ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎಂದು ಸಂಜಯ ವೃತ್ತದ ಬಳಿ ಅಂಬರೀಷ್ ಅಭಿಮಾನಿಗಳು ಒತ್ತಾಯಿಸಿದ್ದರು.
ಬೆಂಗಳೂರು[ನ.25]: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಏರ್’ಲಿಫ್ಟ್ ಮೂಲಕ ಮಂಡ್ಯಗೆ ಕೊಂಡ್ಯೊಯುವುದು ಖಚಿತವಾಗಿದೆ. ಈಗಾಗಲೇ ಮಂಡ್ಯದ ಐಜಿ, ಎಸ್ಪಿ ಜೊತೆ ಮಾತುಕತೆಯಾಗಿದೆ, ಅವರು ಟ್ರಾಫಿಕ್ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆಂದು ಸಂಚಾರಿ ಆಯುಕ್ತ ಹರಿಶೇಖರನ್ ಹೇಳಿದ್ದಾರೆ.
[ವಿಡಿಯೋ] ಅಂಬರೀಷ್ ದರ್ಶನ ಪಡೆದ ಪ್ರಕಾಶ್ ರೈ; ಶಾಕ್‌ಗೆ ಮಾತೇ ಇಲ್ಲ
undefined
ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎಂದು ಸಂಜಯ ವೃತ್ತದ ಬಳಿ ಅಂಬರೀಷ್ ಅಭಿಮಾನಿಗಳು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಯಾರೂ ಆಕ್ರೋಶದಿಂದ ವರ್ತಿಸಬೇಡಿ. ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಏರ್’ಲಿಫ್ಟ್ ಮೂಲಕ ತೆಗೆದುಕೊಂಡ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ. ಕೇಂದ್ರ ರಕ್ಷಣಾ ಸಚಿವರನ್ನು ನಾನೇ ಸಂಪರ್ಕಿಸುತ್ತಿದ್ದೇನೆ ಎಂದು ತಿಳಿಸಿದ್ದರು.
ಎಲ್ಲವೂ ಅಂದುಕೊಂಡಂತೆ ಆದರೆ, ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭವಾಗಿದ್ದು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಿಎಆರ್, ಡಿಎಆರ್, ಕೆಎಸ್’ಆರ್’ಪಿ ತುಕಡಿಗಳನ್ನು ಭದ್ರತೆಗಾಗಿ ಮಂಡ್ಯದಲ್ಲಿ ನಿಯೋಜಿಸಲಾಗಿದೆ.