
ಬೆಳಗಾವಿ(ಡಿ.18): ಮೇಟಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಸಂತ್ರಸ್ಥ ಮಹಿಳೆ ವಿಜಯಕ್ಷ್ಮಿಯ ಕುರಿತಾಗಿ ಮತ್ತೊಂದು ರಹಸ್ಯ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆಯ ಪತಿ ಬಸವರಾಜ್ ಕಳೆದ ಎರಡು ತಿಂಗಳ ಹಿಂದೆಯೇ ಅತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಬಚಾವಾಗಿರುವ ಸಂಗತಿ ಬಯಲಾಗಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಕ್ಟೋಬರ್ 16ರಂದು ಆತ್ಮಹತ್ಯೆಗೆ ಮುಂದಾಗಿ ದಾಖಲಾಗಿದ್ದ, ಇದಕ್ಕೆ ಪತ್ನಿಯ ನಡವಳಿಕೆಯೇ ಕಾರಣವೆನ್ನಲಾಗುತ್ತಿದೆ.
ಬಸವರಾಜು ಮೂರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಂತೆ. ವೈದ್ಯರು ಅಕ್ಟೋಬರ್ 20ರವರೆಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿ ಬಳಿಕ ಡಿಸ್'ಚಾರ್ಜ್ ಮಾಡಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ವೈದ್ಯರೂ ಪೋಲಿಸರಿಗೂ ಮಾಹಿತಿಯನ್ನು ನೀಡಿದ್ದರು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಸಂತ್ರಸ್ಥ ಮಹಿಳೆ ವರ್ತನೆಯಿಂದಲೇ ಗಂಡ ಆತ್ಮಹತ್ಯೆಗೆ ಮುಂದಾಗಿದ್ದಾನೆಂಬ ಸಂಗತಿ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.