ದಕ್ಷಿಣ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆನಿಸಿದ ಏರೋ ಇಂಡಿಯಾದ 12ನೇ ಆವೃತ್ತಿಯೇ ಬೆಂಗಳೂರು ಪಾಲಿಗೆ ಕಟ್ಟಕಡೆಯ ಆವೃತಿಯಾಗಲಿದೆಯೇ? ಇಂತಹದೊಂದು ಗುಮಾನಿಯ ನಡುವೆಯೇ ಬುಧವಾರ ಏರೋ ಇಂಡಿಯಾ ಉದ್ಯಾನಗರಿಯಲ್ಲಿ ಆರಂಭಗೊಂಡಿದ್ದು, ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇದು ಕಟ್ಟಕಡೆಯ ಅವಕಾಶ ಎಂಬ ಭಾವನೆ ಬೆಂಗಳೂರಿಗರಲ್ಲಿ ಮೂಡಿದೆ.
ಬೆಂಗಳೂರು (ಫೆ. 21): ದಕ್ಷಿಣ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆನಿಸಿದ ಏರೋ ಇಂಡಿಯಾದ 12ನೇ ಆವೃತ್ತಿಯೇ ಬೆಂಗಳೂರು ಪಾಲಿಗೆ ಕಟ್ಟಕಡೆಯ ಆವೃತಿಯಾಗಲಿದೆಯೇ? ಇಂತಹದೊಂದು ಗುಮಾನಿಯ ನಡುವೆಯೇ ಬುಧವಾರ ಏರೋ ಇಂಡಿಯಾ ಉದ್ಯಾನಗರಿಯಲ್ಲಿ ಆರಂಭಗೊಂಡಿದ್ದು, ಲೋಹದ ಹಕ್ಕಿಗಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇದು ಕಟ್ಟಕಡೆಯ ಅವಕಾಶ ಎಂಬ ಭಾವನೆ ಬೆಂಗಳೂರಿಗರಲ್ಲಿ ಮೂಡಿದೆ.
ವಾಯುಪಡೆ ಮೃತ ಪೈಲಟ್‌ಗೆ ಆಗಸದಲ್ಲೇ ವಿಶಿಷ್ಟ ಗೌರವ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಕಸಿದುಕೊಳ್ಳಲು ದೇಶದ ಹಲವು ನಗರಗಳು ತೀವ್ರ ಪ್ರಯತ್ನ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಪ್ರಮುಖರು ಈ ದಿಸೆಯಲ್ಲಿ ತೀವ್ರ ಲಾಬಿ ನಡೆಸಿದ್ದು ಕಂಡು ಬಂದಿತ್ತು. ಈ ಬಾರಿಯಂತೂ ಏರೋ ಇಂಡಿಯಾ ಲಖನೌಗೆ ಸ್ಥಳಾಂತರಗೊಂಡೇ ಬಿಟ್ಟಿತು ಎಂಬ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ, ರಾಜ್ಯದ ನಾಯಕರು ಪಕ್ಷ ಭೇದ ಮರೆತು ಏರೋ ಇಂಡಿಯಾ ಸ್ಥಳಾಂತರಕ್ಕೆ ತೀವ್ರ ವಿರೋಧ ಹಾಗೂ ಸಾರ್ವಜನಿಕ ವಲಯದಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಂತಿಮವಾಗಿ ಏರೋ ಇಂಡಿಯಾದಂತಹ ಬೃಹತ್ ಪ್ರದರ್ಶನವನ್ನು ಆಯೋಜಿಸುವ ಸಿದ್ಧತೆ ಲಕ್ನೋ ನಗರಕ್ಕೆ ಇಲ್ಲ ಎಂಬ ಕಾರಣಕ್ಕೆ ಏರೋ ಇಂಡಿಯಾ ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಯಿತು.
ಭಾರತದಲ್ಲೇ ಉತ್ಪಾದಿಸಿ ಭಾರತಕ್ಕೇ ಮಾರಿ: ನಿರ್ಮಲಾ ಸೀತಾರಾಮನ್ ಆಹ್ವಾನ
ಆದರೆ, 2019ರ ಏರ್‌ಶೋ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೇ ಈಗ ಹೆಚ್ಚಿದೆ ಎನ್ನಲಾಗುತ್ತಿದೆ. ಈ ವೈಮಾನಿಕ ಪ್ರದರ್ಶನ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಇತರೆ ನಗರಗಳಿಗೂ ಅವಕಾಶ ಲಭ್ಯವಾಗಬೇಕು ಎಂಬ ಕೇಂದ್ರ ಸರ್ಕಾರದ ನೀತಿಯ ಪರಿಣಾಮವಾಗಿ ಈ ಪ್ರದರ್ಶನ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಗುಮಾನಿ ಹುಟ್ಟಿಕೊಂಡಿರುವ ಕಾರಣ ಈ ಬಾರಿಯ ಏರೋ ಇಂಡಿಯಾವೇ ಬೆಂಗಳೂರಿಗರ ಪಾಲಿನ ಅಂತಿಮ ಏರೋ ಇಂಡಿಯಾ ಎಂಬ ಭಾವನೆ ದೃಢವಾಗಿದೆ. ಹೀಗಾಗಿ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿಗರಿಗೆ ದೊರಕಿರುವ ಕೊನೆಯ ಅವಕಾಶವಿದು ಎಂದೇ ಬಿಂಬಿಸಲಾಗುತ್ತಿದೆ.
ಏರೋ ಇಂಡಿಯಾ ಪ್ರದರ್ಶನವು 1998ರಿಂದ ಇದುವರೆಗೂ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲೇ ಸತತವಾಗಿ ನಡೆಯುತ್ತಾ ಬಂದಿದೆ. ಅತ್ಯುತ್ತಮವಾಗಿ ಆಯೋಜಿಸಲಾಗುವ ವೈಮಾನಿಕ ಪ್ರದರ್ಶನ ಎಂದೇ ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಇಂತಹ ಏರೋ ಇಂಡಿಯಾ ಪ್ರದರ್ಶನವನ್ನು ದೇಶದ ಬೇರೆ ನಗರಕ್ಕೆ ಒಯ್ಯುವ ಪ್ರಯತ್ನಗಳು ಆಗಾಗ ನಡೆದಿವೆ. 2017ರಲ್ಲೇ ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರ ನೇತೃತ್ವದಲ್ಲಿ ಗೋವಾಗೆ ಸ್ಥಳಾಂತರ ಮಾಡಲು ಪ್ರಯತ್ನ ನಡೆದಿತ್ತು.
ಏರ್‌ಬಸ್‌ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ
ಹೀಗಾಗಿಯೇ ಪ್ರತಿ ಏರ್‌ಶೋ ಸಮಾರೋಪದಲ್ಲೂ ಮುಂದಿನ ಸ್ಥಳ ಘೋಷಣೆ ಮಾಡಲಾಗುತ್ತಿತ್ತಾದರೂ 2015ರ ಏರ್‌ಶೋ ಸಮಾರೋಪದಲ್ಲಿ ಸ್ಥಳ ಸೂಚಿಸಿರಲಿಲ್ಲ. ಜತೆಗೆ ಬೆಂಗಳೂರಿನಲ್ಲಿಯೇ ನಡೆಯುತ್ತದೆ ಎಂಬುದನ್ನೂ ಸ್ಪಷ್ಟಪಡಿಸಿರಲಿಲ್ಲ. ಬಳಿಕ ತೀವ್ರ ವಿವಾದ ಉಂಟಾದ ನಂತರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ 2016ರ ಜೂನ್‌ನಲ್ಲಿ ಸ್ಪಷ್ಟನೆ ನೀಡಿ ಬೆಂಗಳೂರಿನಲ್ಲಿಯೇ ಮಾಡುವುದಾಗಿ ಘೋಷಿಸಿದ್ದರು.
ಬಳಿಕ 2017ರ ಏರ್‌ಶೋ ಬಳಿಕವೂ 2019ರ ಏರ್‌ಶೋ ಲಕ್ನೋ ಸ್ಥಳಾಂತರಿಸಬೇಕು ಎಂಬ ಕೂಗು ಬಂದಿತ್ತು. ಈ ಬಗ್ಗೆ ಆದೇಶವೂ ಹೊರಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಆದರೆ, ಇದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಾಯಕರು ಏರೋ ಇಂಡಿಯಾ ಪ್ರದರ್ಶನವನ್ನು ಸ್ಥಳಾಂತರಿಸಲು ಹುನ್ನಾರ ನಡೆಸಿರುವ ಕೇಂದ್ರ ಸರ್ಕಾರದ ಬಗ್ಗೆ ಕಿಡಿ ಕಾರಿದ್ದರು. ಸಾರ್ವಜನಿಕವಾಗಿಯೂ ಸಾಕಷ್ಟುಆಕ್ರೋಶ ವ್ಯಕ್ತವಾಗಿತ್ತು.
ಆದರೆ, ಅಂತಿಮವಾಗಿ ಲಕ್ನೋ ನಗರದಲ್ಲಿ ಇಂತಹ ಬೃಹತ್ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನ ಆಯೋಜಿಸುವ ಸಾಮರ್ಥ್ಯ ಇಲ್ಲ ಎಂಬ ಕಾರಣಕ್ಕೆ ಬೆಂಗಳೂರಿಗೆ ಈ ವೈಮಾನಿಕ ಪ್ರದರ್ಶನ ಈ ಬಾರಿ ಲಭ್ಯವಾಗಿದೆ. ಆದರೆ, 2019ರ ಏರ್‌ಶೋ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೇ ಈಗ ಹೆಚ್ಚಿದೆ ಎನ್ನಲಾಗುತ್ತಿದೆ. ಈ ವೈಮಾನಿಕ ಪ್ರದರ್ಶನ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಇತರೆ ನಗರಗಳಿಗೂ ಅವಕಾಶ ಲಭ್ಯವಾಗಬೇಕು ಎಂಬ ಕೇಂದ್ರ ಸರ್ಕಾರದ ನೀತಿಯ ಪರಿಣಾಮವಾಗಿ ಈ ಪ್ರದರ್ಶನ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಗುಮಾನಿ ಹುಟ್ಟಿಕೊಂಡಿರುವ ಕಾರಣ ಈ ಬಾರಿಯ ಏರೋ ಇಂಡಿಯಾವೇ ಬೆಂಗಳೂರಿಗರ ಪಾಲಿನ ಅಂತಿಮ ಏರೋ ಇಂಡಿಯಾ ಎಂಬ ಭಾವನೆ ದೃಢವಾಗಿದೆ. ಹೀಗಾಗಿ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿಗರಿಗೆ ದೊರಕಿರುವ ಕೊನೆಯ ಅವಕಾಶವಿದು ಎಂದೇ ಬಿಂಬಿಸಲಾಗುತ್ತಿದೆ.