ಬ್ಲ್ಯೂ ಜೀನ್ಸ್‌ ಹಾಕೋ ಎಲ್ಲ ಹುಡುಗೀರು ಹನಿಟ್ರ್ಯಾಪ್‌ ಮಾಡ್ತಾರಾ? ಕೆಎನ್‌ ರಾಜಣ್ಣಗೆ ಚೇತನ್‌ ಅಹಿಂಸ ಪ್ರಶ್ನೆ!

Published : Mar 25, 2025, 04:53 PM ISTUpdated : Mar 25, 2025, 05:21 PM IST
ಬ್ಲ್ಯೂ ಜೀನ್ಸ್‌ ಹಾಕೋ ಎಲ್ಲ ಹುಡುಗೀರು ಹನಿಟ್ರ್ಯಾಪ್‌ ಮಾಡ್ತಾರಾ? ಕೆಎನ್‌ ರಾಜಣ್ಣಗೆ ಚೇತನ್‌ ಅಹಿಂಸ ಪ್ರಶ್ನೆ!

ಸಾರಾಂಶ

ಹನಿಟ್ರ್ಯಾಪ್‌ ಬಗ್ಗೆ ಸಚಿವ ಕೆಎನ್‌ ರಾಜಣ್ಣ ಅವರು ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆ ಆಗ್ತಿದೆ. ನಟ ಚೇತನ್‌ ಅಹಿಂಸ ಅವರು ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.   

ಹನಿಟ್ರ್ಯಾಪ್‌ ವಿಚಾರ ಭಾರೀ ಸೌಂಡ್‌ ಮಾಡ್ತಿದೆ. ಈಗ ಸಚಿವ ಕೆ ಎನ್‌ ರಾಜಣ್ಣ ಅವರು ಹನಿಟ್ರ್ಯಾಪ್‌ ಬಗ್ಗೆ ಮಾತಾಡಿರೋದು ಇನ್ನಷ್ಟು ಸೌಂಡ್‌ ಮಾಡ್ತಿದೆ. ಇನ್ನು ಬ್ಲ್ಯೂ ಜೀನ್ಸ್‌ ಹಾಕಿಕೊಂಡು ಬಂದಿದ್ದ ಹುಡುಗಿ ಹನಿಟ್ರ್ಯಾಪ್‌ ಮಾಡಲು ಪ್ಲ್ಯಾನ್‌ ಮಾಡಿದ್ದಳು ಎಂಬ ರಾಜಣ್ಣ ಹೇಳಿಕೆಯನ್ನು ಚೇತನ್‌ ಅಹಿಂಸ ಪ್ರಶ್ನೆ ಮಾಡಿದ್ದಾರೆ.

“‘ಬ್ಲೂ ಜೀನ್ಸ್ ಧರಿಸಿದ ಹುಡುಗಿ ನನ್ನನ್ನು ಹನಿ ಟ್ರ್ಯಾಪ್ ಮಾಡಲು ಬಂದಳು' ಎಂದು ಕೆ ಎಂ ರಾಜಣ್ಣರವರು ಹೇಳಿದ್ದಾರೆ. ಆಕೆ 'ಹನಿ ಟ್ರ್ಯಾಪ್'ಗೆ ಬಂದಿದ್ದಾಳೆಂದು ನಿಮಗೆ ಹೇಗೆ ಗೊತ್ತು? ಬ್ಲೂ ಜೀನ್ಸ್ ಧರಿಸುವ ಪ್ರತಿಯೊಬ್ಬ ಮಹಿಳೆಯೂ 'ಹನಿ ಟ್ರ್ಯಾಪಿಂಗ್' ಉದ್ದೇಶ ಹೊಂದಿದ್ದಾರೆಯೇ? ಪುರುಷಪ್ರಧಾನದ ಮನಸ್ಸು ಹೀಗೆ ಯೋಚಿಸುತ್ತದೆ. ರಾಜಣ್ಣ ಹೇಳುವುದು ನಿಜವಾಗಿದ್ದರೆ, ಸುದ್ದಿಗಳಿಗಾಗಿ ತನ್ನನ್ನು ತಾನು ಬಲಿಪಶು ಮಾಡಿಕೊಳ್ಳುವ ಬದಲು ಈ ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು” ಎಂದು ಚೇತನ್‌ ಅಹಿಂಸ ಹೇಳಿದ್ದಾರೆ. 

ʼಬೆಳ್ತಂಗಡಿಯಲ್ಲಿ 346 ಅಸಹಜ ಸಾವಾಗಿದೆ- ನಟ ಚೇತನ್‌ ಅಹಿಂಸ ಸ್ಫೋಟಕ ಹೇಳಿಕೆ!


“ನನ್ನ ಮೇಲೆಯೂ ಹನಿಟ್ರ್ಯಾಪ್ ಆಗಿದೆ. ಈ ಬಗ್ಗೆ ಇಂದು ಗೃಹ ಸಚಿವರಿಗೆ ದೂರು ನೀಡ್ತೀನಿ. ನನಗೆ ಎರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಓರ್ವ ಹುಡುಗ ಎರಡು ಬಾರಿ ಬಂದಿದ್ದ. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು” ಎಂದು ಸಹಕಾರ ಸಚಿವರು ಹೇಳಿದ್ದರು. 

ಇತ್ತೀಚೆಗೆ  ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿ,  “ಹನಿಟ್ರ್ಯಾಪ್ ಬಗ್ಗೆ ದೂರು ಕೊಡ್ತೀನಿ. ಉನ್ನತ ಮಟ್ಟದ ತನಿಖೆ ಆಗಬೇಕು. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಗೃಹ ಸಚಿವರಿಗೆ ನಾನು ದೂರು ಕೊಡ್ತೀನಿ. ನಿರಂತರ ಕಾರ್ಯಕ್ರಮವಿದ್ದ ಕಾರಣ ಇಷ್ಟು ದಿನ ನನಗೆ ದೂರು ಕೊಡೋಕೆ ಆಗಿರಲಿಲ್ಲ. ನಾನೇ ಇಂದು ಕೂತು ದೂರು ರೆಡಿ ಮಾಡಿದ್ದೇನೆ” ಎಂದಿದ್ದಾರೆ. 

ದೂರು ಬಂದ್ರೆ ಹನಿಟ್ರ್ಯಾಪ್‌ ತನಿಖೆ ನಡೆಸಿ : ಸಿಎಂಗೆ ಖರ್ಗೆ ಸೂಚನೆ! 48 ರಾಜಕಾರಣಿಗಳಿಗೆ ಬಲೆ ಹಾಕಿದ ಆ ಖತರ್ನಾಕ್ ಯಾರು?

“ಗೃಹ ಸಚಿವ ಪರಮೇಶ್ವರ್ ಅವರು ಎಲ್ಲಿದ್ದಾರೆ ಅಂತ ನೋಡಿ ಅಲ್ಲಿಗೆ ಹೋಗಿ ದೂರು ಕೊಡ್ತೀನಿ. ನನ್ನ ಬಳಿ ಹನಿಟ್ರ್ಯಾಪ್‌ ಕುರಿತು ಯಾವುದೇ ದಾಖಲೆ ಇಲ್ಲ, ಆದರೆ ಒಟ್ಟು ಮೂರು ಪುಟ ಇರುವ ದೂರು ಕೊಡ್ತೀನಿ. ನನ್ನ ಬೆಂಗಳೂರು ಮನೇಲಿ ಸಿಸಿಟಿವಿ ಇರಲಿಲ್ಲ. ಆದ್ದರಿಂದ ಸಿಸಿಟಿವಿ ವಿಡಿಯೋ ಕೂಡ ಇಲ್ಲ. ಯಾರು ಬಂದು ಹೋದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡ್ತೀನಿ. ಅಪರಿಚಿತರು ಅಂತ ದೂರಿನಲ್ಲಿ ಹೇಳಿದ್ದೇನೆ” ಎಂದು ರಾಜಣ್ಣ ಹೇಳಿದ್ದಾರೆ. 

“ಹನಿಟ್ರ್ಯಾಪ್ ಮಾಡುವ ಉದ್ದೇಶದಿಂದ ನನ್ನ ಮನೆಗೆ ಎರಡು ಸಲ ಓರ್ವ ಹುಡುಗ ಬೇರೆ ಬೇರೆ ಹುಡುಗಿಯರನ್ನು ಕರೆದುಕೊಂಡು ಬಂದಿದ್ದ. ಮೊದಲ ಬಾರಿ ನಾನು ಹೈಕೋರ್ಟ್ ವಕೀಲ ಎಂದು ಬಂದು ಪರಿಚಯಿಸಿಕೊಂಡರು. 2ನೇ ಬಾರಿ ವಕೀಲ ಅಂತ ಪರಿಚಯಿಸಿಕೊಂಡಿದ್ದರು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿತೀನಿ” ಎಂದು ರಾಜಣ್ಣ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌