
ಬೆಂಗಳೂರು(ಡಿ.18): ಒಂದು ವರ್ಗದಲ್ಲಿ ಒಳ್ಳೆದು ಕೆಟ್ಟದ್ದು ಇರುವಂತೆ ಪೊಲೀಸ್ ಇಲಾಖೆಯಲ್ಲೂ ಆ ತರಹದ ವ್ಯಕ್ತಿತ್ವದವರು ಇದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿ. ತಪ್ಪು ಮಾಡಿದವರನ್ನು ತಿದ್ದುವ ಜವಾಬ್ದಾರಿ ಪೊಲೀಸರಿಗೆ ನೀಡಿದೆ. ಆದರೆ ಪೊಲೀಸರೇ ದೌರ್ಜ್ಯನ್ಯಕ್ಕೆ ನಿಂತರೆ? ಈ ಘಟನೆ ಸತ್ಯ ಎಂದಾದಲ್ಲಿ ಆರಕ್ಷಕರು ತಲೆ ತಗ್ಗಿಸಲೇಬೇಕಾಗುತ್ತೆ. ಭ್ರಷ್ಟರನ್ನೇ ಬಲೆಗೆ ಬೀಳಿಸಬೇಕಿದ್ದ ಪೊಲೀಸರೇ ಭ್ರಷ್ಟಾಚಾರಕ್ಕಿಳಿದರೆ ಯಾರು ತಾನೆ ಪೊಲೀಸರಿಗೆ ಗೌರವ ಕೊಡುತ್ತಾರೆ. ಅಷ್ಟಕ್ಕೂ ಈಗ ಇಂಥದ್ದೊಂದು ಕಳಂಕ ಕೇಳಿ ಬಂದಿದ್ದು ಬೆಂಗಳೂರಿನ ಜಯನಗರ ಠಾಣೆ ಪಿಎಸ್ಐ ಜಯನಗರ ಪಿ ಎಸ್ ಐ ಶಿವಕುಮಾರ್
ನವೆಂಬರ್ 27ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಯೋಗೇಶ್ ಎಂಬಾತ ಕಾಣೆಯಾಗಿದ್ದಾನೆ ಎನ್ನುವ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪಿಎಸ್'ಐ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ಬೆನ್ನತ್ತಿದಾಗ ಯೋಗೇಶ್ ಹುಡುಗಿ ವಿಚಾರವಾಗಿ ಫಾರ್ಮ್ ಹೌಸ್'ನಲ್ಲಿ ಭೀಕರವಾಗಿ ಕೊಲೆಯಾಗಿದ್ದ ಎನ್ನುವುದು ಖಚಿತವಾಗಿತ್ತು. ಈ ಪ್ರಕರಣದಲ್ಲಿ ಬಂಧನವಾಗಿದ್ದು, ಪ್ರತಾಪ್.
ಈ ಪ್ರಕರಣ ತನಿಖೆ ನಡೆಸುತ್ತಿದ್ದ ಪಿಎಸ್ಐ ಶಿವಕುಮಾರ್ ಪ್ರತಾಪ್'ನಿಂದ 80 ಸಾವಿರ ನಗದು ಸೇರಿ ಒಂದಷ್ಟು ವಸ್ತು ತೆಗೆದುಕೊಂಡಿದ್ದರಂತೆ . ಅಷ್ಟೇ ಅಲ್ಲದೆ ಪ್ರತಾಪ್ ಬಳಿ ಇದ್ದ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ತೆಗೆದುಕೊಂಡು ಗನ್'ನಿಂದ ಶೂಟ್ ಮಾಡುವುದಾಗಿ ಬೆದರಿಸಿ ಪಿನ್ಕೋಡ್ ಪಡೆದು ಪಿಎಸ್ಐ ಶಿವಕುಮಾರ್ 1 ಲಕ್ಷದ 60 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎನ್ನುವುದು ಪ್ರತಾಪ್ ತಂದೆ ಶಿವಕುಮಾರ್ ಆರೋಪ .
ಹಣ ಡ್ರಾ ಮಾಡಿಕೊಂಡ ಬ್ಯಾಂಕ್ ಡಾಕ್ಯೂಮೆಂಟ್ ಸಮೇತ ಪಿಎಸ್ಐ ವಿರುದ್ಧ ಪ್ರತಾಪ್ ತಂದೆ ಕಮೀಷನರ್'ಗೆ ದೂರು ನೀಡಿದ್ದಾರೆ. ಆರೋಪಿಯಿಂದಲೇ ಪಿಎಸ್ಐ ದೋಚಿದ ಪ್ರಕರಣವೀಗ ಕಮಿಷನರ್ ಕಚೇರಿ ತಲುಪಿದೆ. ಇದರ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ. ಆರೋಪ ನಿಜವೇ ಆಗಿದ್ದಲ್ಲಿ ಪೊಲೀಸ್ ಇಲಾಖೆಗೇ ಕಪ್ಪು ಚುಕ್ಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.