ರವಿಚಂದ್ರನ್ ಬಳಿ ಅಂಬರೀಶ್ ಗುಟ್ಟು

By Web DeskFirst Published Nov 25, 2018, 11:35 AM IST
Highlights

ಚಿತ್ರರಂಗದಲ್ಲಿ ಸ್ನೇಹಜೀವಿಯಾಗಿದ್ದ ಅಂಬರೀಶ್ ನಟ ಅಂಬರೀಶ್ ಬಗ್ಗೆ ಸ್ನೇಹಿತ ಹಾಗೂ ಹಿರಿಯ ನಟರಾದ ರವಿಚಂದ್ರನ್ ಅವರು ಕೆಲವು ಗುಟ್ಟುಗಳನ್ನು ಹೇಳಿದ್ದಾರೆ. 

ಬೆಂಗಳೂರು :  ಅಂಬರೀಷ್‌ಗೆ ಸಾಕಷ್ಟು ಹೆಸರುಗಳಲ್ಲಿ ಕರೀತೀವಿ. ಅವರ ಅಪ್ಪ ಅಮ್ಮ ಇಟ್ಟ ಹೆಸರು ಅಮರನಾಥ್ ಅಂತ. ಇನ್ನು ನಾಗರಹಾವು ಅವನಿಗೆ ಕೊಟ್ಟ ಹೆಸರು ಜಲೀಲ ಅಂತ. ಮತ್ತೆ ಕನ್ವರ್ ಲಾಲ್ ಅಂತ. ಜನ ಕೊಟ್ಟಿರೋ ಹೆಸರು ರೆಬೆಲ್ ಸ್ಟಾರ್ ಅಂತ. ಯಾರ್ ಏನೇ ಹೆಸರಿಟ್ಟು ಕರೆದ್ರೂ ಅವರ ಅಪ್ಪ ಅಮ್ಮ ಇಟ್ಟ ಹೆಸರೇ ಅವನಿಗೆ ಕರೆಕ್ಟ್. 

ಏಕೆಂದ್ರೆ ಅವನು ಯಾವತ್ತಿದ್ರೂ ಶಾಶ್ವತ. ಅಮರ. ಅವನ ಸ್ನೇಹ ಅಮರ. ಅಂಬರೀಶ್ ಎಷ್ಟು ತೂಕವಾಗಿದಾನೆ ಅಂದ್ರೆ ಅಷ್ಟೇ ತೂಕವಾಗಿ ಅವನ  ಸ್ನೇಹ ಇದೆ. ಅಂಬರೀಷು ಮುಂದಕೆ ಬರ್ತಾ ಬರ್ತಾನೇ ತೂಕಾನೂ ಹಾಗೆ ಜಾಸ್ತಿಯಾಗ್ತಾ ಹೋಯ್ತು. ಹೇಗೆ ಅಂದ್ರೆ ಅದೇ ಥರ ಸ್ನೇಹಿತರೂ ಅವನಿಗೆ ಜಾಸ್ತಿಯಾಗ್ತಾ ಹೋದ್ರೂ. ಎಲ್ಲಾ ಕಡೆ ಪ್ರೀತಿ ಹೆಚ್ತಾ ಹೋಯ್ತು. ಆ ಪ್ರೀತಿ ಸ್ನೇಹದಿಂದಾನೇ ಅವನ ತೂಕ ಕೂಡ ಜಾಸ್ತಿಯಾಗೋಯ್ತು. 

"

ಇಂಜೆಕ್ಷನ್ನಿನ ಭಯಸ್ತ: ಅಂಬರೀಶ್ ಒಂಥರಾ ಒಂಟಿ ಸಲಗ ಇದ್ದಂಗೆ. ನಡ್ಕೊಂಡು ಬಂದ್ರೆ ಒಂದು ಆನೆ ನಡ್ಕೊಂಡು ಬಂದಂಗೆ ಇರುತ್ತೆ. ಆದ್ರೆ ಏನೇ ಒಂಟಿ ಸಲಗ ಅಂತ ಹೇಳಿದ್ರೂ ಕೂಡ ಅಂಬರೀಶ್ ಮನಸ್ಸು ಮಾತ್ರ ತುಂಬಾ ಮೃದು. ಒಂದು ಇಂಜೆಕ್ಷನ್ ನೋಡಿದ್ರೂ ಕೂಡ ಎರಡು ಕಿ.ಮೀ. ದೂರ ಓಡೋಗ್ತಾನೆ. ಚಕ್ರವ್ಯೂಹದಲ್ಲಿ ನಾನೂ ಅವ್ನ ಫೈಟ್ ಮಾಡ್ಬೇಕಾದ್ರೆ ಅಂಬರೀಶ್ ಕೆಳಗ್ಬಿದ್ದು ಕೈ ಡಿಸ್‌ಲೊಕೇಟ್ ಆಗೋಯ್ತು. ಹಾಸ್ಪಿಟಲ್‌ಗೆ ಕರ್ಕೊಂಡು ಹೋದ್ವಿ ಇಂಜೆಕ್ಷನ್‌ಗೆ ಅಂತ. ಫಸ್ಟ್ ಟೈಮ್ ಇರ್ಬೇಕು ನಾನ್ ನೋಡಿದ್ದು ಅಂಬರೀಷು ಅಯ್ಯಯ್ಯೋ ನಾನ್ ಇಂಜೆಕ್ಷನ್ ಹಾಕ್ಸಿಕೊಳ್ಳಲ್ಲಪ್ಪಾ, ನಾನ್ ಓಡೋಗ್ತೀನಿ ಅಂತ ಹಾಸ್ಪಿಟಲ್ ಬಿಟ್ಟು ಓಡ್ಹೋಗಿ ಮತ್ತೆ ಓಡ್ಹೋಗಿ ಎಳ್ಕೊಂಬಂದು ಇಂಜೆಕ್ಷನ್ ಹಾಕಿಸ್ಕೊಂಡು ಕರ್ಕೊಂಬಂದಿದ್ದು. 

ಅದುಬಿಟ್ಟು ನಾನು ವಿಲನ್ ಆಗಿ ಆ್ಯಕ್ಟ್ ಮಾಡ್ಬೇಕಾದ್ರೆ ಅಂಬರೀಷ್ ಜೊತೆಗೆ ಫಸ್ಟ್ ಶಾಟ್ ತೇಗೀಬೇಕಾದ್ರೆ ಫಸ್ಟ್ ಪಂಚ್ ನಾನು ಅಂಬರೀಷ್ ಮೂಗಿಗೆ ಹೊಡ್ದೆ. ಅಂಬರೀಶ್ ಇಡೀ ಸೆಟ್‌ನ ಒಂದು ರೌಂಡ್ ಹೊಡ್ಕೊಂಡು ಓಡ್ಬಂದ. ಆದ್ರೆ ಅವತ್ತೆ ಅಂಬರೀಶ್ ನನ್ಹತ್ರ ಬಂದು ಮಗ್ನೆ ಪಂಚ್ ಮಾಡ್ಬೇಕಾದ್ರೆ ಕೈ ಮುಖಕ್ಕೆ ಬರ್ಬಾರ್ದು, ಅಲ್ ಬಂದ್ ನಿತ್ಕೋಬೇಕು ಅಷ್ಟೇ ಅಂತ ಹೇಳಿದ್ದ. ಇವತ್ತಿಗೂ ಆ ಪಾಠ ಇನ್ನೂ ಜ್ಞಾಪಕ ಇದೆ. ಅವತ್ತಿಂದ ಇವತ್ತಿನವರ್ಗೂ ಯಾವ್ದೇ ಪೈಟ್ ಮಾಡ್ಬೇಕಾದ್ರೆ ಯಾರ್ಗೂ ನಾನು ನನ್ನಿಂದ ಅವರ್ಗೆ ಏಟು ಬೀಳೋದಿಲ್ಲ.  ಏಕೆಂದ್ರೆ ಅಂಬರೀಶ್ ಹೇಳ್ಕೊಟ್ಟ ಪಾಠ ಇವತ್ತಿನವರೆಗೂ ನಡ್ಕೊಂಡ್ ಬಂದಿದೆ.

ಸಂಸ್ಕೃತದಲ್ಲಿ ಬೈದ್ರೂ ತುಂಬಾ ಚೆನ್ನಾಗಿ ಕೇಳ್ಸತ್ತೆ:  ಅಂಬ್ರೀಷ್‌ಗೆ ನಮ್ ತಂದೆ ಕಂಡ್ರೆ ತುಂಬಾ ತುಂಬಾ ಪ್ರೀತಿ. ನಮ್ ತಂದೇನೂ ಒಂದೊಂದ್ಸಲ ಸಾಯಂಕಾಲ ಆದ್ರೆ... ಇವತ್ತಿಗೂನು ನನ್ ಮನೇಲಿ ನಾನು ಗುಂಡ್ ಹಾಕೋದಿಲ್ಲ. ಬಟ್ ಅಂಬರೀಶ್ ಒಬ್ಬ ಮನೆಗ್ ಬಂದ್ರೆ ಆ ಗುಂಡು ಯಾವಾಗ್ಲೂ ಇರುತ್ತೆ. ಏಕೆಂದ್ರೆ ಅಂಬ್ರೀಷ್ ಎಷ್ಟ್ ಗಂಟೆಗ್ ಬೇಕಾದ್ರೂ ಬಂದು ಬಾಗಿಲು ತಟ್ಬಹುದು. ನಮ್ ಮನೆ ಮಾತ್ರ ಅಲ್ಲ ಯಾರ ಮನೆಗೂ ಎಷ್ಟ್ ಗಂಟೆಗ್ ಬೇಕಾದ್ರೂ ಹೋಗ್ಬಹುದು. ಎಲ್ಲಾರೂ ಅಷ್ಟೇ ಸ್ನೇಹದಿಂದ, ಅಷ್ಟೇ ಪ್ರೀತಿಯಿಂದ ಎಲ್ಲರೂ ಸ್ವಾಗತ ಮಾಡ್ತಾರೆ. 

ಆಮೇಲೆ ಅವನು ಅಷ್ಟೇ ಪ್ರೀತಿಯಿಂದ ಮನೆಯವರ ಥರಾನೇ ಒಳಗ್ಬರ್ತಾನೆ. ಮನೆಯವರ ಥರ ಇರ್ತಾನೆ. ಮನೆಯವರ್ ಥರ ಮಾತಾಡಿಸ್ತಾನೆ. ಅವನಿಗಿರೋ ಸ್ವಭಾವ ಅದು. ಬಹುಶಃ ಅಂಬರೀಶ್ ಒಬ್ನೇ ಇರ್ಬೇಕು. ಸಂಸ್ಕೃತದಲ್ಲಿ ಬೈದ್ರೂ ಎಷ್ಟೋ ಜನರಿಗೆ ತುಂಬಾ ಚೆನ್ನಾಗಿ ಕೇಳ್ಸತ್ತೆ ಅದು. ಆ ಸಂಸ್ಕೃತದಲ್ಲೇ ಆ ಪ್ರೀತಿ ಕಾಣ್ಸೋದು ಎಲ್ಲರಿಗೂ. ಮೋಸ್ಟ್ಲಿ ಅವನು ಸಂಸ್ಕೃತದಲ್ಲಿ ಬೈಲಿಲ್ಲ ಅಂದ್ರೆ ಅಲ್ಲಿ ಪ್ರೀತಿ ಇಲ್ಲ ಅನ್ಸೋದು.

click me!