
ಲೂಸ್ ಮಾದ ಎಂದೇ ಗುರುತಿಸಲ್ಪಡುವ ಸ್ಯಾಂಡಲ್ವುಡ್ ನಟ ಯೋಗಿ ಸಹೋದರ ಮಹೇಶ್ ಮದುವೆ ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ನಡೆಯಿತು. ಇಲ್ಲಿನ ಸೂರ್ಯಕಮಲ ಕಲ್ಯಾಣ ಮಂಟಪದಲ್ಲಿ ಪ್ರಾತಃಕಾಲದ ಮುಹೂರ್ತದಲ್ಲಿ ಮಹೇಶ್ ಸ್ವಾತಿ ನವ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹಿರಿಯ ನಟಿ ಅಂಬುಜಾಕ್ಷಿ ತನ್ನ ಪುತ್ರನ ವಿವಾಹ ಧರ್ಮಸ್ಥಳದ ಪುಣ್ಯ ಕ್ಷೇತ್ರದಲ್ಲಿ ನಡೆದಿರುವುದಕ್ಕೆ ಸಂತಸ ಪಟ್ಟರು. ತನ್ನ ಮಕ್ಕಳು ಧರ್ಮಸ್ಥಳದಲ್ಲೇ ಮದುವೆ ಆಗಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. ಅದರಂತೆ ಹಿರಿಯ ಪುತ್ರ ಮಹೇಶ್ನ ಮದುವೆ ನೆರವೇರಿದೆ ಎಂದು ಖುಷಿಯಿಂದಲೇ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.