ಪುಟಾಣಿ ಟಿಕ್‌ಟಾಕ್ ಸ್ಟಾರ್ ಇನ್ನಿಲ್ಲ: ಅಭಿಮಾನಿಗಳ ಕಂಬನಿಗೆ ಕೊನೆಯಿಲ್ಲ!

Published : Jul 27, 2019, 05:07 PM ISTUpdated : Jul 27, 2019, 05:18 PM IST
ಪುಟಾಣಿ ಟಿಕ್‌ಟಾಕ್ ಸ್ಟಾರ್ ಇನ್ನಿಲ್ಲ: ಅಭಿಮಾನಿಗಳ ಕಂಬನಿಗೆ ಕೊನೆಯಿಲ್ಲ!

ಸಾರಾಂಶ

ಟಿಕ್‌ಟಾಕ್ ಪುಟಾಣಿ ಸ್ಟಾರ್ ಆರುಣಿ ಕುರುಪ್ ಇನ್ನಿಲ್ಲ| ಮೆದುಳು ಸಂಬಂಧಿ ರೋಗದಿಂದ ಮೃತಪಟ್ಟ 9 ವರ್ಷದ ಆರುಣಿ| ತನ್ನ ಮುದ್ದಾದ  ವಿಡಿಯೋಗಳಿಂದ ಫೇಮಸ್ ಆಗಿದ್ದ ಆರುಣಿ| ಕೇರಳಿಗರ ಹೃದಯ ಕದ್ದಿದ್ದ ಆರುಣಿ ನಿಧನಕ್ಕೆ ಅಭಿಮಾನಿಗಳ ಕಂಬನಿ|

ತಿರುವನಂತಪುರಂ(ಜು.27): ಕೇರಳದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ 9 ವರ್ಷದ ಆರುಣಿ ಕುರುಪ್ ಮೃತಪಟ್ಟಿದ್ದಾಳೆ. ಮೆದುಳು ಸಂಬಂಧಿ ರೋಗದಿಂದ ಬಳಲುತ್ತಿದ್ದ ಆರುಣಿ, ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ತನ್ನ ಮುದ್ದಾದ ಮಾತುಗಳಿಂದಲೇ ಕೇರಳಿಗರ ಜನರ ಮನಸೂರೆಗೊಂಡಿದ್ದ ಆರುಣಿ, ಟಿಕ್‌ಟಾಕ್ ವಿಡಿಯೋ ಮೂಲಕ ಕೇರಳದ ಸ್ಟಾರ್ ಆಗಿ ಹೊರಹೊಮ್ಮಿದ್ದಳು.

ಆದರೆ ಗುರುತಿಸಲಾಗದ ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗಿದ್ದ ಆರುಣಿ, ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ SIT ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನು ಆರುಣಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಆಕೆಯ ಅಭಿಮಾನಿಗಳು, ಆರುಣಿ ತನ್ನ ವಿಡಿಯೋಗಳಿಂದ ಕೇರಳಿಗರ ಮನದಲ್ಲಿ ಜೀವಂತವಾಗಿರಲಿದ್ದಾಳೆ ಎಂದು ಕಂಬನಿ ಮಿಡಿದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ