ಸ್ಮಾರ್ಟ್ ಮೀಟರ್ ಅಡಿಯಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡ್ತಿದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಬೆಂಗಳೂರು: “ಸ್ಮಾರ್ಟ್ ಮೀಟರ್’ ರಾಜ್ಯ ಸರ್ಕಾರ ‘ಹೆಸರಲ್ಲಿ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರ ನಡೆಸಿದೆ. KTTP ಕಾಯ್ದೆಯನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲದೆ ನಿಯಮಗಳನ್ನು ಗಾಳಿಗೆ ತೂರಿದೆ. ಇನ್ನು ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದೆ” ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ.
ಗ್ರಾಹಕನ ಮೇಲೆ ಬೀಳುವ ಹೊರೆ ಎಷ್ಟು?
“ಸ್ಮಾರ್ಟ್ ಮೀಟರ್ ಹಗರಣದಿಂದ ಪ್ರತಿ ಗ್ರಾಹಕನ ಮೇಲೆ 8,520 ರೂಪಾಯಿ ಹೊರೆ ಬೀಳತ್ತೆ. ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ. ಅಷ್ಟೇ ಅಲ್ಲದೆ ಪಾರದರ್ಶಕವಾಗಿ ಮರು ಟೆಂಡರ್ ನಡೆಸಿ. ಈ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಯ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದೊಡ್ಡ ದೊಡ್ಡ ಹಗರಣಗಳೇ ಹೊರಗಡೆ ಬರುತ್ತಿದೆ. ಸಾರ್ವಜನಿಕರೂ ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸದನದಲ್ಲೂ ಈ ಹಗರಣದ ಬಗ್ಗೆ ಪ್ರಸ್ತಾಪ ಆಗಿದೆ. ಹಲವಾರು ರಾಜ್ಯಗಳು ಸ್ಮಾರ್ಟ್ ಮೀಟರ್ ಅಳವಡಿಸಿವೆ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.
ಭಾರತದಲ್ಲಿ ಹೆಚ್ಚು ಜನಸಂದಣಿ ಇರೋ ಪ್ರದೇಶ ಯಾವುದು, ಶಾಂತವಿರುವ ಸ್ಥಳ ಯಾವುದು? ಸಂಪೂರ್ಣ ವರದಿ
ಹದಿನೈದು ಸಾವಿರ ಕೋಟಿ ರೂ ಲೂಟಿ!
ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಕೇಂದ್ರವೇ ಸೂಚನೆ ನೀಡಿತ್ತು. ಕೇಂದ್ರವು ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿ ನೀಡುತ್ತಿದೆ. ನಮ್ಮ ದೇಶದಲ್ಲಿ 19 ಕೋಟಿಯಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಇದು ಕರ್ನಾಟಕದಲ್ಲಿ ದೊಡ್ಡ ಅಕ್ರಮ. ಕೇರಳ, ಉತ್ತರ ಪ್ರದೇಶ, ಗುಜರಾತ್, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಸ್ಮಾರ್ಟ್ ಮೀಟರ್‌ಗೆ 900 ರೂಪಾಯಿ ಮಾತ್ರ ಇದೆ. ಆದರೆ ರಾಜ್ಯದಲ್ಲಿ ಮಾತ್ರ ಮೀಟರ್‌ಗೆ 4,998 ರೂಪಾಯಿ ಎಂದು ಬಾಟಾ ಚಪ್ಪಲಿ ರೀತಿ ಹಣ ನಿಗದಿಸಿದ್ದಾರೆ. 2 ಫೇಸ್ ಮೀಟರ್‌ಗೆ 9,000 ರೂಪಾಯಿ, 3 ಫೇಸ್ ಮೀಟರ್‌ಗೆ 28,000 ನಿಗದಿ ಮಾಡಿದ್ದಾರೆ. ನಿರ್ವಹಣೆ ವೆಚ್ಚ ಅಂತ ಬೇರೆ ರಾಜ್ಯದಲ್ಲಿ 57 ರೂಪಾಯಿಯಾದರೆ, ನಮ್ಮಲ್ಲಿ ಪ್ರತಿ ತಿಂಗಳು 71 ರೂ. ತಗೊಳ್ತಾತರೆ. ಈ ಮೂಲಕ 10 ವರ್ಷಕ್ಕೆ 15,500 ಕೋಟಿ ರೂಪಾಯಿ ಸಂಗ್ರಹಿಸೋಕೆ ಯೋಜನೆ ನಡೆದಿದೆ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
“ರಾಜ್ಯದಲ್ಲಿ ಯಾಕೆ ಬೆಸ್ಕಾಂನಲ್ಲಿ ತಜ್ಞರು ಇಲ್ವಾ? ಇದೊಂದು ದೊಡ್ಡ ಹಗಲು ದರೋಡೆ. 15,500 ಕೋಟಿ ರೂಪಾಯಿ ಲೂಟಿಯಾಗಿದೆ. ಕೂಡಲೇ ರೀ-ಟೆಂಡರ್ ಕರೆಯಿರಿ. ಜೆಡಿಎಸ್ ಬಿಜೆಪಿ ಸೇರಿ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತಗೊಂಡು ಹೋಗ್ತೀವಿ” ಎಂದಿದ್ದಾರೆ.
ಸೌತ್ನಲ್ಲಿ ಛಾನ್ಸ್ ಬೇಕಿದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ... ಅಂದಿನ ಘಟನೆ ಹೇಳಿದ ನಟಿ
“ಜನರಿಗೆ ಎಲ್ಲಾ ರೀತಿಯಲ್ಲಿಯೂ ದರ ಏರಿಕೆ ಮಾಡಿ ಬರೆ ಎಳೆದಿದ್ದಾರೆ. ಇವರೆಲ್ಲ ದಪ್ಪ ಚರ್ಮ ಇಟ್ಟುಕೊಂಡು ಸರ್ಕಾರ ಮಾಡ್ತಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡೋಣ ಅಂತ ಈ ರೀತಿ ಮಾಡ್ತಿದ್ದಾರೆ” ಎಂದು ನಿಖಿಲ್ ಹೇಳಿದ್ದಾರೆ.
“ರಾಹುಲ್ ಗಾಂಧಿಯವ್ರು ಸಂವಿಧಾನ ರಕ್ಷಕರು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತದೆ. ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡ್ಕೊಂಡು ಗಂಟೆ ಅಲ್ಲಾಡಿಸಿದರೆ ಆಗೋದಿಲ್ಲ. ನರೇಂದ್ರ ಮೋದಿಯವ್ರು ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಸಂವಿಧಾನ ಬದಲಾಯಿಸ್ತೀನಿ ಅಂತ ಹೇಳಿದ್ದಾರೆ. ಡಿಕೆಶಿ ತಲೆಗೆ ನಟ್ಟು ಬೋಲ್ಟ್ ಇಲ್ಲದ ಕಾರಣ ಅಲ್ಲಾಡುತ್ತಿದೆ ಅನಿಸತ್ತೆ. ಹೀಗೆ ಮಾತಾಡಿದರೆ ರಾಜ್ಯದ ಜನರೇ ಇವರ ನೆಟ್ಟು ಬೋಲ್ಟ್ ಟೈಟ್ ಮಾಡ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.