‘ವಂದೇ ಭಾರತ’ ಎಕ್ಸ್‌ಪ್ರೆಸ್‌ಗೆ ಮತ್ತೆ ಕಲ್ಲೆಸೆತ

Published : Feb 21, 2019, 08:44 AM IST
‘ವಂದೇ ಭಾರತ’ ಎಕ್ಸ್‌ಪ್ರೆಸ್‌ಗೆ ಮತ್ತೆ ಕಲ್ಲೆಸೆತ

ಸಾರಾಂಶ

‘ವಂದೇ ಭಾರತ’ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಹಂತದಲ್ಲಿ ಇದ್ದಾಗಲೂ ಕಲ್ಲೆಸೆತದ ಪ್ರಕರಣಗಳು ನಡೆದಿದ್ದವು. ಈಗ ನಡೆದಿರುವುದು ಎರಡು ತಿಂಗಳಲ್ಲಿನ ಮೂರನೇ ಕಲ್ಲೆಸೆತದ ಪ್ರಕರಣ.

ನವದೆಹಲಿ[ಫೆ.21]: ದೇಶದ ಅತಿ ವೇಗದ ರೈಲು ‘ವಂದೇ ಭಾರತ’ ಎಕ್ಸ್‌ಪ್ರೆಸ್‌ಗೆ ದುಷ್ಕರ್ಮಿಗಳು ಮತ್ತೆ ಕಲ್ಲು ಎಸೆದಿದ್ದಾರೆ.

ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು?

‘ವಂದೇ ಭಾರತ’ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಹಂತದಲ್ಲಿ ಇದ್ದಾಗಲೂ ಕಲ್ಲೆಸೆತದ ಪ್ರಕರಣಗಳು ನಡೆದಿದ್ದವು. ಈಗ ನಡೆದಿರುವುದು ಎರಡು ತಿಂಗಳಲ್ಲಿನ ಮೂರನೇ ಕಲ್ಲೆಸೆತದ ಪ್ರಕರಣ. ದೆಹಲಿ ಮತ್ತು ಆಗ್ರಾ ಮಧ್ಯದಲ್ಲಿ ಸಂಚರಿಸುವ ಈ ಟ್ರೇನ್‌ಗೆ ತುಂಡ್ಲಾ ಎಂಬ ಪ್ರದೇಶದಲ್ಲಿ ಈ ಕಲ್ಲೆಸೆಯಲಾಗಿದ್ದು, ಕಿಟಕಿಯ ಗಾಜು ಒಡೆದಿದೆ.

ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

ರೈಲಿಗೆ ಬೈಕ್‌ ಡಿಕ್ಕಿ: ಈ ನಡುವೆ, ಇದೇ ತುಂಡ್ಲಾ ಬಳಿ ಅಕ್ರಮವಾಗಿ ಬೈಕ್‌ ಮೇಲೆ ಹಳಿ ದಾಟುತ್ತಿದ್ದ ವ್ಯಕ್ತಿಯೊಬ್ಬ ವಂದೇ ಭಾರತ ಎಕ್ಸ್‌ಪ್ರೆಸ್‌ ಕಂಡು ಬೈಕನ್ನು ಹಳಿ ಮೇಲೇ ಬಿಟ್ಟು ಓಡಿ ಹೋಗಿದ್ದಾನೆ. ಆಗ ರೈಲು ಬೈಕ್‌ಗೆ ಡಿಕ್ಕಿ ಹೊಡದಿದೆ. ರೈಲಿಗೆ ಯಾವುದೇ ಹಾನಿ ಆಗಿಲ್ಲ.

ಕಲ್ಲೆಸೆದ ಮಕ್ಕಳಿಗೆ ಚಾಕೋಲೇಟ್‌!: ಇನ್ನು ಘಟನೆ ನಡೆದ ಸ್ಥಳಗಳಲ್ಲಿ ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಕಲ್ಲೆಸೆದವರು ಹಳಿ ಬಳಿ ಮನೆಯಿರುವ ಚಿಕ್ಕಮಕ್ಕಳು ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಅವರಿಗೆ ದಂಡಿಸುವ ಬದಲು ಚಾಕೋಲೆಟ್‌, ಮಿಠಾಯಿ, ಗೊಂಬೆಗಳು ಮತ್ತು ಬಣ್ಣದ ಪೆನ್ಸಿಲ್‌ಗಳನ್ನು ನೀಡುವ ಮೂಲಕ ಮನಗೆಲ್ಲುವ ಪ್ರಯತ್ನ ನಡೆಸಲಾಯಿತು ಎಂದು ರೈಲ್ವೇ ಉತ್ತರ ವಲಯ ವಕ್ತಾರ ದೀಪಕ ಕುಮಾರ್‌ ತಿಳಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ