ಮತ್ತೆ ಮದ್ಯ ನಿಷೇಧದತ್ತ ಆಂಧ್ರಪ್ರದೇಶ| ಎಲ್ಲಾ ಮದ್ಯದಂಗಡಿಗಳು ಸರ್ಕಾರದ ತೆಕ್ಕೆಗೆ| ಹಂತಹಂತವಾಗಿ ಮಳಿಗೆಗಳ ಸಂಖ್ಯೆ ಕಡಿತ
ಅಮರಾವತಿ[ಸೆ.30]: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಜಗನ್ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ನಿರ್ಧಾರ ಮಾಡಿದೆ. ಹಂತ ಹಂತವಾಗಿ ಮದ್ಯ ನಿಷೇಧಕ್ಕೆ ಸರ್ಕಾರ ಮುಂದಾಗಿದ್ದು, ಇದರ ಮೊದಲ ಹಂತವಾಗಿ ಅ.1 ರಿಂದ ಎಲ್ಲಾ 3500 ಮದ್ಯದಂಗಡಿಗಳನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲಿದೆ ಎಂದಿ ಸರ್ಕಾರ ತಿಳಿಸಿದೆ.
ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ
undefined
ಈ ಬಗ್ಗೆ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವ ನಾರಾಯಣ ಸ್ವಾಮಿ, ಮುಂದಿನ ತಿಂಗಳಿನಿಂದ ಸರ್ಕಾರಿ ಒಡೆತನದ ‘ಆಂಧ್ರಪ್ರದೇಶ ರಾಜ್ಯ ಪಾನಿಯ ನಿಗಮ ನಿಯಮಿತ’ ಮದ್ಯ ಮಾರಾಟ ಮಾರಾಟವನ್ನು ವಹಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಸೆ.1 ರಿಂದ 475 ಮದ್ಯದಂಗಡಿಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ತಿಂಗಳಾರಂಭದಲ್ಲಿ 4380 ರಷ್ಟಿದ್ದ ಮದ್ಯ ಮಾರಾಟ ಮಳಿಗೆಯನ್ನು 3500 ಕ್ಕೆ ಇಳಿಸಲಾಗಿದೆ.
ಅಲ್ಲದೇ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ 43 ಸಾವಿರ ಬೆಲ್ಟ್ ಅಂಗಡಿಗಳನ್ನು (ಪರವಾನಿಗೆ ಪಡೆದ ಮದ್ಯದಂಗಡಿಗಳ ಅಕ್ರಮ ಮಳಿಗೆ) ಬಂದ್ ಮಾಡಲಾಗಿದ್ದು, ಈ ಸಂಬಂಧಧ 2872 ಪ್ರಕರಣಗಳಲ್ಲಿ 2928 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ 4,788 ಕೇಸುಗಳು ದಾಖಲಾಗಿದ್ದು, 2834 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ದೇವಾಲಯಗಳಲ್ಲೂ SC/ST ಮೀಸಲು ಜಾರಿ, ಸರ್ಕಾರದ ಐತಿಹಾಸಿಕ ಕ್ರಮ!
1994ರಲ್ಲಿ ಮೊದಲಿಗೆ ನಿಷೇಧ
ಈ ಹಿಂದೆ 1994ರಲ್ಲಿ ಅವಿಭಜಿತ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಎಂಟಿ ರಾಮರಾವ್ ಮೊದಲ ಬಾರಿ ರಾಜ್ಯದಲ್ಲಿ ಮದ್ಯ ನಿಷೇಧಿಸಿದ್ದರು. ಬಳಿಕ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮದ್ಯ ಮಾರಾಟದ ಮೇಲಿನ ನಿಷೇಧ ವಾಪಸ್ ಪಡೆದಿದ್ದರು.
ದೇಶದಲ್ಲಿ ಎಲ್ಲೆಲ್ಲಿ ಮದ್ಯ ನಿಷೇಧವಿದೆ
ಬಿಹಾರ, ಗುಜರಾತ್, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ಲಕ್ಷದ್ವೀಪದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ.