ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

By Web DeskFirst Published Dec 11, 2018, 4:04 PM IST
Highlights

ಪಂಚ ರಾಜ್ಯಗಳ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚು ಮಾಡುತ್ತಲೇ ಹೋಗುತ್ತಿದೆ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು. ಇಡೀ ದೇಶದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಬಲ ತುಂಬಿದ್ದು ಕರ್ನಾಟಕ ಎಂದರೆ ಒಪ್ಪಿಕೊಳ್ಳಲೇಬೇಕು.

ಬೆಂಗಳೂರು(ಡಿ.11) ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಂದ ಸಮಯ. ಅಧಿಕಾರದಲ್ಲಿದ್ದ ಕಾಂಗ್ರೆಸ್  ಬಹುಮತ ಕಳೆದುಕೊಂಡಿತ್ತು. ಆದರೆ ಜೆಡಿಎಸ್‌ನೊಂದಿಗೆ ಸೇರಿ ಸರ್ಕಾರವನ್ನು ರಚನೆ ಮಾಡಿತು. ಈಗ ದೋಸ್ತಿ ಸರ್ಕಾರ ಆಡಳಿತ ಆರಂಭಿಸಿ ಆರು ತಿಂಗಳು ಕಳೆದಿದೆ.

ಆದರೆ ಈ ಆರು ತಿಂಗಳಿನಲ್ಲಿ ಸಾಕಷ್ಟು ರಾಜಕಾರಣದ ಬೆಳವಣಿಗೆಗಳು ನಡೆದು ಹೋಗಿವೆ. ಅಧಿಕಾರದಿಂದ ದೂರ ಎಂದುಕೊಂಡಿದ್ದ ಕಾಂಗ್ರೆಸ್ ಅಧಿಕಾರದಲ್ಲಿ ಪಾಲುದಾರನಾಗಿ ಮತ್ತೆ ಸಂಘಟನೆಯಲ್ಲಿ ತೊಡಗಿಕೊಂಡಿತು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಆಸೆಗೆ ಅಂದೇ ತಣ್ಣೀರು ಬಿದ್ದಿತ್ತು.

ವಿಧಾನಸಭೆ ಫಲಿತಾಂಶ: ಕರ್ನಾಟಕದ ವಿಧಾನಸಭೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 104 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮೊದಲಿಗೆ ಬಿಜೆಪಿಯ ಬಿಎಸ್‌ ಯಡಿಯೂರಪ್ಪ ಸಿಎಂ ಆಗಿಯೂ ಪ್ರಮಾಣ ಸ್ವೀಕರಿಸಿದರು. ಆದರೆ ಬಹುಮತವಿಲ್ಲದೇ ಒಂದೆ ದಿನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದಾದ ಮೇಲೆ ತರಾತುರಿಯಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ಮಾಡಿದವು. 80 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಮತ್ತು 38 ಸ್ಥಾನ ಗಳಿಸಿದ್ದ ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂತು. ಬೇಷರತ್‌ಆಗಿ ಬೆಂಬಲ ನೀಡಿದ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನು ಕಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಆದಗರೆ ಅಧಿಕಾರ ಹಂಚಿಕೆಯಲ್ಲಿ ಪಾಲುದಾರನಾದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಸ್ಥಿತಿಯಿಂದ ಪಾರಾಯಿತು.

ಲೋಕಸಭೆ ಮೇಲೆ ಇಂದಿನ ಫಲಿತಾಂಶದ ಎಫೆಕ್ಟ್ ಏನು?

ಉಪಚುನಾವಣೆ ಗೆಲುವು: ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡೇ ಬಿಜೆಪಿ ವಿರುದ್ಧ ಅಖಾಡಕ್ಕೆ ಧುಮುಕಿತು. ಆದರೆ ಗೆಲುವು ಕಂಡಿತು.

ಬಳ್ಳಾರಿ ಲೋಕಸಭೆ ಮತ್ತು ಜಮಖಂಡಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಉಸ್ತುವಾರಿ ಹೊತ್ತಿದ್ದ ವೇಣುಗೋಪಾಲ್ ಅವರ ಕೆಲವೊಂದು ತಂತ್ರಗಾರಿಕೆ ಯಶ ಕಂಡಿತು. ಈ ತಂತ್ರಗಾರಿಕೆಯನ್ನೇ ಅವರು ಇತರ ರಾಜ್ಯಗಳಲ್ಲಿ ಮುಂದುವರಿಸಿದರು.

ಮಹಾಘಟಬಂಧನಕ್ಕೆ ಮೂಲ: ಮುಳುಗಿ ಹೋಗುತ್ತಿದ್ದ ಕಾಂಗ್ರೆಸ್‌ಗೆ ಒಂದು ಅರ್ಥದಲ್ಲಿ ಬೂಸ್ಟ್‌ ನೀಡಿದ್ದು ಕರ್ನಾಟಕ. ಸಿಎಂ ಪ್ರಮಾಣ ವಚನಕ್ಕೆ ವಿವಿಧ ಪಕ್ಷದ ನಾಯಕರು ಎಲ್ಲ ಕಡೆಯಿಂದ ಆಗಮಿಸಿದ್ದರು. ಶಕ್ತಿ ಪ್ರದರ್ಶನ ಮಾಡಿದ್ದು ಅಲ್ಲದೇ ಮೋದಿ ಮತ್ತು ಬಿಜೆಪಿ ವಿರುದ್ಧ ಸಮರ ಸಾರಿದರು.

ಒಟ್ಟಿನಲ್ಲಿ ಅಧಿಕಾರ ಕಳೆದುಕೊಂಡು ಬದಿಗೆ ಸರಿಯುತ್ತಿದ್ದ ಕಾಂಗ್ರೆಸ್‌ಗೆ ಮತ್ತೆ ಒಂದು ಚೂರು ಚೈತನ್ಯ ತುಂಬಿದ್ದು ಕರ್ನಾಟಕ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರಿಗೆ ಈ ಫಲಿತಾಂಶ ಸ್ಪಷ್ಟ ಉತ್ತರ ನೀಡಿದೆ. ಬಿಜೆಪಿ ಗೆಲುವಿನ ಅಶ್ವಮೇಧ ಕುದುರೆ ಕಟ್ಟಿಹಾಕಿದ ಕೀರ್ತಿಯನ್ನು ಈ ಎಲ್ಲ ಕಾರಣದಿಂದ ಕರ್ನಾಟಕವೇ ಪಡೆದುಕೊಳ್ಳಲಿದೆ.

ಶಿವಮೊಗ್ಗದಲ್ಲಿ ಕುಸಿದ ಬಿಜೆಪಿ: ಶಿವಮೊಗ್ಗ ಲೋಕಸಭೆಗೆ ಉಪಚುನಾವಣೆ ನಡೆದಾಗ ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಅವರ ಪುತ್ರರೇ ಕಣಕ್ಕೆ ಇಳಿದಿದ್ದರು.  ಫಲಿತಾಂಶ ಬಂದಾಗ ಬಿಜೆಪಿಗೆ ವಿಯಯಮಾಲೆ ಏನೋ ಸಿಕ್ಕಿತ್ತು. ಆದರೆ ಗೆಲುವಿನ ಅಂತರ  ಮಾತ್ರ 50 ಸಾವಿರಕ್ಕೆ ಇಳಿದಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್‌ನಿಂದ ಮಧು ಬಂಗಾರಪ್ಪಗೆ ಟಿಕೆಟ್ ನೀಡಿದ್ದರೂ ದೋಸ್ತಿಗಳ ಸಂಘಟನೆ ಬಹಳಷ್ಟು ಮತವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಬುಟ್ಟಿಗೆ ಹಾಕಿತ್ತು.

'ಕೈ ಮುಕ್ತ ಭಾರತಕ್ಕೆ ಕೈ ಹಾಕಿ ತಾವೇ ಮುಕ್ತರಾಗುತ್ತಿದ್ದಾರೆ'

ಪಂಚ ರಾಜ್ಯಗಳ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚು ಮಾಡುತ್ತಲೇ ಹೋಗುತ್ತಿದೆ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು. ಇಡೀ ದೇಶದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಬಲ ತುಂಬಿದ್ದು ಕರ್ನಾಟಕ ಎಂದರೆ ಒಪ್ಪಿಕೊಳ್ಳಲೇಬೇಕು.

click me!