ರಚನಾ ಹೆಗಡೆ ಜತೆ ನಟಚೇತನ್‌ ಚಂದ್ರ ಮದುವೆ

Published : Apr 18, 2017, 06:09 AM ISTUpdated : Apr 11, 2018, 12:41 PM IST
ರಚನಾ ಹೆಗಡೆ ಜತೆ ನಟಚೇತನ್‌ ಚಂದ್ರ ಮದುವೆ

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮುಹೂರ್ತದಲ್ಲಿ ಚೇತನ್‌ ಚಂದ್ರ ಹಾಗೂ ರಚನಾ ಹೆಗಡೆ ಹೊಸ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರು: ನಟ ಚೇತನ್‌ ಚಂದ್ರ ತಮ್ಮ ಬಹು ದಿನಗಳ ಗೆಳತಿ ರಚನಾ ಹೆಗಡೆ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಚೇತನ್‌ ಚಂದ್ರ ಹಾಗೂ ರಚನಾ ಹೆಗಡೆ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿ ಎರಡೂ ಮನೆಯವರಿಗೂ ಒಪ್ಪಿಗೆ ಆಗಿದ್ದರಿಂದ ಇದೊಂದು ರೀತಿಯಲ್ಲಿ ಸಾಂಪ್ರದಾ​ಯಿಕವಾಗಿ ನಡೆದ ಪ್ರೇಮ ವಿವಾಹ ಎನ್ನಬಹುದು.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮುಹೂರ್ತದಲ್ಲಿ ಚೇತನ್‌ ಚಂದ್ರ ಹಾಗೂ ರಚನಾ ಹೆಗಡೆ ಹೊಸ ಜೀವನಕ್ಕೆ ಕಾಲಿಟ್ಟರು. ಇವರ ಮದುವೆಗೆ ಎರಡೂ ಕುಟುಂಬಗಳ ಬಂಧುಗಳು ಹಾಗೂ ಸ್ನೇಹಿತರು ಸಾಕ್ಷಿಯಾಗಿದ್ದರು. ‘ಪಿಯುಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟನಟ ಚೇತನ್‌ ಚಂದ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ನಟ ಯಶ್‌ ಜತೆಗೆ ನಟಿಸಿದ ‘ರಾಜಧಾನಿ' ಹಾಗೂ ‘ಪ್ರೇಮಿಸಂ' ಚಿತ್ರಗಳು. ಈ ಚಿತ್ರಗಳ ನಂತರ ಹುಚ್ಚುಡುಗ್ರು, ಕುಂಭರಾಶಿ, ಪ್ಲಸ್‌, ಜಾತ್ರೆ ಮುಂತಾದ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶ್ರೀರಾಮ ಹಿಂದು ಅಲ್ಲ, ಆತ ಮುಸ್ಲಿಂ ಎಂದ ಟಿಎಂಸಿ ಶಾಸಕ, ಬಿಜೆಪಿ ತಿರುಗೇಟು!
ಎರಡು ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯ: ದೇಹದಲ್ಲಿತ್ತು 69 ಬುಲೆಟ್