳು ಸಂಘಟನೆಗಳಿಂದ ಬೆದರಿಕೆಯ ಕರೆಗಳು ಬರುತ್ತಿವೆ. ಇಂದು ಸೋಮವಾರ ಪೋಯೆಸ್ ಗಾರ್ಡನ್'ನಲ್ಲಿರುವ ರಜನೀಕಾಂತ್ ನಿವಾಸದೆದುರು ಪ್ರತಿಭಟನಾಕಾರರು ರಜಿನಿಯವರ ಪ್ರತಿಕೃತಿ ಧಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ರಜನಿಕಾಂತ್ ಚೆನ್ನೈ ನಿವಾಸಕ್ಕೆ ಭದ್ರೆತೆಯನ್ನ ಒದಗಿಸಲಾಗಿದೆ.

ತಲೈವಾ ರಜನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಎಲ್ಲರೂ ರಜನಿ ರಾಜಕೀಯಕ್ಕೆ ನಿಜವಾಗಿಯೂ ಬರುತ್ತಾರಾ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ರು. ಆದ್ರೆ ರಜನಿ ರಾಜಕೀಯ ಬರುವ ಸೂಚನೆಗಳನ್ನ ನೀಡಿದ ಬಳಿಕ ಅವರ ರಾಜಕೀಯ ವಿರೋಧಿ ಗುಂಪುಗಳು ಅವರ ಮೇಲೆ ರಾಜಕೀಯಕ್ಕೆ ಬರದಂತೆ ಒತ್ತಡ ಹೇರುತ್ತಿವೆ ಎನ್ನಲಾಗುತ್ತಿದೆ.

ರಜನಿಯ ರಾಜಕೀಯ ಪ್ರವೇಶ ವಿರೋಧಿಸಿ ತಮಿಳುನಾಡಲ್ಲಿ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಜನಿ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳೊಂದಿಗಿನ ಮುಖಾಮುಖಿ ಕಾರ್ಯಕ್ರಮದಲ್ಲಿ ರಜನೀಕಾಂತ್ ರಾಜಕಾರಣಕ್ಕೆ ಎಂಟ್ರಿಕೊಡುವ ಸಣ್ಣ ಸುಳಿವನ್ನು ನೀಡಿದ್ದರು. ತಮಿಳುನಾಡಿನಲ್ಲಿ ಪರಿಸ್ಥಿತಿಯನ್ನು ಸುಧಾರಿಸಬೇಕಾದ್ದು ತಮ್ಮ ಜವಾಬ್ದಾರಿ ಎಂದು ಹೇಳುವ ಮೂಲಕ ತಾನು ರಾಜಕೀಯ ಕ್ಷೇತ್ರಕ್ಕೆ ಧುಮುಕಲು ರೆಡಿ ಎನ್ನುವ ಸಂದೇಶ ಹೊರಡಿಸಿದ್ದರು. ಅದಾದ ಬಳಿಕ ಭಾರತೀಯ ಜನತಾ ಪಕ್ಷವು ತಲೈವಾಗೆ ತಮ್ಮ ಪಕ್ಷ ಸೇರಿಕೊಳ್ಳಲು ಬಹಿರಂಗವಾಗಿಯೇ ಆಮಂತ್ರಣ ಕೊಟ್ಟಿದೆ. ಆದರೆ, ಬಿಜೆಪಿಯ ಆಹ್ವಾನವನ್ನು ರಜನೀಕಾಂತ್ ತಿರಸ್ಕರಿಸಿದ್ದಾರೆ.

click me!